fbpx
ಸಮಾಚಾರ

ಮೈಸೂರು ಪಾಕ್​ನ ಭೌಗೋಳಿಕ ಹಕ್ಕನ್ನು​​​ ಪಡೆದ ತಮಿಳುನಾಡು- ನಿರ್ಮಲ ಸೀತಾರಾಮನ್ ವಿರುದ್ಧ ಕನ್ನಡಿಗರ ಆಕ್ರೋಶ!

ಕಳೆದ ವರ್ಷ ಮೈಸೂರು ಪಾಕ್ ಭೌಗೋಳಿಕ ಹಕ್ಕಿಗಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆ ಆರಂಭವಾಗಿತ್ತು. ಮೈಸೂರ್ ಪಾಕ್ ನ ಭೌಗೋಳಿಕ ಹಕ್ಕಿಗಾಗಿ ಕನ್ನಡಿಗರು ಮತ್ತು ತಮಿಳರ ನಡುವೆ ಚರ್ಚೆ ಆರಂಭವಾಗಿತ್ತು, ಸೋಷಿಯಲ್ ಮೀಡಿಗಳಲ್ಲಿ ಈ ಬಗ್ಗೆ ಜನರು ವಾದ-ಪ್ರತಿವಾದಗಳಲ್ಲಿ ತೊಡಗಿದ್ದರು.

 

 

ಈಗ ಅಚ್ಚರಿಯ ಬೆಳವಣಿಗೆ ಎಂಬಂತೆ ಸದ್ದಿಲ್ಲದಂತೆ ಈ ಮೈಸೂರು ಪಾಕ್​ನ ಭೌಗೋಳಿಕ ಸೂಚ್ಯಂಕ (ಜಿಐ: ಜಿಯೋಗ್ರಾಫಿಕಲ್​ ಇಂಡಿಕೇಷನ್​ ಟ್ಯಾಗ್​) ಅನ್ನು ತಮಿಳುನಾಡು ಪಡೆದಿದೆ. ಈ ಬಗ್ಗೆ ತಮಿಳುನಾಡಿನ ಅಂಕಣಗಾರ, ಲೇಖಕ ಆನಂದ್​ ರಂಗನಾಥನ್​ ವಿಷಯವನ್ನು ಹಂಚಿಕೊಂಡಿದ್ದಾರೆ. ಏಕಸದಸ್ಯ ಸಮಿತಿ ಈ ಭೌಗೋಳಿಕ ಸೂಚ್ಯಂಕವನ್ನು ನೀಡಿದೆ. ಮೈಸೂರು ಪಾಕ್​ನ ಭೌಗೋಳಿಕ ಸೂಚ್ಯಂಗ ತಮಿಳುನಾಡು ಪಾಲಾಗಿದೆ ಎಂದು ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನು ಮೈಸೂರು ಪಾಕ್ ಹೆಸರೇ ಸೂಚಿಸುವಂತೆ ಮೈಸೂರು ಮಹಾರಾಜರ ಅರಮನೆಯ ಪಾಕ ಶಾಲೆಯಲ್ಲಿ ತಯಾರಿಸಲಾಗಿದ್ದ ಪಾಕ ಎಂದೇ ವಿಶೇಷ ಇದು ಕರ್ನಾಟಕದ್ದು ಎಂದು ಕನ್ನಡಿಗರ ವಾದವಾದರೆ, ಬ್ರಿಟಿಷ್ ಆಡಳಿತ ಅಧಿಕಾರಿಯಾಗಿದ್ದ ಲಾರ್ಡ್ ಮೆಕಾಲೆಯಾ ರೆಸಿಪಿಯನ್ನು ಆಧಾರಿಸಿ ಮೈಸೂರಿನಲ್ಲಿ ತಯಾರಿಸಲಾಗಿದೆ ಹಾಗಾಗಿ ಮೈಸೂರು ಪಾಕ್ ಮದ್ರಾಸ್ ಸಂಸ್ಥಾನದ ಹಕ್ಕು ಎಂದು ತಮಿಳಿಗರ ಪ್ರತಿವಾದ ಮಾಡುತ್ತಿದ್ದಾರೆ.

ಮೈಸೂರು ಪಾಕ್ ನ ಇತಿಹಾಸ
ಮೈಸೂರು ಪಾಕ್‌ ಮೊದಲು ತಯಾರಾಗಿದ್ದು ಮೈಸೂರು ಅರಮನೆ ಅಡುಗೆಮನೆಯಲ್ಲಿ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಆಳ್ವಿಕೆಯ ಸಂದರ್ಭದಲ್ಲಿ ಅರಮನೆಯ ಅಡುಗೆ ಭಟ್ಟರು ಈ ಸಿಹಿಯನ್ನು ತಯಾರಿಸಿದರು. ಕಡಲೆ ಹಿಟ್ಟಿನ ಜತೆ ತುಪ್ಪ ಮತ್ತು ಸಕ್ಕರೆ ಮಿಶ್ರಣದ ಪಾಕ ತಯಾರಿಸಿ ಅದನ್ನು ಬೇಕೆಂದ ಆಕಾರಕ್ಕೆ ತುಂಬಿದರು. ಒಣಗಿದ ನಂತರ ಅದು ಮಿಠಾಯಿ ರೀತಿಯಲ್ಲಿ ಕಂಡುಬಂತು. ಅದರ ಹೆಸರು ಕೇಳಿದಾಗ, ಮಾದಪ್ಪನವರು ಮನಸ್ಸಿನಲ್ಲಿ ಏನೂ ಆಲೋಚಿಸದ ಅವರು ಇದು ಕೇವಲ ‘ಮೈಸೂರು ಪಾಕ್‌’ ಎಂದು ಕರೆದರು. (ಪಾಕ್‌ ಅಥವಾ ಪಾಕ, ಎಂದರೆ ಸಂಸ್ಕೃತ ಅಥವಾ ಭಾರತದ ಬೇರೆ ಯಾವುದೇ ಭಾಷೆಗಳಲ್ಲಿ ಸಿಹಿ ಎಂದು ಅರ್ಥ ಕೊಡುತ್ತದೆ).

ಕರ್ನಾಟಕದ ಮೈಸೂರು ಪಾಕ್​ನನ್ನು ತಮಿಳುನಾಡು ಮೋಸ ಮಾಡಿ ಜಿಐ ಟ್ಯಾಗ್​​​ ಪಡೆದಿದೆ. ಕರ್ನಾಟಕದ ರಾಜ್ಯಸಭಾದಿಂದ ಆಯ್ಕೆಯಾದ ನಿರ್ಮಲಾ ಸೀತಾರಾಮನ್​ ಈ ಬಗ್ಗೆ ವಿವೇಚಿಸದೇ ತಮಿಳುನಾಡಿಗೆ ಮಾನ್ಯತೆ ನೀಡಿರುವುದು ತಪ್ಪು. ತಮಿಳುನಾಡು ಈ ವಿಷಯದಲ್ಲಿ ಕಳ್ಳತನ ಮಾಡಿದೆ. ಮೈಸೂರು ಪಾಕ್​ ನಮ್ಮ ನಾಡಿನ ಹೆಮ್ಮೆಯ ತಿನಿಸು ಎಂದು ವಾದ ಮಂಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top