fbpx
ಸಮಾಚಾರ

ಬಯಲಾಯ್ತು ಮತ್ತೊಬ್ಬ ಸ್ವಾಮೀಜಿಯ ಕಾಮಪುರಣ: ಕಾಮಿಸ್ವಾಮಿಯ ಆಡಿಯೋ ಔಟ್

ಯಾದಗಿರಿ ಜಿಲ್ಲೆಯ ಸುರುಪುರ ತಾಲೂಕಿನ ಹುಣಸಿಹೊಳಿ ಗ್ರಾಮದ ಪ್ರಸಿದ್ಧ ಕಣ್ವಮಠ, ಪೀಠಾಧಿಪತಿ ಶ್ರೀ ವಿದ್ಯಾವಾರೀಧಿತೀರ್ಥ ಸ್ವಾಮಿಯ ಕಾಮಪುರಾಣ ಬಟಾಬಯಲಾಗಿದ್ದು ಅದಕ್ಕೆ ಸಂಭಂದಿಸಿದ ಆಡಿಯೋವೊಂದು ಭಾರೀ ಸದ್ದು ಮಾಡುತ್ತಿದೆ.

ಸ್ವಾಮೀಜಿ ಮೈಸೂರು ಮೂಲದ ಮಹಿಳೆ ಜೊತೆ ಅಸಭ್ಯಕರವಾಗಿ ವಾಟ್ಸಪ್ ನಲ್ಲಿ ಚಾಟಿಂಗ್ ಮಾಡಿದ್ದಾರೆ ಎನ್ನಲಾಗಿದ್ದು, ಮಹಿಳೆ ಜೊತೆ ಸ್ವಾಮೀಜಿ ನಡೆಸಿರುವ ಚಾಟಿಂಗ್ ಫೋಟೋಗಳು, ವೀಡಿಯೋಗಳು ಮತ್ತು ಕಾಲ್ ರೆಕಾರ್ಡ್ ಅನಾಮಧೇಯ ವ್ಯಕ್ತಿಗಳಿಂದ ಹೊರ ಬಂದಿವೆ. ಪೂಜೆ ನೆಪದಲ್ಲಿ ಬೆಂಗಳೂರಿನ ಯಲಹಂಕ ಶಾಖಾ ಮಠಕ್ಕೆ ಬರುವಂತೆ ಮಹಿಳೆಗೆ ಆಹ್ವಾನಿಸಿರುವುದು ಆಡಿಯೊದಲ್ಲಿದೆ.

ಅಲ್ಲದೆ ಈ ಸ್ವಾಮೀಜಿಗೆ ಈಗಾಗಲೇ ಎರಡು ಮದುವೆ ಆಗಿದ್ದು, ಮಕ್ಕಳು ಸಹ ಇದ್ದಾರೆಂದು ಹೇಳಲಾಗುತ್ತಿದೆ. ಅಲ್ಲದೆ ಹಲವು ಜಿಲ್ಲೆಗಳಲ್ಲಿರುವ ಕಣ್ವ ಮಠದ ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡಿರುವ ಆರೋಪ ಸಹ ಇವರ ಮೇಲಿದೆ. ಇಷ್ಟೆಲ್ಲ ವಿರೋಧದ ಮಧ್ಯೆಯೂ 2014ರಲ್ಲಿ ಮಠದ ಪೀಠಾಧಿಪತಿಯಾಗಿದ್ದರು ವಿದ್ಯಾವಾರಿಧಿಶ್ರೀ. ಎಲ್ಲರ ವಿರೋಧದ ನಡುವೆಯೂ ಪೀಠಾಧಿಪತಿಯಾದ ವಿದ್ಯಾವಾರಿಧಿಶ್ರೀ ವಿವಿಧ ಜಿಲ್ಲೆಗಳಲ್ಲಿ ಮಠಕ್ಕೆ ಸೇರಿದ ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬರ್ತಿವೆ.

ಈ ಸುದ್ದಿ ನ್ಯೂಸ್ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಸ್ವಾಮೀಜಿ ಮಠದ ಅಭಿವೃದ್ಧಿ ಸಹಿಸದ ಕೆಲವರು ಈ ರೀತಿ ಮಾನಹರಣ ಮಾಡುತ್ತಿದ್ದಾರೆ. ನಮ್ಮ ಮೇಲೆ ಆರೋಪ ಬಂದಿದ್ದರಿಂದ ಪೀಠ ತ್ಯಜಿಸುತ್ತೇನೆ ಎಂದು ಸ್ವಾಮೀಜಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top