fbpx
ಸಮಾಚಾರ

ತಿಹಾರ್ ಜೈಲಿಗೆ ಡಿಕೆಶಿ ಶಿಫ್ಟ್: ತಿಹಾರ್ ಜೈಲು ಸೇರಿದ ಕರ್ನಾಟಕ ಮೊದಲ ರಾಜಕಾರಣಿ.

ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಆರೋಗ್ಯ ಸ್ಥಿರವಾಗಿದೆ ಎಂಬ ವೈದ್ಯರ ವರದಿಯ ಹಿನ್ನೆಲೆಯಲ್ಲಿ ಪೊಲೀಸರು ಗುರುವಾರ ಬೆಳಗ್ಗೆ ತಿಹಾರ್ ಜೈಲಿಗೆ ಕರೆದೊಯ್ದಿರುವುದಾಗಿ ವರದಿ ತಿಳಿಸಿದೆ.

ಹವಾಲಾ ದಂಧೆಯಿಂದಾಗಿ ಇಡಿ ಸುಳಿಗೆ ಸಿಕ್ಕ ಡಿಕೆ ಶಿವಕುಮಾರ್ ಬಂಧನವಾಗಿತ್ತು. ಆದರೆ ರಕ್ತದೊತ್ತಡ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕಾಂಗ್ರೆಸ್‌ನ ಟ್ರಬಲ್ ಶೂಟರ್ ಡಿಕೆಶಿಗೆ ದೆಹಲಿಯ ಆರ್‌ಎಂಎಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೀಗ RML ಆಸ್ಪತ್ರೆ ವೈದ್ಯರ ವರದಿ ಮೇಲೆ ಡಿಕೆಶಿಯನ್ನು ತಿಹಾರ್ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಈ ಮೂಲಕ ಡಿಕೆಶಿ ತಿಹಾರ್ ಜೈಲು ಸೇರಿದ ಕರ್ನಾಟಕದ ಮೊದಲ ರಾಜಕಾರಣಿಯಾಗಿದ್ದಾರೆ.

ಈಗಾಗಲೇ ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಇ.ಡಿ.ಯಿಂದ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಅವರನ್ನು ಇರಿಸಲಾಗಿರುವ ‌ಬ್ಯಾರಕ್ ಸಂಖ್ಯೆ 7ರಲ್ಲೇ ಶಿವಕುಮಾರ್ ಅವರನ್ನು ಇರಿಸಲಾಗುತ್ತದೆ ಎಂದು ತಿಳಿದುಬಂದಿದೆ. ಇಂದು ಮಧ್ಯಾಹ್ನ 3 ಗಂಟೆಗೆ ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಅವರಿಗೆ ಜೈಲಾಗುತ್ತಾ? ಅಥವಾ ಬೇಲ್ ಸಿಗುತ್ತಾ? ಕಾದು ನೋಡಬೇಕಷ್ಟೇ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top