fbpx
ಸಮಾಚಾರ

ಮೆಜೆಸ್ಟಿಕ್ ಅಂಡರ್ ಪಾಸ್ ಅಕ್ರಮ ಅಂಗಡಿಗಳನ್ನು ತೆರವುಗೊಳಿಸಿರುವುದರಿಂದ ಕರವೇ ಮತ್ತು ಪೊಲೀಸರಿಗೆ ಆದ ನಷ್ಟ ಎಷ್ಟು?

ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದ್ದ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ರೈಲ್ವೆ ಸ್ಟೇಷನ್‌ಗೆ ಹೋಗುವ ಪಾದಚಾರಿ ಸುರಂಗಮಾರ್ಗ ಇದೀಗ ಫುಲ್ ಕ್ಲೀನ್ ಆಗಿದೆ. ಕಳೆದ ಒಂದು ವಾರದಲ್ಲಿ ಪಾದಚಾರಿ ರಸ್ತೆಯಲ್ಲಿ ಅಕ್ರಮವಾಗಿ ಅಂಗಡಿ ಇಟ್ಟುಕೊಂಡಿದ್ದ ವ್ಯಾಪಾರ ಮಳಿಗೆಗಳನ್ನು ಬಿಬಿಎಂಪಿ ತೆರವು ಮಾಡಿದೆ.

ಒಂದು ಕಾಲದಲ್ಲಿ ಅಲ್ಲಿನ ಅಂಡರ್ ಪಾಸ್ ಗಳನ್ನೂ ಸುಲಭವಾಗಿ ಒಂದೆಡೆಯಿಂದ, ಮತ್ತೊಂದೆಡೆಗೆ ಹೋಗಲು ಉಪಯೋಗಿಸುತ್ತಿದ್ದರು. ಆದ್ರೆ ಕೆಲವರ್ಷಗಳಿಂದ ಅಲ್ಲಿ ಅಕ್ರಮ, ಹಾಗು ಅನೈತಿಕ ಚಟುವಟಿಕೆಗಳೇ ಹೆಚ್ಚಾಗಿ ನಡೆಯುತ್ತಿತ್ತು. ಅದಕ್ಕೆ ಪೊಲೀಸರು ಬ್ರೇಕ್ ಹಾಕಲು ಪ್ರಯತ್ನಿಸಿದರೂ ಅದು ಆಗಿರಲಿಲ್ಲ. ಆದ್ರೆ ಇದೀಗ ಆ ಕೆಲಸವನ್ನು ಒಬ್ಬ ಆರ್ ಟಿ ಐ ಕಾರ್ಯಕರ್ತ ಮಾಡಿ ತೋರಿಸಿದ್ದಾರೆ.

ಇತ್ತೀಚೆಗೆ ಹೈಕೋರ್ಟ್‌ನಲ್ಲಿ ಆರ್‌ಟಿಐ ಕಾರ್ಯಕರ್ತ ರವಿಕುಮಾರ್ ಕಂಚನಹಳ್ಳಿ ಹೂಡಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಕಾರಣಕ್ಕೆ ದಶಕಗಳ ಕಾಲದ ಅಸಹ್ಯ ಮತ್ತು ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ. ಅಕ್ರಮ ಮಳಿಗೆ ತೆರವುಗೊಳಿಸಲು ಕೋರಿ ಸಾಮಾಜಿಕ ಕಾರ್ಯಕರ್ತ ಕನಕಪುರದ ಕಂಚನಹಳ್ಳಿ ರವಿಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿದೆ. ಇದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ರವಿಕುಮಾರ್ ಅವರ ಕಾರ್ಯಕ್ಕೆ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.

ಅಂಡರ್‌ ಪಾಸ್‌ನಲ್ಲಿ ಹೋಗುತ್ತಿರುವವರಿಗೆ ವ್ಯಾಪಾರಿಗಳು ಹಾಗೂ ತೃತೀಯ ಲಿಂಗಿಗಳು ಪ್ರಯಾಣಿಕರಿಗೆ ಕಿರಿ-ಕಿರಿ ನೀಡುತ್ತಿದ್ದರು. ಇದನ್ನು ಪೊಲೀಸರ ಕಣ್ಣಿಗೆ ಕಂಡರು ಹಗಲು ಕುರುಡರಂತೆ ಇದ್ದರು. ಅಷ್ಟೇ ಅಲ್ಲದೇ ಅಕ್ರಮ ವ್ಯಾಪಾರಿಗಳಿಂದ ಮಾಮೂಲಿ ತೆಗೆದುಕೊಂಡು ತೆಪ್ಪಗೆ ಕುಳಿತ್ತಿದ್ದರು. ಆದರೆ ಈಗ ಅಕ್ರಮ ಮಳಿಗೆಗಳು ತೆರವುಗೊಂಡಿರುವುದರಿಂದ ಮಮ್ಮೂಲಿ ಪಡೆಯುತ್ತಿದ್ದ ಪೊಲೀಸರಿಗೂ ನಷ್ಟ ಆಗುತ್ತಿರಬಹುದು!

“ಪೊಲೀಸರು ಅಷ್ಟೇ ಅಲ್ಲದೇ ಕರವೇ ಕಾರ್ಯಕರ್ತರು ಕೂಡ ಪೋಲೀಸರ ಜೊತೆ ಕೈ ಜೋಡಿಸಿ ಈ ಅಕ್ರಮ ಚಟುವಟಿಗಳಿಗೆ ಕಾವಲು ನೀಡುತ್ತಿದ್ದರು ಎಂದು ರವಿಕುಮಾರ್ ಆರೋಪಿಸಿದ್ದಾರೆ. ಕರವೇ ಕಾರ್ಯಕರ್ತರು ಅನೇಕ ಜನರು ನನ್ನ ಬಳಿ ಬಂದು ನಿಮಗೆ ಎಷ್ಟು ಬೇಕು ಹೇಳಿ? ಅಂಗಡಿಗಳಲ್ಲಿ ಮಾಮೂಲಿ ವಸೂಲಿ ಮಾಡಿಕೊಳ್ಳಿ ” ಎಂದೆಲ್ಲಾ ಕೇಳಿದ್ದಾರೆ ಎಂದು ರವಿ ಕುಮಾರ್ ಹೇಳಿದ್ದಾರೆ!

ಮನವಿ ಏನಿತ್ತು?:
ಮೆಜೆಸ್ಟಿಕ್ ಅಂಡರ್‌ಪಾಸ್‌ನಲ್ಲಿ ನಿತ್ಯವೂ ಲಕ್ಷಾಂತರ ಜನ ಓಡಾಡುತ್ತಾರೆ. ಈ ಅಂಡರ್‌ಪಾಸ್ ಮತ್ತದರ ಪ್ರವೇಶ ದ್ವಾರಗಳನ್ನು ನೂರಾರು ಬೀದಿ ವ್ಯಾಪಾರಿಗಳು ಅತಿಕ್ರಮಿಸಿಕೊಂಡಿದ್ದಾರೆ. ಇದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನನುಕೂಲವಾಗಿದೆ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

‘ಅಕ್ರಮ ಮಳಿಗೆಗಳನ್ನು ತೆರವು ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಈ ಸಂಬಂಧ ಸರ್ಕಾರ, ಬಿಬಿಎಂಪಿ ಹಾಗೂ ಪೊಲೀಸರಿಗೆ ನಿರ್ದೇಶಿಸಬೇಕು’ ಎಂದು ಕೋರಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top