fbpx
ಸಿನಿಮಾ

ನೇರವಾಗಿಯೇ ಡಬ್ಬಿಂಗ್ ಬೆಂಬಲಿಸಿದ ಕಿಚ್ಚ ಸುದೀಪ್!

ಕನ್ನಡ ಚಿತ್ರರಂಗದಲ್ಲಿ ಪರಭಾಷಾ ಚಿತ್ರಗಳ ಡಬ್ಬಿಂಗ್ ಬಗೆಗಿನ ಚರ್ಚೆ, ವಾದ ವಿವಾದ ಆರಂಭವಾಗಿ ವರ್ಷಗಳೇ ಕಳೆದಿವೆ. ಡಬ್ಬಿಂಗ್‌ನಿಂದ ಸ್ಥಳೀಯ ಕಲಾವಿದರಿಗೆ ತೊಂದರೆ ಆಗುತ್ತದೆ, ಅನೇಕ ಜೂನಿಯರ್ ಆರ್ಟಿಸ್ಟ್ ಗಳು ಕೆಲಸಗಳನ್ನು ಕಳೆದುಕೊಳ್ಳುತ್ತಾರೆ ಎಂದು ಕೆಲವರು ವಾದಿಸಿದರೆ ಇನ್ನೂ ಕೆಲವರಿ ಡಬ್ಬಿಂಗ್ ಇದು ಕನ್ನಡದ ಪರ. ಪರಭಾಷಾ ಚಿತ್ರಗಳು ಕನ್ನಡದಲ್ಲೇ ಬಿಡುಗಡೆಯಾಗುವುದರಿಂದ ಕನ್ನಡವೂ ಎಲ್ಲೆಡೆ ಪಸರುತ್ತದೆ ಎಂದು ವಾದಿಸುತ್ತಾರೆ.. ಇದೀಗ ಡಬ್ಬಿಂಗ್ ಕುರಿತಾದ ಚರ್ಚೆಗೆ ಮತ್ತೆ ಜೀವ ಬಂದಿದೆ.

 

 

ವರ್ಷಾಂತರಗಳಿಂದ ಕನ್ನಡ ಚಿತ್ರದಲ್ಲಿ ತಲೆದೋರಿದ್ದ ಡಬ್ಬಿಂಗ್ ವಿವಾದಗಳು ಅಂತ್ಯವಾಗುತ್ತಿದ್ದು ಬೇರೆ ಭಾಷೆಯ ಡಬ್ಬಿಂಗ್ ಸಿನಿಮಾಗಳು ಯಾವುದೇ ಅಡೆತಡೆ ಇಲ್ಲದೆ ಕರ್ನಾಟಕದಲ್ಲಿ ಬಿಡುಗಡೆ ಆಗುತ್ತಿವೆ. ಹಾಗೆಯೆ ತೆಲುಗಿನ ಸೈರಾ ನರಸಿಂಹ ರೆಡ್ಡಿ ಚಿತ್ರವೂ ಕೂಡ ಕನ್ನಡದಲ್ಲಿ ಡಬ್ ಆಗಿ ಬರುತ್ತಿದೆ.

ಸೈರಾ ನರಸಿಂಹ ರೆಡ್ಡಿ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಗಿದ್ದು ಕನ್ನಡದಲ್ಲಿಯೂ ರಿಲೀಸ್ ಮಾಡಲಾಗಿದೆ.. ಅಚ್ಚರಿ ಎಂಬಂತೆ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕನ್ನಡ ನಟ ಕಿಚ್ಚ ಸುದೀಪ್ ಅವರು ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದಾರೆ. ಕನ್ನಡ ಅವತರಣಿಕೆಯಲ್ಲಿಯೂ ಸ್ವತಃ ಕಿಚ್ಚನೇ ಡಬ್ ಮಾಡಿದ್ದು ಡಬ್ಬಿಂಗ್ ವಿಚಾರಕ್ಕೆ ತಾವು ನೇರವಾಗಿಯೇ ಬೆಂಬಲ ನೀಡುತ್ತೇವೆ ಎಂಬ ಸೂಚನೆಯನ್ನು ಸುದೀಪ್ ನೀಡಿದ್ದಾರೆ ಎನ್ನಲಾಗುತ್ತಿದೆ.

 

 

ಈಗ ಸೈರಾ ರೆಡ್ಡಿ ಚಿತ್ರದ ಕನ್ನಡ ಅವತರಣಿಕೆ ಕರ್ನಾಟಕದಾದ್ಯಂತ ಬಿಡುಗಡೆಯಾಗಲು ಸ್ವತಃ ಕಿಚ್ಚ ಸುದೀಪ್ ಅವರೇ ತಮ್ಮ ಪಾತ್ರಕ್ಕೆ ಧ್ವನಿ ನೀಡಿರುವುದು ದೊಡ್ಡ ಪಾತ್ರ ವಹಿಸುತ್ತದೆ. ಇನ್ನು ಕಿಚ್ಚ ನಟಿಸುತ್ತಿರುವ ಹಿಂದಿ ಸಿನಿಮಾ ದಬಾಂಗ್ ೩ ಕೂಡ ಕನ್ನಡದಲ್ಲಿಯೂ ಡಬ್ ಆಗುತ್ತಿದ್ದು ಅದರಲ್ಲೂ ಸುದೀಪ್ ಅವರೇ ಡಬ್ ಮಾಡುವುದು ಖಚಿತ ಎನ್ನುವಂತಾಗಿದೆ. ಡಬ್ಬಿಂಗ್ ವಿಚಾರಕ್ಕೆ ಸುದೀಪ್ ರಂತಹ ದೊಡ್ಡ ನಟರೇ ಬೆಂಬಲ ನೀಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಬೇರೆ ಭಾಷೆಯ ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಬರಲು ದೊಡ್ಡ ಮಟ್ಟದ ಪ್ರೇರಣೆಯಾಗಬಹುದು!

ಕನ್ನಡ ಚಿತ್ರರಂಗದಲ್ಲಿ ಈಗಲೂ ಡಬ್ಬಿಂಗ್ ಬಹುಚರ್ಚಿತ ವಿಷಯ. ಹೀಗಾಗಿಯೇ ಡಬ್ಬಿಂಗ್ ವಿಷಯ ಅನೇಕರು ವಿರೋಧಿಸುತ್ತಾರೆ. ಕಿಚ್ಚ ಸುದೀಪ್ ಕೂಡ ಈ ಹಿಂದೆ ಡಬ್ಬಿಂಗ್ ವಿರೋಧಿಸಿದ್ದರು. ಆದರೆ ಬದಲಾದ ಸಂದರ್ಭದಲ್ಲಿ ಅವರು ನೇರವಾಗಿ ಡಬ್ಬಿಂಗ್‌ಗೆ ಜೈ ಎಂದಿದ್ದಾರೆ.

ಇನ್ನು ಕಳೆದ ಕೆಲ ವರ್ಷಗಳಿಂದ ಸದಾ ಸುದ್ದಿಗೆ ಗುರಿಯಾಗುತ್ತಿದ್ದ ಡಬ್ಬಿಂಗ್ ವಿವಾದವು ಈಗ ನಿಧಾನವಾಗಿ ತಣ್ಣಗಾಗಿರುವುದನ್ನು ನಾವೆಲ್ಲಾ ಗಮನಿಸಬಹುದು. ಅಘೋಷಿತ ಡಬ್ಬಿಂಗ್ ನಿಷೇಧದ ಕಾಲದಿಂದ ಮುಂದೆ ಬಂದು ಕಳೆದ ಮೂರು ವರ್ಷಗಳಲ್ಲಿ ಡಬ್ಬಿಂಗ್ ಚಿತ್ರಗಳ ಬಿಡುಗಡೆ, ಮೂಲ ಚಿತ್ರಗಳ ಜೊತೆ ಏಕಕಾಲಕ್ಕೆ ಡಬ್ಬಿಂಗ್ ಆದ ಚಿತ್ರಗಳ ಬಿಡುಗಡೆ, ಕನ್ನಡದಲ್ಲಿ ತನ್ನದೇ ಆದ ಕ್ರೀಡೆಯ ಚಾನೆಲ್, ಕನ್ನಡೀಕರಣಗೊಂಡ ಕಾರ್ಟೂನುಗಳು ಕೂಡ ಪ್ರಸಾರವಾಗುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top