fbpx
ಸಮಾಚಾರ

ಎಲ್ಲಾ ಪ್ರಯಾಣಿಕರ ಲಗೇಜ್​ಅನ್ನು ದೆಹಲಿ ವಿಮಾನ ನಿಲ್ದಾಣದಲ್ಲೇ ಬಿಟ್ಟು ಇಸ್ತಾನ್​ಬುಲ್​ಗೆ ಹೋದ ಇಂಡಿಗೋ ವಿಮಾನ!

ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಕರನ್ನು ಕರೆದೊಯ್ಯುವಾಗ ಪ್ರಯಾಣಿಕರೆಲ್ಲರ ಲಗೇಜ್​ ಅನ್ನು ವಿಮಾನಯಾನ ಸಂಸ್ಥೆಯೊಂದು ವಿಮಾನ ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದ ಸಂಗತಿ ಕೇಳಲು ವಿಚಿತ್ರ ಅನಿಸಿದರೂ ಅಂತದ್ದೊಂದು ಘಟನೆ ಭಾನುವಾರ ನಡೆದಿದೆ.

 

 

ಕಳೆದ ಭಾನುವಾರ (ಸೆಪ್ಟೆಂಬರ್ 15) ದೆಹಲಿಯಿಂದ ಇಸ್ತಾನ್​ಬುಲ್​ಗೆ ತೆರಳಿದ್ದ ಇಂಡಿಗೋ ಸಂಸ್ಥೆಯ ವಿಮಾನದ ಎಲ್ಲಾ ಪ್ರಯಾಣಿಕರ ಲಗೇಜುಗಳನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಹೋಗಿರುವ ಘಟನೆ ನಡೆದಿದೆ. ಇಸ್ತಾನ್​ಬುಲ್​ಗೆ ತೆರಳುತ್ತಿದ್ದ 130ಕ್ಕೂ ಹೆಚ್ಚು ಪ್ರಯಾಣಿಕರನ್ನು ವಿಮಾನಕ್ಕೆ ಹತ್ತಿಸಿದ್ದ ವಿಮಾನಯಾನ ಸಂಸ್ಥೆ ಸಿಬ್ಬಂದಿ ಪ್ರಯಾಣಿಕರ ಲಗೇಜ್​ಗಳನ್ನು ವಿಮಾನದೊಳಗೆ ತುಂಬಿಸಲು ಮರೆತುಬಿಟ್ಟಿದ್ದಾರೆ!

ಕೊನೆಗೆ ವಿಮಾನ ಇಸ್ತಾನ್​ಬುಲ್​ ತಲುಪಿದ ಬಳಿಕ ಪ್ರಯಾಣಿಕರು ತಮ್ಮ ಲಗೇಜ್​ಗಳನ್ನು ತೆಗೆದುಕೊಳ್ಳಲು ಲಗೇಜ್​ ಬೆಲ್ಟ್​ ಬಳಿಗೆ ಹೋದಾಗ ಈ ಎಡವಟ್ಟು ಗೊತ್ತಾಗಿದೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ಅಲ್ಲಿನ ಸಿಬ್ಬಂದಿಗಳನ್ನು ಪ್ರಶ್ನಿಸಿದಾಗ. ವಿಮಾನಯಾನ ಸಂಸ್ಥೆಯಿಂದಾಗಿರುವ ತಪ್ಪಿಗೆ ಕ್ಷಮೆ ಕೋರಿ, ಆದಷ್ಟು ಬೇಗ ಲಗೇಜ್​ಗಳನ್ನು ತರಿಸಿಕೊಡುವುದಾಗಿ ಪ್ರಯಾಣಿಕರನ್ನು ಸಮಧಾನಪಡಿಸಲು ಯತ್ನಿಸಿದ್ದಾರೆ.

ವಿಮಾನ ಸಂಸ್ಥೆಯ ಸಿಬ್ಬಂದಿ ಎಲ್ಲ ಪ್ರಯಾಣಿಕರ ವಿವರಗಳನ್ನು ಪಡೆದುಕೊಂಡು, ಲಗೇಜ್​ ತಲುಪಿಸುವುದಾಗಿ ವೈಯಕ್ತಿಕವಾಗಿ ಭರವಸೆಯನ್ನೂ ನೀಡಿದ್ದಾರೆ. ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಪ್ರಯಾಣಿಕರಿಗೆ ವೈಯಕ್ತಿಕವಾಗಿ ಕ್ಷಮೆ ಕೇಳಿ ಕೊಟ್ಟ ಪತ್ರದ ಚಿತ್ರವನ್ನು #shameonindigo @IndiGo6E ಎಂಬ ಹ್ಯಾಶ್​ಟ್ಯಾಗ್​ನಲ್ಲಿ ಟ್ವೀಟ್​ ಮಾಡಿ ತಮ್ಮ ಬೇಸರವನ್ನು ಹೊರಹಾಕುತ್ತಿದ್ದಾರೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top