fbpx
ಸಮಾಚಾರ

ಹರ್ಷಿಕಾ ಪೂಣಚ್ಚ ತಂದೆ ವಿಧಿವಶ! ತಂದೆಯನ್ನು ಕಳೆದುಕೊಂಡ ದುಃಖದಲ್ಲಿ ನಟಿ.

ಕನ್ನಡ, ತೆಲುಗು, ತಮಿಳು, ಕೊಂಕಣಿ ಸಿನಿಮಾಗಳಲ್ಲಿ ಅಭಿನಯಿಸಿದ್ದ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಛ ಅವರ ತಂದೆ ಉದ್ದಪಂಡ ಪೂಣಚ್ಛ ಇಹಲೋಕ ತ್ಯಜಿಸಿದ್ದಾರೆ. ಇಂದು ಬೆಳಿಗ್ಗೆ ನಿವಾಸದಲ್ಲಿ 8.15ಗೆ ಅವರು ತೀರಿಕೊಂಡಿದ್ದಾರೆ.

68 ವರ್ಷದ ಉದ್ದಪಂಡ ಪೂಣಚ್ಚ ಅವರು ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಉದ್ದಪಂಡ ಅವರ ಸಣ್ಣ ಕರುಳಿನಲ್ಲಿ ರಂದ್ರ ಬಿದ್ದಿತ್ತು. ಇದರಿಂದ ಅವರಿಗೆ ಊಟ ಮಾಡಲು ಸಾಧ್ಯವಾಗದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ತಿಂಗಳ ಹಿಂದೆಯಷ್ಟೇ ಸರ್ಜರಿ ಕೂಡ ಆಗಿತ್ತು. ಇದರಿಂದ ಸ್ವಲ್ಪಮಟ್ಟಿಗೆ ಸುಧಾರಿಸಿಕೊಳ್ಳುವ ಸಂದರ್ಭದಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ.

ಅನಾರೋಗ್ಯದ ಕಾರಣ ಗಣನೀಯ ಪ್ರಮಾಣದಲ್ಲಿ ಅವರ ತೂಕ ಇಳಿದಿತ್ತು. ಇತ್ತೀಚೆಗೆ ಸ್ವಲ್ಪಮಟ್ಟಿಗೆ ಅವರು ಸುಧಾರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಆರೋಗ್ಯ ಸುಧಾರಿಸದೇ ಅವರು ಈ ಲೋಕದ ಯಾತ್ರೆ ಮುಗಿಸಿದ್ದಾರೆ.

ಇಂದು ವಿರಾಜಪೇಟೆ ಬಳಿಯ ಕುಮ್ಮೆತೋಡು ಪ್ರದೇಶದಲ್ಲಿ ಹರ್ಷಿಕಾ ತಂದೆಯ ಅಂತ್ಯಕ್ರಿಯೆ ನಡೆಯಲಿದೆ ಎಂದು ಹರ್ಷಿಕಾ ಪೂಣಚ್ಚ ಕುಟುಂಬಸ್ಥರು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top