fbpx
ಸಮಾಚಾರ

“ಯಾರು ನೋವು ನೀಡಿದ್ದಾರೋ ಅವರೇ ಅನುಭವಿಸುತ್ತಾರೆ” ದರ್ಶನ್ ಪತ್ನಿ ಟ್ವೀಟ್ ಪಂಚ್ ನೀಡಿದ್ದು ಯಾರಿಗೆ?

ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಇತ್ತೀಚಿಗೆ ಭಾರಿ ಸುದ್ದಿಯಲ್ಲಿದ್ದಾರೆ. ಕಳೆದ ತಿಂಗಳು ತಮ್ಮ ಟ್ವಿಟ್ಟರ್ ಖಾತೆಯಲ್ಲಿದ್ದ ಪತಿ ದರ್ಶನ್ ಉಪನಾಮವನ್ನು ತೆಗೆದು ದರ್ಶನ್ ಅವರನ್ನೇ ಆನ್ ಫಾಲೋ ಮಾಡಿ ಸುದ್ದಿಯಾಗಿದ್ದ ವಿಜಯಲಕ್ಷ್ಮಿ ಇಂದು ಟ್ವೀಟ್ ಒಂದನ್ನು ಮಾಡಿದ್ದು ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ.

 

 

‘ಕರ್ಮಕ್ಕೆ ದ್ವೇಷದ ಅವಶ್ಯಕತೆಯಿಲ್ಲ. ಸುಮ್ಮನೆ ಕಾಯುತ್ತಾ ಕುಳಿತಿರಿ. ನಿಮಗೆ ಯಾರು ನೋವು ನೀಡಿದ್ದಾರೋ ಅವರು ಅವರಾಗಿಯೇ ನೋವ ಅನುಭವಿಸುತ್ತಾರೆ. ಒಂದು ವೇಳೆ ನೀವು ಅದೃಷ್ಟ ಶಾಲಿಗಳಾಗಿದ್ದರೆ, ಅದನ್ನು ನೋಡುವ ಅವಕಾಶವನ್ನು ದೇವರು ನಿಮಗೆ ನೀಡುತ್ತಾನೆ’ ಅನ್ನುವ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ನಲ್ಲಿ ಸಂಡೇ ಕೋಟ್‌ ಅಂಥ ಕ್ಯಾಪ್ಶನ್ ನೀಡಿದ್ದಾರೆ.

ವಿಜಯಲಕ್ಷ್ಮೀ ಅಷ್ಟಕ್ಕೂ ಈ ಮಾತನ್ನು ಹೇಳಿದ್ದು ಯಾರಿಗೆ? ನಿಜಕ್ಕೂ ಅವರಿಗೆ ನೋವಾಗಿದೆಯಾ? ಅನುಭವದ ಆಧಾರದ ಮೇಲೆ ಈ ಮಾತನ್ನು ಹೇಳುತ್ತಿದ್ದಾರಾ? ಸುಮ್ಮನೆ ಮೋಟಿವೇಶನ್ ಆಧಾರದ ಮೇಲೆ ಟ್ವೀಟ್ ಮಾಡಿದ್ದಾರೋ ಹೇಗೆ? ಎಂಬಿತ್ಯಾದಿ ಪ್ರಶ್ನೆಗಳು ಚಾಲೆಂಜಿಂಗ್ ಸ್ಟಾರ್ ಪತ್ನಿ ಟ್ವೀಟ್ ಸುತ್ತಮುತ್ತ ಏಳುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top