fbpx
ಸಮಾಚಾರ

“ನನ್ನ ಮಗಳು ನನ್ನ ಬಳಿಯೇ ಬರಲ್ಲ” ರಾಧಿಕಾ ಕುಮಾರಸ್ವಾಮಿ ಹೀಗೆ ಹೇಳಿದ್ಯಾಕೆ?

ಸ್ಯಾಂಡಲ್ ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ದಮಯಂತಿ’ ಬಿಡುಗಡೆಗೆ ರೆಡಿಯಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ತೆರೆ ಕಾಣುತ್ತಿದ್ದು ನವರಸನ್ ಈ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ. ಸದ್ಯ ‘ದಮಯಂತಿ’ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲೂ ಹಾರರ್ ಲುಕ್​​ನಲ್ಲಿ ಕಾಣಿಸಿಕೊಂಡಿರುವ ರಾಧಿಕಾ ಅವತಾರ ಬೆಚ್ಚಿಬೀಳಿಸುವಂತಿದೆ.

ಟೀಸರ್ ನೋಡಿದ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ರಾಧಿಕಾ ಕುಮಾರಸ್ವಾಮಿ, ಖುದ್ದು ಅವರೇ ಅಚ್ಚರಿಗೊಂಡಿರುವುದಾಗಿ ತಿಳಿಸಿದ್ದಾರೆ. “:ಈ ಸಿನಿಮಾ ರಿಲೀಸ್ ಆದಮೇಲೆ ನನ್ನ ಮಗಳಾಗಲೀ, ನನ್ನ ಅಣ್ಣನ ಮಕ್ಕಳು ನನ್ನ ಹತ್ತಿರ ಬರಲ್ಲ ಅಂತ ಅನ್ನಸ್ತಿದೆ. ಏಕೆಂದರೆ ನನ್ನ ಪಾತ್ರವು ಆ ಮಟ್ಟಿಗೆ ಭಯಾನಕವಾಗಿದೆ. ಹೀಗಾಗಿ ಚಿತ್ರ ನೋಡಿ ಮಗಳು ಹತ್ತಿರ ಬರಲ್ಲ ಅನಿಸಲು ಆರಂಭಿಸಿದೆ ಎಂದು ರಾಧಿಕಾ ತಿಳಿಸಿದರು.

 

 

ಇನ್ನು ರಾಧಿಕಾ ಅಭಿನಯದ ಭೈರಾದೇವಿ ಚಿತ್ರ ಕೂಡ ಚಿತ್ರೀಕರಣ ನಡೆಯುತ್ತಿದ್ದು, ಇದಕ್ಕೂ ದಮಯಂತಿ ಚಿತ್ರದ ಕಥೆಗೂ ಯಾವುದೇ ಸಂಬಂಧವಿಲ್ಲ. ಹಾಗೆಯೇ ಈ ಎರಡು ಸಿನಿಮಾಗಳನ್ನು ವಿಭಿನ್ನ ಸಮಯದಲ್ಲಿ ಬಿಡುಗಡೆ ಮಾಡುವುದಾಗಿ ರಾಧಿಕಾ ತಿಳಿಸಿದರು. ಇದು ಹಾರರ್, ಥ್ರಿಲ್ಲರ್, ಕಾಮಿಡಿಯನ್ನು ಹೊಂದಿರಲಿದೆ ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top