fbpx
ಸಮಾಚಾರ

ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಯಶ್-ಮಹೇಶ್​ ಬಾಬು!

ರಾಕಿಂಗ್​​ ಸ್ಟಾರ್​ ಯಶ್​ ‘ಕೆಜಿಎಫ್​’ ಮೂಲಕ ಬೇರೆ ಚಿತ್ರರಂಗಕ್ಕೂ ಪರಿಚಯಗೊಂಡರು. ಬೇರೆ ಭಾಷೆಯ ಸ್ಟಾರ್​ ನಟರು ಈ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಚ್ಚರಿ ವಿಚಾರ ಏನೆಂದರೆ, ಟಾಲಿವುಡ್​ ಪ್ರಿನ್ಸ್​ ಯಶ್- ಮಹೇಶ್​ ಬಾಬು ಶೀಘ್ರವೇ​ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರಂತೆ!

ಈಗ ಇವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಿನಿಮಾ ಮಾಡೋದಿಕ್ಕಲ್ಲ, ಸಿನಿಮಾಗಾಗಿ ನೀಡುವ ಪ್ರಶಸ್ತಿ ಸಮಾರಂಭದಲ್ಲಿ. ಸೆಪ್ಟೆಂಬರ್ 20ರಂದು ಹೈದರಾಬಾದ್‌ನಲ್ಲಿ ‘ದಾದಾ ಸಾಹೇಬ್ ಫಾಲ್ಕೆ ಪ್ರತಿಷ್ಠಾನ’ ಪ್ರಶಸ್ತಿ ಕಾರ್ಯಕ್ರಮವಿದೆ. ಅದರಲ್ಲಿ ರಾಕಿಂಗ್ ಸ್ಟಾರ್ ಯಶ್ ಕೂಡ ಪಾಲ್ಗೊಳ್ಳುತ್ತಿದ್ದಾರೆ. ಜೊತೆಗೆ ಮಹೇಶ್ ಕೂಡ ಭಾಗವಹಿಸುತ್ತಿದ್ದಾರೆ. ಅವರಿಗೂ ಪ್ರಶಸ್ತಿ ನೀಡಲಾಗುತ್ತಿದೆ.

ಒಂದೇ ವೇದಿಕೆಯಲ್ಲಿ ಸೌತ್ ಸ್ಟಾರ್ ಯಶ್ ಮತ್ತು ಮಹೇಶ್ ಬಾಬು ಕಾಣಿಸಿಕೊಳ್ತಿದ್ದು ಸಿನಿ ಅಭಿಮಾನಿಗಳಲ್ಲಿ ತುಂಬಾನೇ ಖುಷಿ ತಂದಿದೆ. ಸಮಾರಂಭದಲ್ಲಿ ದಕ್ಷಿಣ ಭಾರತದ ಖ್ಯಾತ ನಟ, ನಟಿಯರೂ ಕೂಡ ಭಾಗಿಯಾಗುತ್ತಿದ್ದು ವೇದಿಕೆ ಸೂಪರ್ ಸ್ಟಾರ್​ಗಳಿಂದ ಝಗಮಗಿಸಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top