fbpx
ಸಮಾಚಾರ

ಕನ್ನಡಿಗರ ಭಾವನಾತ್ಮಕ ವಿಷಯದಲ್ಲಿ ಚೆಲ್ಲಾಟವಾಡಿದ ತಮಿಳಿಗನ ಟ್ವೀಟ್ ಪರ ತೇಜಸ್ವಿ ಸೂರ್ಯ ವಕಾಲತ್ತು!

ತಮಿಳುನಾಡಿನ ಅಂಕಣಗಾರ, ಲೇಖಕ ಆನಂದ್​ ರಂಗನಾಥನ್​ ಕೇಂದ್ರದ ಏಕಸದಸ್ಯ ಸಮಿತಿ ಈ ಭೌಗೋಳಿಕ ಸೂಚ್ಯಂಕವನ್ನು ನೀಡಿದೆ. ಮೈಸೂರು ಪಾಕ್​ನ ಭೌಗೋಳಿಕ ಸೂಚ್ಯಂಕ ತಮಿಳುನಾಡು ಪಾಲಾಗಿದೆ ಎಂದು ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದರು.. ಇದರಿಂದ ಕೋಪಗೊಂಡ ಕನ್ನಡಿಗರು ಕೇಂದ್ರ ಸರ್ಕಾರದ ವಿರುದ್ಧ ಕೆಂಡವಾಗಿದ್ದರು..

 

 

ಇತ್ತೀಚೆಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾನ್​ ಅವರನ್ನು ಭೇಟಿಯಾಗಿದ್ದ ಅವರು, ಅವರಿಗೆ ಮೈಸೂರು ಪಾಕ್​ ಸಿಹಿ ತಿನಿಸನ್ನು ನೀಡಿದ್ದಾರೆ. ಈ ಚಿತ್ರವನ್ನು ಹಾಕಿಕೊಂಡು, ಏಕ ಸದಸ್ಯ ಸಮಿತಿಯಿಂದ ತಮಿಳುನಾಡಿಗೆ ಮೈಸೂರು ಪಾಕ್ ಜಿಐ ಟ್ಯಾಗ್ ನೀಡಿರುವುದಕ್ಕೆ ಪ್ರಶಂಸೆ ಸಿಕ್ಕಿದೆ ಎಂದು ಟ್ವೀಟ್ ಮಾಡಿದ್ದರು.

ಈ ಟ್ವೀಟ್ ನ್ನೇ ಆಧಾರವಾಗಿಟ್ಟುಕೊಂಡು ಮಾಧ್ಯಮಗಳು ತಮಿಳುನಾಡಿಗೆ ಮೈಸೂರ್ ಪಾಕ್ ನ ಜಿಐ ಸಿಕ್ಕೇ ಬಿಡ್ತೇನೋ ಎನ್ನುವಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ಮುಗಿಬಿದ್ದಿದ್ದವು. ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ತಾನು ವ್ಯಂಗ್ಯವಾಗಿ ಈ ಟ್ವೀಟ್ ಮಾಡಿದ್ದೆಂದು ಸಮಜಾಯಿಷಿ ನೀಡಿದ್ದಾರೆ. ಅಲ್ಲದೇ, ತನ್ನನ್ನು ಟ್ರೋಲ್ ಮಾಡಿದ ಸೋಷಿಯಲ್ ಮೀಡಿಯಾದ ಕನ್ನಡಿಗರು ಮತ್ತು ಮಾಧ್ಯಮಗಳನ್ನು ಕುಹಕ ಮಾಡಿದ್ದಾರೆ.

ತೇಜಸ್ವಿ ಸೂರ್ಯ ವಕಾಲತ್ತು:
ಕನ್ನಡಿಗರ ಭಾವನಾತ್ಮಕ ವಿಷಯದಲ್ಲಿ ಚೆಲ್ಲಾಟವಾಡಿದ ಅನಂದ್​ ರಂಗನಾಥನ್​ ಪರ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ವಕಾಲತ್ತು ವಹಿಸಿಕೊಂಡು ಬಂದಿದ್ದಾರೆ. ಆನಂದ್ ರಂಗನಾಥನ್ ಮಾಡಿದ್ದು ಲಘು ಹಾಸ್ಯದ ಟ್ವೀಟ್ ಎಂದು ತೇಜಸ್ವಿ ಟ್ವೀಟ್ ಮಾಡಿದ್ದು ಅವರನ್ನು ಟೀಕೆ ಮಾಡಿದ್ದ ಕನ್ನಡಿಗರನ್ನು ಅಪಹಾಸ್ಯ ಮಾಡಿದ್ದಾರೆ.

ಈತನ ವ್ಯಂಗ್ಯ ಕನ್ನಡಿಗರ ಭಾವನೆಯನ್ನು ಕೆರಳಿಸಿದ್ದು ಕಂಡೂ ಆತನಿಗೆ ಬೆಂಬಲ ನೀಡಿದ ತೇಜಸ್ವಿ ವಿರುದ್ಧ ಕನ್ನಡಿಗರು ಗರಂ ಆಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top