fbpx
ಸಮಾಚಾರ

ಕನ್ನಡದ ಮೊದಲ ನಟಿ ಎಸ್ ಕೆ ಪದ್ಮಾದೇವಿ ವಿಧಿವಶ!

ಕನ್ನಡದಲ್ಲಿ ಸೆಟ್ಟೇರಿದ ಮೊದಲ ವಾಕ್ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ `ಭಕ್ತಧ್ರುವ’(1934) ಚಿತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಎಸ್ ಕೆ ಪದ್ಮಾದೇವಿ ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಪದ್ಮಾದೇವಿ ಅವರಿಗೆ 95 ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗೆ ಬೆಂಗಳೂರಿನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು ಸಂಜೆ ಬನಶಂಕರಿ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

 

 

ಮೂಲತಃ ಬೆಂಗಳೂರಿನವರಾದ ಪದ್ಮಾದೇವಿ, ಬಳ್ಳಾರಿ ರಾಘವಾಚಾರ್ಯರ ಮೂಲಕ ರಂಗಭೂಮಿ ಪ್ರವೇಶಿಸಿದವರು ಹೆಚ್ ಎಲ್ ಎನ್ ಸಿಂಹ ಅವರ ನಾಟಕ ಕಂಪೆನಿಯಲ್ಲಿ ಅಭಿನಯಿಸುತ್ತಾ, ಬಳಿಕ ಸ್ವಂತ ನಾಟಕ ಸಂಸ್ಥೆಯನ್ನೂ ಕಟ್ಟಿದರು. 1936ರಲ್ಲಿ ತೆರೆಕಂಡ ‘ಸಂಸಾರನೌಕ’ ಹೆಸರು ತಂದು ಕೊಟ್ಟ ಚಿತ್ರ ಈ ಚಿತ್ರದಲ್ಲಿ ನಾಲ್ಕು ಹಾಡುಗಳನ್ನು ಹಾಡಿದ್ದು, ಒಂದು ಹಾಡನ್ನು ಸ್ವತಃ ಇವರೇ ವೀಣೆ ನುಡಿಸಿಕೊಂಡು ಹಾಡಿದ್ದು ವಿಶೇಷ.

ಪದ್ಮಾದೇವಿಯವರು ರಂಗಭೂಮಿ ಹಿನ್ನಲೆ ಕುಟುಂಬದಿಂದ ಬಂದವರು. ಇವರ ತಾತ, ಅಪ್ಪ, ಅಮ್ಮ ಎಲ್ಲರೂ ರಂಗಭೂಮಿ ಕಲಾವಿದರು. ಒಂಭತ್ತು ವರ್ಷಕ್ಕೆ ಬಣ್ಣ ಹಚ್ಚುತ್ತಾರೆ. ಮೊದಲ ಸಿನಿಮಾ ಧ್ರುವ ಕುಮಾರ. ಆದರೆ ಅದು ಕಾರಣಾಂತರದಿಂದ ರಿಲೀಸ್ ಆಗಲಿಲ್ಲ. ಆ ನಂತರ ‘ಭಕ್ತಧ್ರುವ’ ಮಾಡುತ್ತಾರೆ.

ಇನ್ನು, ‘ವಸಂತಸೇನ’, ‘ಭಕ್ತ ಸುಧಾಮ’, ‘ಜಾತಕ ಫಲ’ ಚಿತ್ರಗಳಲ್ಲಿಯೂ ನಟಿಸಿದ್ದರು. ಕನ್ನಡ ಅಲ್ಲದೇ ಎರಡು ತೆಲುಗು ಚಿತ್ರಗಳಲ್ಲಿಯೂ ಇವರು ಅಭಿನಯಿಸಿದ್ದರು. ರಂಗಭೂಮಿಯಲ್ಲೇ ತೊಡಗಿಕೊಂಡು ಬಹಳ ಕಾಲದಿಂದ ಚಲನಚಿತ್ರದ ಅಭಿನಯ ನಿಲ್ಲಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top