fbpx
ಸಮಾಚಾರ

ನಾಲ್ಕು ತಿಂಗಳಲ್ಲಿ ಬಿಎಸ್‌ವೈ ಸರ್ಕಾರ ಪತನ? ಕೋಡಿಹಳ್ಳಿ ಶ್ರೀಗಳು ನುಡಿದ ಭವಿಷ್ಯವೇನು?

ಸಿಎಂ ಬಿಎಸ್‌ ಯಡಿಯೂರಪ್ಪ ಅವರ ಸರಕಾರ ಪೂರ್ಣಾವಧಿ ಪೂರೈಸುವ ಬಗ್ಗೆ ಮಾತನಾಡಿದ ಕೋಡಿಹಳ್ಳಿ ಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಚುನಾವಣೆ ಪೂರ್ವದಲ್ಲೇ ಹೇಳಿದಂತೆ ಒಂದು ವರ್ಷ 18 ತಿಂಗಳಲ್ಲಿ ಮತ್ತೆ ಮತ ಬೇಡುತ್ತಾರೆ ಎಂದು ತಮ್ಮ ಭವಿಷ್ಯವನ್ನು ಪುನರಾವರ್ತಿಸಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಬಿಎಸ್‍ವೈ ಸರ್ಕಾರದ ಪತನದ ಮುನ್ಸೂಚನೆ ನೀಡಿದ್ದಾರೆ. ಮಧ್ಯಂತರ ಚುನಾವಣೆ ಸನಿಹ ಬಂದಿದೆ ಎಂಬ ವಿಚಾರ ಕೇಳಿದಾಗ ಮೈತ್ರಿ ಸರ್ಕಾರ 14 ತಿಂಗಳಿಗೆ ಪತನವಾಗಿದೆ. ಇನ್ನೂ ಕಾಲಾವಕಾಶ ಇದೆ ಕಾದು ನೋಡಿ ಎಂದರು.

ಏನದು ಭವಿಷ್ಯ:
ವಿಧಾನಸಭೆ ಚುನಾವಣೆಗು ಮೊದಲು ದಿಲ್ಲಿಯಲ್ಲಿ ಭವಿಷ್ಯ ನುಡಿದಿದ್ದ ಕೋಡಿಹಳ್ಳಿ ಶ್ರೀಗಳು ರಾಜ್ಯದಲ್ಲಿ ಯಾವುದೇ ಸರಕಾರ ಬಂದರೂ 1 ವರ್ಷ 18 ತಿಂಗಳಲ್ಲಿ ಮತ್ತೆ ಚುನಾವಣೆ ನಡೆಯುವ ಬಗ್ಗೆ ಮುನ್ಸೂಚನೆ ನೀಡಿದ್ದರು. ಇದೀಗ ಚುನಾವಣೆ ನಡೆದು 1 ವರ್ಷ 14 ತಿಂಗಳೇ ಕಳೆದಿವೆ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಎಂಬುದನ್ನು ನೋಡುವಿರಂತೆ ಎನ್ನುವ ಮೂಲಕ ಕೋಡಿಹಳ್ಳಿ ಶ್ರೀಗಳು ಪರೋಕ್ಷವಾಗಿ ಮಧ್ಯಂತರ ಚುನಾವಣೆ ಸನ್ನಿಹಿತಿ ಎಂದು ಭವಿಷ್ಯ ನುಡಿದಿದ್ದಾರೆ.

ಇದೆ ವೇಳೆ ರಾಜ್ಯದಲ್ಲಿ ಪ್ರವಾಹದ ಲಕ್ಷಣ ಕಾರ್ತಿಕ ಕಳೆಯುವವರೆಗೂ ಇರಲಿದೆ, ಡಿ ಕೆ ಶಿವಕುಮಾರ್ ಇಡಿ ಪ್ರಕರಣ ಹಾಗೂ ಅನರ್ಹ ಶಾಸಕರ ಪ್ರಕರಣದ ಭವಿಷ್ಯ ಹೇಳುವುದರೆ,ದೈವತ್ವದ ಬೆಲೆ ಇಲ್ಲದಾಗುತ್ತೆ,ದೇವರು,ಧರ್ಮ ಹೇಳಬಹುದು. ರಾಜಕೀಯ ಏನು ಮಾಡೋಕೆ ಹೇಳೋದು ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top