fbpx
ಸಮಾಚಾರ

ಡಬ್ಬಿಂಗ್ ಮುಗಿಸಿದ ಅಪ್ಪು ಬಾಸ್: ಸದ್ಯದಲ್ಲೇ ಬಿಡುಗಡೆಯಾಗಲಿದೆ ಯುವರತ್ನ ಟೀಸರ್.

ರಾಜಕುಮಾರದಂತಹ ಪರಿಪೂರ್ಣ ಹಿಟ್ ಸಿನಿಮಾವನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಪುನೀತ್ ರಾಜಕುಮಾರ್ ಮತ್ತು ಸಂತೋಷ್ ಆನಂದರಾಮ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ‘ಯುವರತ್ನ’ ಸಿನಿಮಾ ಈಗಾಗಲೇ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳು ಬೆಳೆದುಕೊಳ್ಳುತ್ತಿವೆ. ಚಿತ್ರದ ಮೊದಲ ಟೀಸರ್ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಟೀಸರ್ ರಿಲೀಸ್ ಆಗುವುದು ಪಕ್ಕಾ. ಏಕೆಂದರೆ ಪುನೀತ್ ಟೀಸರ್‍ನ ಡಬ್ಬಿಂಗ್ ಮುಗಿಸಿದ್ದಾರೆ.

 

 

ಡಬ್ಬಿಂಗ್ ಮಾಡುವ ಫೋಟೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಪುನೀತ್ ವಿಷಯ ಹಂಚಿಕೊಂಡಿದ್ದಾರೆ. ಟೀಸರ್ ಕಟ್ ಆಗಿದ್ದು, ಈಗ ಪುನೀತ್ ಕೂಡ ಧ್ವನಿ ನೀಡಿದ್ದಾರೆ. ಹಾಗಾಗಿ, ಸದ್ಯದಲ್ಲಿಯೇ ಟೀಸರ್ ಬಿಡುಗಡೆ ಆಗಲಿದೆ. ಮೂಲಗಳ ಪ್ರಕಾರ ದಸರಾ ಹಬ್ಬಕ್ಕೆ ಯುವರತ್ನ ಚಿತ್ರದ ಜಬರ್ದಸ್ತ್ ಟೀಸರ್ ಬಿಡುಗಡೆಯಾಗಲಿದೆಯಂತೆ.

ಅಂದಹಾಗೆ ರಾಜಕುಮಾರ ಚಿತ್ರವನ್ನು ನಿರ್ಮಾಣ ಮಾಡಿದ್ದ ಹೊಂಬಾಳೆ ಪ್ರೊಡಕ್ಷನ್ ಅವರ ವಿಜಯ್ ಕಿರಂಗದೂರು ಅವರೇ ಮತ್ತೆ ಪುನೀತ್ ಮತ್ತು ಸಂತೋಷ್ ಜೋಡಿಯ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ದೊಡ್ಡ ಬಜೆಟ್’ನಲ್ಲಿ ಚಿತ್ರ ನಿರ್ಮಾಣವಾಗಲಿದ್ದು ಈ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ತಮನ್ ಕೆಲಸ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top