fbpx
ಸಮಾಚಾರ

“ಬೇರೆಯವರ ಸಿನಿಮಾ ಚೆನ್ನಾಗಿದೆ ಅಂತ ಹೊಟ್ಟೆಕಿಚ್ಚು ಪಡಬಾರದು” ಸ್ಟಾರ್ ವಾರ್ ಬಗ್ಗೆ ಶಿವಣ್ಣ ಖಡಕ್ ಮಾತು

ಬಾಕ್ಸ್ ಆಫೀಸ್ ಭಾರೀ ಸದ್ದು ಮಾಡುತ್ತಿರುವ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾವ್’ ಸಿನಿಮಾದ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಗರದ ಒರಾಯನ್ ಮಾಲ್‍ನಲ್ಲಿ ಸಿನಿಮಾ ವೀಕ್ಷಿಸಿ ಮಾತನಾಡಿದ ಶಿವಣ್ಣ, ” ಪೈಲ್ವಾನ್ ಸಿನಿಮಾ ತುಂಬಾ ಚೆನ್ನಾಗಿದೆ. ಕುಸ್ತಿ ಸಂಸ್ಕೃತಿಯನ್ನು ಉತ್ತಮವಾಗಿ ಬಿಂಬಿಸಲಾಗಿದೆ. ಸುದೀಪ್ ಸುಂದರವಾಗಿ ಕಾಣಿಸುತ್ತಾರೆ ಅವರ ಅಭಿನಯ ಅದ್ಭುತವಾಗಿದ್ದು, ಪಾತ್ರಕ್ಕೆ ತಕ್ಕಂತೆ ಮೈಕಟ್ಟು ಬೆಳೆಸಿಕೊಂಡಿದ್ದಾರೆ. ನಿರ್ದೇಶಕ ಎಸ್.ಕೃಷ್ಣ ಅವರು ಕೂಡ ಉತ್ತಮ ಸಿನಿಮಾವನ್ನು ಪ್ರೇಕ್ಷಕರಿಗೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ಟಾರ್ ವಾರ್ ವಿಚಾರವಾಗಿ ಪ್ರತಿಕ್ರಿಯೆ:
ಈ ವೇಳೆ ಸ್ಟಾರ್ ವಾರ್ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವಣ್ಣ “ಎಲ್ಲರೂ ಒಂದೇ ಕುಟುಂಬದವರು ಅಂತಿರಬೇಕು. ಅವರು ದೊಡ್ಡವರು ಅಂತಲ್ಲ, ಇವರು ದೊಡ್ಡವರು ಅಂತಲ್ಲ. ಎಲ್ಲರಿಗಿಂತ ದೊಡ್ಡವನು ಮೇಲಿರುವವನು. ಅವನು ಎಲ್ಲವನ್ನು ನೋಡುತ್ತಿರುತ್ತಾನೆ.. ಅಭಿಮಾನಿಗಳಿಗೂ ಅಷ್ಟೇ ನಟರೂ ಅಷ್ಟೇ ತಪ್ಪು ಯಾರೇ ಮಾಡಿದ್ರೂ ಅದು ತಪ್ಪೇ. ಆ ತಪ್ಪು ನನ್ನ ಕಡೆಯಿಂದ ಆಯ್ತಾ, ಬೇರೆಯವರ ಕಡೆಯಿಂದ ಆಯ್ತಾ ಅದು ಮುಖ್ಯ ಅಲ್ಲ. ತಪ್ಪು ತಪ್ಪೇ. ಎಲ್ಲಾರೂ ಒಂದೇ.”

“ಕನ್ನಡದಲ್ಲಿ ಒಳ್ಳೆಯ ಸಿನಿಮಾ ಬಂತು ಅಂದ್ರೆ ಅದನ್ನು ನೋಡಿ ಹೆಮ್ಮೆ ಪಡಬೇಕು. ಬೇರೆಯವರ ಸಿನಿಮಾ ಚೆನ್ನಾಗಿ ಬಂತು ಅಂತ ಹೊಟ್ಟೆಕಿಚ್ಚು ಪಡಬಾರದು. ಅದನ್ನು ಬೇರೆ ರೀತಿ ದುರುಪಯೋಗ ಪಡಿಸಿಕೊಳ್ಳಬಾರದು. ಏನೆ ಹೇಳಿದ್ರು ಟಾಂಗ್ ಕೊಟ್ರು ಅಂತ ಮತ್ತೊಂದು ದೊಡ್ಡದಾಗಿ ಹಬ್ಬಿಸುವುದು ಬೇಡ. ದೊಡ್ಡವರು ಹೇಳುತ್ತಿರುವುದನ್ನ ಸ್ವಲ್ಪ ದಯವಿಟ್ಟು ಕೇಳಿ. ಎಲ್ಲರು ಒಂದಾಗಿ ಇರೋಣ” ಎಂದು ಶಿವಣ್ಣ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top