fbpx
ಸಮಾಚಾರ

“ಹಿಂದಿ ದೇಶವನ್ನು ಒಗ್ಗೂಡಿಸುವ ಭಾಷೆ, ಸುಮ್ಮನೆ ಅದೇಕೆ ದ್ವೇಷಿಸ್ತಾರೋ ಗೊತ್ತಿಲ್ಲ” ಸಚಿವ ಈಶ್ವರಪ್ಪ!

“ಹಿಂದಿ ದೇಶವನ್ನು ಒಗ್ಗೂಡಿಸುವ ಭಾಷೆ, ಸುಮ್ಮನೆ ಅದೇಕೆ ದ್ವೇಷಿಸ್ತಾರೋ ಗೊತ್ತಿಲ್ಲ” ಸಚಿವ ಈಶ್ವರಪ್ಪ!ಹಿಂದಿ ದೇಶವನ್ನು ಒಗ್ಗೂಡಿಸುವ ಭಾಷೆ ಅದನ್ನ ಯಾಕೆ ದ್ವೇಷ ಮಾಡುತ್ತಾರೋ ಗೊತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ಕೊಟ್ಟಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಈಶ್ವರಪ್ಪ ಅವರು, “ಕನ್ನಡ ನಮ್ಮ ಮಾತೃಭಾಷೆ, ಹಾಗೆಯೆ ಹಿಂದಿ ಇಡೀ ದೇಶವನ್ನು ಒಗ್ಗೂಡಿಸುವ ಭಾಷೆ. ಆದರೆ ಅದನ್ನು ಯಾಕೆ ದ್ವೇಷ ಮಾಡುತ್ತಿದ್ದಾರೊ ಗೊತ್ತಿಲ್ಲ. ಹಿಂದಿ ಭಾಷೆಯಿಂದ ಕನ್ನಡದ ಆದ್ಯತೆ ಕಡಿಮೆ ಆಗಲ್ಲ. ಕೇಂದ್ರ ಸರ್ಕಾರ ಬಲವಂತವಾಗಿ ಹಿಂದಿಯನ್ನು ಜಾರಿಗೆ ತರಲು ನೋಡುತ್ತಿಲ್ಲ. ಆದರೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮಾತನ್ನು ಕೆಲವರು ತಪ್ಪಾಗಿ ಅರ್ಥೈಸುತ್ತಿದ್ದಾರೆ” ಎಂದು ಹೇಳಿದರು.

‘ಒಂದು ದೇಶ ಒಂದು ಭಾಷೆ’ಯ ನಿಟ್ಟಿನಲ್ಲಿ ರಾಷ್ಟ್ರ ಭಾಷೆಯಾದ ಹಿಂದಿಯನ್ನು ಪರಿಗಣಿಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ಕೊಟ್ಟಿದ್ದರು. ಅದಕ್ಕೆ ಸಿದ್ದರಾಮಯ್ಯ ಅವರು ಶಾ ವಿರುದ್ಧ ‘ದಡ್ಡ’ ಎಂದು ಬಳಸಿರುವ ಪದ ಸರಿಯಲ್ಲ. ಅಮಿತ್ ಶಾರವರು ಹಿಂದಿ ಹೇರಿಕೆ ಮಾಡುತ್ತಿಲ್ಲ. ಹಿಂದಿ ಭಾಷೆ ದೇಶವನ್ನು ಒಂದು ಮಾಡುವ ಭಾಷೆಯಾಗಿದೆ. ಆದರೆ, ಮೊದಲ ಆದ್ಯತೆ ಕನ್ನಡಕ್ಕೆ ನೀಡಲಾಗುವುದು ಎಂದು ಈಶ್ವರಪ್ಪ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top