fbpx
ಸಮಾಚಾರ

‘ಕನ್ನಡ ಭಾಷೆ ಮೇಲೆ ಪ್ರಹಾರ ಮಾಡಿದರೆ ನಾವು ಸಹಿಸಲ್ಲ’ ಸಚಿವ ಮಾಧುಸ್ವಾಮಿ.

ಕೇಂದ್ರ ಗೃಹ ಸಚಿವ ಅಮಿತ್ ಷಾ ತಮ್ಮ ಭಾಷಣದಲ್ಲಿ ಹಿಂದಿ ಭಾಷೆಯನ್ನು ಹೇರಿಕೆ ಮಾಡಬೇಕು ಎಂದು ಎಲ್ಲೂ ಹೇಳಿಲ್ಲ. ದೇಶಕ್ಕೊಂದು ಸ್ವಂತಭಾಷೆ ಬೇಕು, ಪರಕೀಯ ಭಾಷೆಗೆ ಒಳಗಾಗಬಾರದು ಎಂದಿದ್ದಾರಷ್ಟೇ ಎಂದು ಅಮಿತ್ ಷಾ ಹೇಳಿಕೆಯನ್ನು ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು “ಅಮಿತ್ ಷಾ ಅವರ ಭಾಷಣವನ್ನು ನಾನು ಸಂಪೂರ್ಣ ಕೇಳಿದ್ದೇನೆ. ಅವರು ಎಲ್ಲೂ ಹೇರಿಕೆ ವಿಚಾರ ಮಾತಾಡಿಲ್ಲ. ಪ್ರಾದೇಶಿಕ ಭಾಷೆಗಳ ಜೊತೆಜೊತೆಗೆ ದೇಶಕ್ಕೆ ಒಂದು ಸ್ವಂತ ಭಾಷೆ ಬೇಕು ಎಂದಿದ್ದಾರೆ ಅಷ್ಟೆ. ಹಾಗಂತ ಭಾಷೆ ಹೇರಿದರೆ ಯಾರೂ ಸಹಿಸಿಕೊಳ್ಳಲ್ಲ ಎಂದು ಹೇಳಿದರು.

ಇದೇ ವೇಳೆ ಟ್ರಾಫಿಕ್ ದಂಡ ಪರಿಷ್ಕರಣೆ ವಿಚಾರ ಮಾತನಾಡಿದ ಅವರು, ಮುಂದಿನ ಮೂರ್ನಾಲ್ಕು ದಿನದಲ್ಲಿ ದಂಡ ಪರಿಷ್ಕರಣೆ ಆಗಲಿದೆ ಎಂದು ಸ್ಪಷ್ಟಪಡಿಸಿದರು. ಸರ್ಕಾರಕ್ಕೆ ಆದಾಯ ಬರಲಿ ಎಂದು ದಂಡ ಹೆಚ್ಚಿಸಿದ್ದಲ್ಲ, ಜನರಿಗೆ ಭಯ ಬರಲಿ ಎಂದು ಹೆಚ್ಚಿಸಿದ್ದು. ದಂಡ ಹೆಚ್ಚಿಸಿರೋದ್ರಿಂದ ಪೊಲೀಸರ ಜೇಜು ತುಂಬಲಿದೆ ಅನ್ನೋದು ನನ್ನ ಅಭಿಪ್ರಾಯವಾಗಿದೆ ಹೀಗಾಗಿ ಶೀಘ್ರದಲ್ಲೇ ದಂಡ ಪರಿಷ್ಕರಣೆ ಆಗಲಿದೆ ಎಂದು ಅವರು ಸ್ಪಷ್ಟನೆ ನೀಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top