fbpx
ಸಮಾಚಾರ

“ಷಾ, ಸುಲ್ತಾನ್ ಯಾರೇ ಆಗಲಿ ಹಿಂದಿ ಹೇರಿಕೆ ಮಾಡಲು ಬಂದ್ರೇ ಸುಮ್ಮನೆ ಬಿಡೋದಿಲ್ಲ” ಹಿಂದಿ ಹೇರಿಕೆ ವಿರುದ್ಧ ಕಮಲ್ ಹಾಸನ್ ಘರ್ಜನೆ!

ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಯತ್ನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಕ್ಕಳ ನೀಧಿ ಮಯ್ಯಂ ಸಂಸ್ಥಾಪಕ ಹಾಗೂ ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್ ಅವರು, ಯಾವುದೇ ಶಾ, ಸುಲ್ತಾನ್ ಅಥವಾ ಸಾಮ್ರಾಟ್ ನಿಂದ ನಮ್ಮ ಮೇಲೆ ಹಿಂದೆ ಹೇರಿಕೆ ಮಾಡಲು ಸಾಧ್ಯವಿಲ್ಲ ಎಂದು ಸೋಮವಾರ ಹೇಳಿದ್ದಾರೆ. ಒಂದು ವೇಳೆ ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಿದರೆ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಗಿಂತ ದೊಡ್ಡ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

 

 

ಈ ಬಗ್ಗೆ ಟ್ವೀಟ್ ಮಾಡಿರುವ ಕಮಲ್ ಹಾಸನ್, ಭಾರತದಲ್ಲಿ ಜನಿಸಲು ಹಲವು ರಾಜರು ತಮ್ಮ ಸಾಮ್ರಾಜ್ಯವನ್ನೇ ಬಿಟ್ಟುಕೊಟ್ಟಿದ್ದಾರೆ. ಆದರೆ, ಬಹಳಷ್ಟು ಭಾರತೀಯರು ಮತ್ತು ರಾಜ್ಯಗಳು ತಮ್ಮ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ತ್ಯಜಿಸುವುದನ್ನು ತೀವ್ರವಾಗಿ ವಿರೋಧಿಸಿದರು. 1950 ರಲ್ಲಿ ಭಾರತವು ಸಾಂವಿಧಾನಿಕ ಗಣರಾಜ್ಯವಾದಾಗ, ಸರ್ಕಾರವೂ ಸಹ ಜನರಿಗೆ ಅದೇ ರೀತಿ ಭರವಸೆ ನೀಡಿತ್ತು. ಯಾವುದೇ ಶಾ ಅಥವಾ ಸುಲ್ತಾನ ಅಥವಾ ಸಾಮ್ರಾಟ ಇದನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಇನ್ನು ನಮ್ಮ ರಾಷ್ಟ್ರಗೀತೆಯನ್ನು ಪ್ರಸ್ತಾಪಿಸಿದ ಕಮಲ್, ರಾಷ್ಟ್ರಗೀತೆ ಬಂಗಾಳಿ ಭಾಷೆಯಲ್ಲಿದೆ. ಏಕೆಂದರೆ ಅದನ್ನು ರಚಿಸಿದ್ದೇ ಬಂಗಾಳಿ ಭಾಷೆಯಲ್ಲಿ. ಅದು ಭಾರತದ ಬಹುತೇಕ ಜನರ ಮಾತೃಭಾಷೆಯಲ್ಲ. ಆದ್ರೂ ನಾವೆಲ್ಲರೂ ಬಂಗಾಳಿ ಭಾಷೆಯಲ್ಲಿರೋ ರಾಷ್ಟ್ರಗೀತೆಯನ್ನೇ ಸಂತೋಷದಿಂದ ಹಾಡುತ್ತಿದ್ದೇವೆ. ಮುಂದೆಯೂ ಹಾಡುತ್ತಿರುತ್ತೇವೆ ರಾಷ್ಟ್ರಗೀತೆಯನ್ನು ರಚಿಸಿದ ಕವಿ ರವೀಂದ್ರನಾಥ್ ಠಾಗೋರ್ ಎಲ್ಲ ಭಾಷೆಗಳನ್ನು, ಸಂಸ್ಕೃತಿಯನ್ನೂ ಗೌರವಿಸುತ್ತಾರೆ. ರಾಷ್ಟ್ರಗೀತೆಯಲ್ಲಿ ಅಡಕಗೊಳಿಸಿದ್ದಾರೆ, ಹೀಗಾಗಿ ಅದು ನಮ್ಮ ರಾಷ್ಟ್ರಗೀತೆಯಾಗಿದೆ ಎಂದು ವಿವರಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top