fbpx
ಸಮಾಚಾರ

ಮೆಟ್ರೋದಲ್ಲಿ ಇಂಗ್ಲಿಷ್ ಬೋರ್ಡ್ ನಡೆಯುತ್ತೆ, ಹಿಂದಿ ಬೋರ್ಡ್ ಇದ್ದರೇ ನಿಮಗೇನು ಸಮಸ್ಯೆ? ಕನ್ನಡಿಗರಿಗೆ ಪ್ರಹ್ಲಾದ್ ಜೋಷಿ ಪ್ರಶ್ನೆ

ಈ ಹಿಂದೆ ಕನ್ನಡ ಧ್ವಜದದ ಬಗ್ಗೆ ಉಡಾಫೆಯ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಹಿಂದಿ ಪ್ರೇಮಿ ಪ್ರಹ್ಲಾದ್ ಜೋಷಿ ಇದೀಗ ಮತ್ತೊಮ್ಮೆ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಅಮಿತ್​ ಶಾ ಅವರ ‘ಒಂದು ದೇಶ ಒಂದು ಭಾಷೆ’ ಹೇಳಿಕೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಮರ್ಥಿಸಿಕೊಂಡಿದ್ದಾರೆ.

ಧಾರವಾಡದಲ್ಲಿಂದು ಮಾತನಾಡಿದ ಅವರು “ಕೆಲವರು ಹಿಂದಿ ಬೇಡ ಅಂತಾರೆ ಆದರೆ ಇಂಗ್ಲೀಷ್ ಬೇಕು ಅಂತಾರೆ. ಅವರ ತಾತ ಮುತ್ತಾತರು ಇಂಗ್ಲೀಷನವರೇನು? ಎಲ್ಲರೂ ಹಿಂದಿ ಕಲಿಯಬೇಕು ಅಂತಾ ಅಮಿತ್​ ಶಾ ಹೇಳಿದ್ದಾರೆ. ಅದರರ್ಥ ಕನ್ನಡ ನಿರ್ಲಕ್ಷ್ಯ ಮಾಡಬೇಕು ಎನ್ನುವ ಭಾವನೆ ಇಲ್ಲ,” ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

“ಇಂಗ್ಲೀಷ್ ಕಲಿಯಲು ತಯಾರಿದ್ದೇವೆ, ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ಸ್ವಾಗತಿಸುವ ಒಂದು ವರ್ಗ ಕೂಡ ಇದೆ. ಆದರೆ ಹಿಂದಿ ಕಲಿಯಬೇಕು ಅಂತ ಹೇಳಿದರೆ ಯಾಕಿಷ್ಟು ವಿರೋಧ ಮಾಡುತ್ತಾರೆ ಎಂದು ಗೊತ್ತಿಲ್ಲ. ಮೆಟ್ರೋದಲ್ಲಿ ಇಂಗ್ಲೀಷ್ ಬೋರ್ಡ್ ನಡೆಯುತ್ತೆ, ಹಿಂದಿ ಬೋರ್ಡ್ ತೆಗೆಯಬೇಕು ಅಂದರೆ ಯಾವ ನ್ಯಾಯ ಇದು?,” ಎಂದು ಪ್ರಶ್ನಿಸಿದರು.

ಜೋಷಿ ಅವರ ಈ ಹೇಳಿಕೆಗೆ ನೆಟ್ಟಿಗರು ಕಿಡಿಕಾರಿದ್ದು ಪ್ರಹ್ಲಾದ್ ಜೋಶಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top