fbpx
ಸಮಾಚಾರ

“ಈ ವಿಚಾರದ ಬಗ್ಗೆ ಅಪ್ ಡೇಟ್ ಕೊಡಿ” ಪ್ರತಾಪ್ ಸಿಂಹ ಬಳಿ ಮಾಹಿತಿ ಕೇಳಿದ ರಶ್ಮಿಕಾ

ಕೊಡಗಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿತ್ತು. ಮುಖ್ಯಮಂತ್ರಿ, ಮೈಸೂರು-ಕೊಡಗು ಸಂಸದ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳನ್ನು ಎಚ್ಚರಿಸಲು ಟ್ವಿಟರ್‌ ಅಭಿಯಾನ ನಡೆಸಿದ ಜಿಲ್ಲೆಯ ಯುವ ಜನತೆ ಈ ಅಭಿಯಾನಕ್ಕೆ ದೊಡ್ಡ ಪ್ರಮಾಣದಲ್ಲಿ ಕೈ ಜೋಡಿಸಿದ್ದರು. ಅಭಿಯಾನಕ್ಕೆ ವ್ಯಾಪಕ ಬೆಂಬಲ ಕೂಡಾ ವ್ಯಕ್ತವಾಗಿತ್ತು.

 

 

ಕೆಲದಿನಗಳಿಂದ ಈ ಕೂಗು ತಣ್ಣಗಾಗಿತ್ತು. ಇದೀಗ ನಟಿ ರಶ್ಮಿಕಾ ಮಂದಣ್ಣ, ಸಂಸದ ಪ್ರತಾಪ್ ಸಿಂಹ ಬಳಿ ಅಭಿಯಾನದ ಬಗ್ಗೆ ಮಾಹಿತಿ ಕೇಳಿದ್ದಾರೆ. ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ಸಂಸದ ಪ್ರತಾಪ್ ಸಿಂಹ ಅವರ ಬಳಿ ಕೊಡಗು ಆಸ್ಪತ್ರೆ ಅಭಿಯಾನದ ಬಗ್ಗೆ ಮಾಹಿತಿ ಕೇಳಿದ್ದಾರೆ. ರಶ್ಮಿಕಾ ಅವರು ತಮ್ಮ ಟ್ವಿಟ್ಟರಿನಲ್ಲಿ, “ಪ್ರತಾಪ್ ಸಿಂಹ ಸರ್ ಕೊಡಗಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ನಾನು ಟ್ವೀಟ್ ಮಾಡುತ್ತಿದ್ದೇನೆ. ದಯವಿಟ್ಟು ನನಗೆ ಮಾಹಿತಿ ಸಿಗಬಹುದೇ?. ಈ ಬಗ್ಗೆ ಅಭಿವೃದ್ಧಿ ಅಥವಾ ಬೇರೆ ಯಾವುದೇ ಮಾಹಿತಿ ನಮಗೆ ತಿಳಿಸಿದರೆ ಸಂತೋಷವಾಗುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನ “ಯಾವುದೇ ಊರಿನಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ಅಗತ್ಯಗಳಲ್ಲೊಂದು. ಆದರೆ ನಮ್ಮ ಕೊಡಗಿನಲ್ಲಿ ನಾವು ಅದನ್ನು ಹೊಂದಿಲ್ಲ. ಉತ್ತಮ ಚಿಕಿತ್ಸೆ, ಅನಿವಾರ್ಯ ಸಂದರ್ಭಗಳಲ್ಲಿ ನಾವು ಒಳ್ಳೆಯ ಹಾಗೂ ಉತ್ತಮ ಆಸ್ಪತ್ರೆ ಹುಡುಕಿಕೊಂಡು ಬಹಳ ದೂರ ಹೋಗಬೇಕಾದ ಪರಿಸ್ಥಿತಿಯಿದೆ. ಆದಷ್ಟು ಬೇಗ ನಮ್ಮೂರು ಕೊಡಗಿನಲ್ಲೂ ಒಂದು ಸುಸಜ್ಜಿತ ಆಸ್ಪತ್ರೆ ಆದರೆ ನಿಜವಾಗಿಯೂ ನಾಗರಿಕರಿಗೆ ತುಂಬ ಸಹಾಯವಾಗುತ್ತದೆ” ಎಂದು ಟ್ವೀಟ್ ಮಾಡಿದ್ದರು ರಶ್ಮಿಕಾ.

ಇದಕ್ಕೆ ಪ್ರತಾಪ್ ಸಿಂಹ ಅವರು ‘ನಾನು ಈಗಾಗಲೇ ಮಾನ್ಯ ಸಿಎಂರಿಗೆ ಪತ್ರ ಬರೆದಿದ್ದು ಅವರ ಜೊತೆ ಮಾತುಕತೆ ನಡೆಸುತ್ತೀನಿ. ಕೇಂದ್ರದಲ್ಲಿರುವ ಮೋದಿಜೀ ಸರ್ಕಾರ ಸಹ ಈ ಬಗ್ಗೆ ಸಂಪೂರ್ಣ ಸಹಕಾರ ನೀಡಲಿದೆ’ ಎಂದು ರಶ್ಮಿಕಾ ಟ್ವೀಟ್‌ಗೆ ಉತ್ತರ ನೀಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top