fbpx
ಸಮಾಚಾರ

ಕೇಕ್, ಹಾರ ತರುವ ಬದಲು ಒಂದೊಂದು ಗಿಡ ತನ್ನಿ- ಹುಟ್ಟುಹಬ್ಬಕ್ಕೆ ಬರುವ ಅಭಿಮಾನಿಗಳಿಗೆ ಉಪೇಂದ್ರ ಕಿವಿಮಾತು.

ಸಾಮಾನ್ಯವಾಗಿ ಸ್ಟಾರ್‌ಗಳ ಹುಟ್ಟುಹಬ್ಬ ಅಂದರೆ ಜೋರಿರುತ್ತದೆ. ಅವರ ಮನೆಯ ಮುಂದೆ ಮಧ್ಯರಾತ್ರಿಯಿಂದಲೇ ಜನರು ನೆರೆದಿರುತ್ತಾರೆ. ಕೇಕ್, ಹಾರ ತಂದಿರುತ್ತಾರೆ, ಅಷ್ಟೇ ಅಲ್ಲ, ಕೆಲವು ವಿಶೇಷ ಉಡುಗೊರೆ ತಂದು, ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆಯುತ್ತಾರೆ. ಉಪೇಂದ್ರ ಈ ಬಾರಿ ಕೇಕ್, ಹಾರ ತರಬೇಡಿ ಎಂದಿದ್ದಾರೆ.

 


 

ತಮ್ಮ ಬರ್ತ್​ಡೇಗೆ ಹಾರ-ಹೂ-ಕೇಕ್ ತರಬೇಡಿ, ಬ್ಯಾನರ್ ಕಟ್ಟಬೇಡಿ ಎಂದು ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ. ಆದರೆ ಅದರಲ್ಲೂ ಅವರು ಒಂದು ವಿಶೇಷತೆ ಮೆರೆದಿದ್ದಾರೆ. ಏನಾದರೂ ಉಡುಗೊರೆ ಕೊಡಲೇಬೇಕು ಎನಿಸಿದರೆ ಹಾರ, ಕೇಕ್ ಮುಂತಾದ ವಸ್ತುಗಳ ಬದಲಿಗೆ ಗಿಡ ತನ್ನಿ ಎಂದು ಉಪೇಂದ್ರ ಮನವಿ ಮಾಡಿಕೊಂಡಿದ್ದಾರೆ. ಇನ್ನೊಂದು ವಿಶೇಷ ಏನೆಂದರೆ, ಅಭಿಮಾನಿಗಳು ತಂದುಕೊಡುವ ಗಿಡಗಳನ್ನು ಮುಂದೆ ಪೋಷಿಸುವ ಜವಾಬ್ದಾರಿ ನನ್ನದು ಎನ್ನುವ ಮೂಲಕ ಅವರು ಅಷ್ಟೂ ಗಿಡಗಳನ್ನು ಮರವಾಗಿಸುವ ವಾಗ್ದಾನ ನೀಡಿದ್ದಾರೆ.

“ಪ್ರೀತಿಯ ಅಭಿಮಾನಿಗಳಲ್ಲಿ ವಿನಂತಿ… ಸೆಪ್ಟೆಂಬರ್ 18 “ಅಭಿಮಾನಿಗಳ ದಿನ”, ಅಂದು ದಯವಿಟ್ಟು ತಾವುಗಳು ಯಾರೂ ಕೇಕ್, ಹೂವಿನ ಹಾರ ಹೂಗುಚ್ಛ ಮತ್ತು ಉಡುಗೊರೆಗಳನ್ನು ತರಬೇಡಿ.. ತರಲೇ ಬೇಕು ಎಂದೆನಿಸಿದರೆ ಗಿಡಗಳನ್ನು ತನ್ನಿ. ಮುಂದೆ ಅದನ್ನು ಪೋಷಿಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ…” ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ.

ಉಪೇಂದ್ರ ಅವರ ಈ ಕೋರಿಕೆಯನ್ನು ಅಭಿಮಾನಿಗಳಷ್ಟೇ ಅಲ್ಲದೆ ಇತರ ಹಲವರೂ ಸ್ವಾಗತಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top