fbpx
ಸಮಾಚಾರ

ತಲೆಯ ಗಾತ್ರದ ಹೆಲ್ಮೆಟ್ ಸಿಗದ ವ್ಯಕ್ತಿಯ ಪರದಾಟ: ಈತ ಎಲ್ಲೇ ಪೊಲೀಸರು ದಂಡ ಹಾಕೋ ಹಾಗಿಲ್ಲ!

ದೇಶದಲ್ಲಿ ನೂತನ ಮೋಟಾರು ವಾಹನ ಕಾಯಿದೆ ಜಾರಿಗೆ ಬಂದ ಬಳಿಕ ಸಂಚಾರ ನಿಯಮ ಉಲ್ಲಂಘಿಸುವವರಿಗೆ ವಿಧಿಸುವ ದಂಡದ ಪ್ರಮಾಣ ಭಾರಿ ಏರಿಕೆಯಾಗಿದ್ದು, ಇದಕ್ಕೆ ಭಾರಿ ವಿರೋಧ ಕೂಡ ವ್ಯಕ್ತವಾಗುತ್ತಿದೆ. ಆದರೆ ಗುಜರಾತ್‍ನ ವ್ಯಕ್ತಿ ಮಾತ್ರ ಹೆಲ್ಮೆಟ್ ಧರಿಸದಿದ್ದರೂ ದಂಡ ಪಾವತಿ ಮಾಡದೆ ಇರುವ ಅವಕಾಶವನ್ನು ಪಡೆದಿದ್ದಾರೆ.

ನಿಯಮ ಉಲ್ಲಂಘನೆಗಳಲ್ಲಿ ಹೆಲ್ಮೆಟ್ ರಹಿತ ಪ್ರಯಾಣ ಅಗ್ರಸ್ಥಾನದಲ್ಲಿದೆ. ಹಲವು ನಗರಗಳಲ್ಲಿ ಹೆಲ್ಮೆಟ್ ಹಾಕದವರಿಗೆ ಪೊಲೀಸರು ಉಚಿತ ಹೆಲ್ಮೆಟ್ ನೀಡುತ್ತಿದ್ದಾರೆ. ಆದರೆ ಝಾಕೀರ್ ಮೆಮನ್ ಹೆಲ್ಮೆಟ್ ಹಾಕದೇ ಬೈಕ್ ಓಡಿಸುತ್ತಿದ್ದಾರೆ. ಇಲ್ಲೀವರೆಗೆ ಝಾಕೀರ್‌ಗೆ ದಂಡ ಹಾಕಿಲ್ಲ. ಇದಕ್ಕೆ ಕಾರಣ ಝಾಕೀರ್ ತಲೆ ಗಾತ್ರಕ್ಕೆ ತಕ್ಕ ಹೆಲ್ಮೆಟ್ ಭಾರತದಲ್ಲಿಲ್ಲ.

ಜಾಕೀರ್ ತಮ್ಮ ತಲೆಗೆ ಸರಿ ಹೊಂದುವ ಹೆಲ್ಮೆಟ್ ಸಿಗದೆ ಸಮಸ್ಯೆ ಎದುರಿಸುತ್ತಿದ್ದರು. ಇದನ್ನು ಗಮನಿಸಿದ ಪೊಲೀಸರು ಜಾಕೀರ್ ರನ್ನು ವಿಚಾರಣೆ ನಡೆಸಿ ಕೊನೆಗೆ ದಂಡ ಹಾಕದೆ ಬಿಟ್ಟು ಕಳುಹಿಸಿದ್ದಾರೆ. ಸಾಮಾನ್ಯ ವ್ಯಕ್ತಿಗೆ ಇರಬೇಕಾದ ಗಾತ್ರಕ್ಕಿಂತಲೂ ಇವರ ತಲೆಯ ಗಾತ್ರ ದೊಡ್ಡದಾಗಿದೆ. ಹಾಗಾಗಿ, ಇವರ ತಲೆಯ ಗಾತ್ರಕ್ಕೆ ತಕ್ಕುದಾದ ಹೆಲ್ಮೆಟ್​ ಇದುವರೆಗೂ ತಯಾರಾಗಿಲ್ಲವಂತೆ! ಈ ಕಾರಣಕ್ಕಾಗಿ ಅವರು ಹೆಲ್ಮೆಟ್​ ಧರಿಸದೇ ಇದ್ದರೂ ಸಂಚಾರ ಪೊಲೀಸರು ಇವರಿಗೆ ದಂಡವೇ ವಿಧಿಸುವಂತಿಲ್ಲ!

ಈ ಕುರಿತು ಮಾತನಾಡಿರುವ ಜಾಕೀರ್, ನನಗೆ ಕಾನೂನಿನ ಮೇಲೆ ಅಪಾರ ಗೌರವ ಹಾಗೂ ನಂಬಿಕೆ ಇದೆ. ಆದರೆ ನಾನು ಮಾರುಕಟ್ಟೆಯ ಎಲ್ಲ ಹೆಲ್ಮೆಟ್ ಅಂಗಡಿಗಳಲ್ಲಿ ಹುಡುಕಾಟ ನಡೆಸಿದರೂ ನನಗೆ ಸರಿ ಹೊಂದುವ ಹೆಲ್ಮೆಟ್ ಲಭ್ಯವಾಗಲಿಲ್ಲ. ನನ್ನ ಬಳಿ ಎಲ್ಲಾ ದಾಖಲೆಗಳು ಇದ್ದು, ಆದರೆ ಹೆಲ್ಮೆಟ್ ಸಿಗದ ಕಾರಣ ಅಸಹಾಯಕನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬೊಡೇಲಿ ಪಟ್ಟಣದ ಸಂಚಾರ ಪೊಲೀಸ್​ನಲ್ಲಿ ಸಹಾಯಕ ಇನ್​ಸ್ಪೆಕ್ಟರ್​ ಆಗಿರುವ ವಸಂತ್​ ರಾತ್ವಾ, ಝಾಕೀರ್​ ಮೆಮೂನ್​ ಎಂದೂ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡವರಲ್ಲ. ಅವರ ಬಳಿ ಅವರ ವಾಹನದ ಎಲ್ಲ ದಾಖಲೆಗಳು ಇವೆ, ಚಾಲನಾ ಪರವಾನಗಿ (ಡಿಎಲ್​) ಕೂಡ ಇದೆ… ಆದರೆ ತಲೆಯ ಗಾತ್ರ ಸಾಮಾನ್ಯಕ್ಕಿಂತ ದೊಡ್ಡದಾಗಿದೆ. ಹಾಗಾಗಿ ಆ ಸೈಜಿಗೆ ತಕ್ಕುದಾದ ಹೆಲ್ಮೆಟ್​ ಲಭಿಸದೇ ಇರುವುದರಿಂದ ಅವರು ಹೆಲ್ಮೆಟ್​ ಧರಿಸುವುದಿಲ್ಲ ಅಷ್ಟೇ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top