fbpx
ಸಮಾಚಾರ

ಸರ್ಕಾರೀ ದೇವಸ್ಥಾನಗಳಲ್ಲಿ ದಲಿತ/ಹಿಂದುಳಿದ ವರ್ಗದವರಿಗೂ ಅರ್ಚಕ ಹುದ್ದೆ- ಆಂಧ್ರ ಸಿಎಂ ಜಗನ್​​ ಐತಿಹಾಸಿಕ ನಿರ್ಧಾರ!

ಸಮಾಜದಲ್ಲಿನ ಜಾತಿ ಗೋಡೆಯನ್ನು ಕೆಡವಲು ಮುಂದಾಗಿರುವ ಸಿಎಂ ಜಗನ್ ​ಮೋಹನ್ ರೆಡ್ಡಿ ನೇತೃತ್ವದ​ ಆಂಧ್ರಪ್ರದೇಶ ಸರ್ಕಾರ, ರಾಜ್ಯದ ಎಲ್ಲಾ ಸರ್ಕಾರಿ ದೇವಾಲಯಗಳಲ್ಲಿ ಶೇ.50 ರಷ್ಟು ಮೀಸಲಾತಿ ಜಾರಿಗೊಳಿಸುವ ನಿರ್ಣಯ ತೆಗೆದುಕೊಳ್ಳುವ ಮೂಲಕ ಇತಿಹಾಸ ಒಂದಕ್ಕೆ ಸಾಕ್ಷಿಯಾಗಿದೆ.

ಆಂಧ್ರಪ್ರದೇಶ ಧಾರ್ಮಿಕ ದತ್ತಿ ಇಲಾಖೆಗೆ ಸೇರುವ ದೇವಸ್ಥಾನಗಳ ಅರ್ಚಕ, ಆಡಳಿತ ಮಂಡಳಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಶೇ 50ರಷ್ಟು ಮೀಸಲಾತಿ ಸಿಗಲಿದೆ. ಇದರಿಂದ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಉದ್ಯೋಗ ಅವಕಾಶ ಹೆಚ್ಚಳವಾಗಲಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ದಲಿತರು ಸೇರಿದಂತೆ ಬ್ರಾಹ್ಮಣರೇತರರು ಸಹ ದೇವಸ್ಥಾನದ ಉನ್ನತ ಹುದ್ದೆಗೆ ಏರುವ ಅವಕಾಶ ಕಲ್ಪಿಸಿದಂತಾಗಿದೆ.

ಅಲ್ಲದೇ ಸಾಮಾನ್ಯ ಮತ್ತು ಮೀಸಲು ವಿಭಾಗದಲ್ಲಿ ದೇವಾಲಯದ ಆಡಳಿತ ಮಂಡಳಿಯ ಶೇ.50ರಷ್ಟುಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಅಂದರೆ, ತಿರುಮಲ ತಿರುಪತಿ ದೇವಾಸ್ಥಾನಂನ 25 ನಾಮನಿರ್ದೇಶಿತ ಸದಸ್ಯರ ಪೈಕಿ ಪರಿಶಿಷ್ಟಜಾತಿ ಹಾಗೂ ಹಿಂದುಳಿದ ವರ್ಗದವರು ಸೇರಿದಂತೆ 13 ಮಹಿಳೆಯರು ಸ್ಥಾನ ಪಡೆಯಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top