fbpx
ಸಮಾಚಾರ

ದಸರಾ ಹಬ್ಬಕ್ಕೆ ಅಭಿಮಾನಿಗಳಿಗೆ ಬಿಗ್​ ಗಿಫ್ಟ್​: ಯುವರತ್ನ ಟೀಂನಿಂದ ಸಿಕ್ತು ಸಿಹಿ ಸುದ್ದಿ!

ಬರೀ ಫಸ್ಟ್ ಲುಕ್ ಮೂಲಕವೇ ಚಂದವನದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಚಿತ್ರ‘ಯುವರತ್ನ’. ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗಂತೂ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಸದ್ಯಕ್ಕೀಗ ಈ ಚಿತ್ರದ ಟೀಸರ್ ಬಗೆಗಿನ ಕಾತರ ಸಾಕಷ್ಟು ಸದ್ದು ಮಾಡುತ್ತಿದೆ.

 

 

ದಸರಾ ಹಬ್ಬದಂದು ಪುನೀತ್​ ಚಿತ್ರದ ಟೀಸರ್​ ರಿಲೀಸ್ ಆಗಲಿದೆ. ಈ ಬಗ್ಗೆ ಟ್ವಿಟ್ಟರ್​ನಲ್ಲಿ ಬರೆದುಕೊಂಡಿರುವ ಪುನೀತ್​ ರಾಜ್​ಕುಮಾರ್​​, “ಈ ದಸರಾ ಹಬ್ಬಕ್ಕೆ ಯುವರತ್ನ ಚಿತ್ರದ ಟೀಸರ್​ ರಿಲೀಸ್ ಆಗಲಿದೆ,” ಎಂದು ಬರೆದುಕೊಂಡಿದ್ದಾರೆ. ಶೀಘ್ರದಲ್ಲೇ ಅವರು ದಿನಾಂಕ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

ಚಿತ್ರದಲ್ಲಿಕಾಲೇಜು ಹುಡುಗನಾಗಿ ಪುನೀತ್​ ಕಾಣಿಸಿಕೊಳ್ಳುತ್ತಿದ್ದಾರೆ. ಪವರ್ ಸ್ಟಾರ್‌ಗೆ ನಾಯಕಿಯಾಗಿ ಸಾಯೇಷಾ ಸೈಗಲ್, ಇತರ ತಾರಾಗಣದಲ್ಲಿ ಡಾಲಿ ಧನಂಜಯ್, ರಾಧಿಕಾ ಶರತ್‌ಕುಮಾರ್, ಪ್ರಕಾಶ್ ರಾಜ್, ಸಾಯಿ ಕುಮಾರ್, ಸೋನು ಗೌಡ, ಕುರಿ ಪ್ರತಾಪ್,ಅ ಚ್ಯತ್ ಕುಮಾರ್, ಗುರುದತ್, ಆರು ಗೌಡ, ತ್ರಿವೇಣಿ, ರವಿಶಂಕರ್ ಗೌಡ, ವಸಿಷ್ಠ ಸಿಂಹ, ರಂಗಾಯಣ ರಘು ಮುಂತಾದವರು ನಟಿಸುತ್ತಿದ್ದಾರೆ. ಶೇ.65 ಚಿತ್ರೀಕರಣ ಮುಗಿಸಿದ್ದು, ನಿಗದಿತ ಸಮಯಕ್ಕೆ ಸರಿಯಾಗಿ ಸಂಪೂರ್ಣ ಶೂಟಿಂಗ್ ಮುಗಿಸಬೇಕು ಎಂದು ಚಿತ್ರತಂಡ ಪ್ಲ್ಯಾನ್ ಮಾಡಿದೆ ಅಂತ ನಿರ್ದೇಶಕ ಸಂತೋಷ್ ಆನಂದರಾಮ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top