fbpx
ಸಮಾಚಾರ

ಬಿಗ್ ಬಾಸ್ ಆಂಡ್ರ್ಯೂಗೆ ಕೂಡಿ ಬಂತು ಕಂಕಣ ಭಾಗ್ಯ: ಹುಡುಗಿ ಯಾರು ಗೊತ್ತಾ?

”ಬಿಗ್‌ ಬಾಸ್ ಕನ್ನಡ ಸೀಸನ್‌ 6’ರಲ್ಲಿ ಹೆಚ್ಚಾಗಿ ಗಮನ ಸೆಳೆದಿದ್ದ ಆಂಡ್ರ್ಯೂ ಜಯಪಾಲ್ ಈಗ ದಾಂಪತ್ಯ ಜೀವನಕ್ಕೆ ಸಜ್ಜಾಗಿದ್ದಾರೆ. ಬಹುಕಾಲದ ಗೆಳೆತಿ ಜನನಿ ಗಣೇಶ್ ಎಂಬುವವರ ಜೊತೆ ಮದುವೆಯಾಗಲು ತಯಾರಾಗಿದ್ದಾರೆ.

ಜನನಿ ಬೆಂಗಳೂರಿನ ಪ್ರತಿಷ್ಠಿತ ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಆಂಡ್ರ್ಯೂಗೆ ಫ್ಯಾಮಿಲಿ ಫ್ರೆಂಡ್ ಆಗಿದ್ದರಂತೆ. ಮನೆಯವರು ಈ ಮದುವೆಗೆ ಒಪ್ಪಿದ್ದಾರಂತೆ. ಹೀಗಾಗಿ ಇದು ಪೂರ್ಣ ಪ್ರಮಾಣದ ಲವ್ ಮ್ಯಾರೇಜ್ ಅಲ್ಲ, ಲವ್ ಮ್ಯಾರೇಜ್ ಕೂಡ ಅಲ್ಲ ಎನ್ನುತ್ತಾರೆ ಆಂಡ್ರ್ಯೂ. ತುಂಬ ರೋಮ್ಯಾಂಟಿಕ್ ವೇದಲ್ಲಿ ಆಂಡ್ರ್ಯೂ ಜನನಿಗೆ ಪ್ರಫೋಸ್ ಮಾಡಿದ್ದಾರಂತೆ

ಪರಸ್ಪರ ಪ್ರೀತಿಸುತ್ತಿರುವ ಆ್ಯಂಡಿ ಹಾಗೂ ಜನನಿ ಮುಂದಿನ ವರ್ಷ, 2020ರಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ. ಅಲ್ಲದೆ ಈ ಬಗ್ಗೆ ತಮ್ಮ ಪಾಲಕರ ಬಳಿಯೂ ಮಾತನಾಡಿದ್ದು ಅವರ ಒಪ್ಪಿಗೆ ಪಡೆದಿದ್ದಾರೆ. ಆ್ಯಂಡಿ ಸದ್ಯ ಕನ್ನಡ ಚಾನೆಲ್​ವೊಂದರಲ್ಲಿ ಪ್ರಸಾರವಾಗುತ್ತಿರುವ ‘ಬಿಲ್​ ನಮ್ದು, ದುಡ್ಡು ನಿಮ್ದು’ ಕಾರ್ಯಕ್ರಮ ನಿರೂಪಕರಾಗಿ ಕೆಲಸ ಮಾಡುತ್ತಿದ್ದಾರೆ. ಜತೆಜತೆಗೆ ಫಿಟ್ನೆಸ್​ ಬಗ್ಗೆಯೂ ಗಮನಹರಿಸುತ್ತಿದ್ದು ದೊಡ್ಡ ದೇಹದ ತೂಕ ಇಳಿಸಿಕೊಳ್ಳಲು ತೀವ್ರವಾಗಿ ಶ್ರಮಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top