fbpx
ಸಮಾಚಾರ

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ: ಬಿಜೆಪಿ ನಾಯಕ ಚಿನ್ಮಯಾನಂದ ಬಂಧನ

ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಭಾರತೀಯ ಜನತಾ ಪಕ್ಷದ ನಾಯಕ ಸ್ವಾಮಿ ಚಿನ್ಮಯಾನಂದ ಅವರನ್ನು ಪೊಲೀಸರು ಶುಕ್ರವಾರ ಬೆಳಿಗ್ಗೆ ಬಂಧಿಸಿದ್ದಾರೆ. ಸ್ವಾಮಿ ಚಿನ್ಮಯಾನಂದ ಅವರು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರಗೆ ತೆರಳುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಸ್ವಾಮಿ ಚಿನ್ಮಯಾನಂದ ಅವರ ಆರೋಗ್ಯ ಕುರಿತು ತಜ್ಞ ವೈದ್ಯರ ತಂಡ ನಿಗಾವಹಿಸಿದ್ದು, ಅವರ ರಕ್ತದಲ್ಲಿ ಸಕ್ಕರೆ ಏರುಪೇರಾಗುತ್ತಿರುವುದು ಚಿಕಿತ್ಸೆ ಕಲ್ಪಿಸಲು ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಾರೆ. ಸೋಮವಾರ ರಾತ್ರಿ ದಿಢೀರ್ ಅಸ್ವಸ್ಥಗೊಂಡ ಸ್ವಾಮಿ ಅವರಿಗೆ ನಿವಾಸದಲ್ಲೇ ವೈದ್ಯರು ಚಿಕಿತ್ಸೆ ಕಲ್ಪಿಸುತ್ತಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಶಹಜಾನ್​ಪುರದ ಸಂತ್ರಸ್ತ ಯುವತಿಯು ತನ್ನ ಮೇಲೆ ಸ್ವಾಮಿ ಚಿನ್ಮಯಾನಂದ ನಡೆಸಿದ ಲೈಂಗಿಕ ದೌರ್ಜನ್ಯ ಬಗ್ಗೆ ಮ್ಯಾಸ್ಟ್ರೇಟ್ ಬಳಿ ಹೇಳಿಕೆ ದಾಖಲಿಸಿದ್ದರು. ಚಿನ್ಮಯಾನಂದ ಅವರನ್ನು ಕೂಡಲೇ ಬಂಧಿಸದಿದ್ದರೆ ಬೆಂಕಿ ಹಚ್ಚಿಕೊಂಡು ಸಾಯುವುದಾಗಿಯೂ ಆ ಯುವತಿ ಬೆದರಿಕೆ ಹಾಕಿದ್ದರು.

ಏನಿದು ಘಟನೆ:
ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಕಾನೂನು ಪದವಿಗಾಗಿ ಪ್ರವೇಶ ಪಡೆದ ಸಂದರ್ಭದಲ್ಲಿ ಸ್ವಾಮಿ ಚಿನ್ಮಯಾನಂದ ನನಗೆ ಕೆಲಸ ನೀಡುವ ಭರವಸೆ ನೀಡಿದರು. ಅಂದು ಕತ್ತಲಾಗುವವರೆಗೂ ನಾನು ಕಾಲೇಜಿನಲ್ಲೇ ಇರಬೇಕಾದ ಅನಿವಾರ್ಯತೆ ಸೃಷ್ಟಿಸಿದರು. ಬಳಿಕ ಕಾಲೇಜು ಸಿಬ್ಬಂದಿಯ ಬಲವಂತದ ಮೇರೆಗೆ ನಾನು ಹಾಸ್ಟೇಲ್‌ನಲ್ಲಿಯೇ ಉಳಿದುಕೊಂಡೆ. ಈ ವೇಲೆ ನಾನು ಸೇರಿದಂತೆ ಹಲವು ವಿದ್ಯಾರ್ಥಿನಿಯರ ಮೇಲೆ ಚಿನ್ಮಯಾನಂದ ಲೈಂಗಿಕ ಕೌರ್ಜನ್ಯ ಎಸಗಿದರು. ಆದರೆ, ಈ ಸಂಬಂಧ ನಾನೊಬ್ಬಳೆ ಧ್ವನಿ ಎತ್ತುವ ಧೈರ್ಯ ತೆಗೆದುಕೊಂಡೆ ಎನ್ನುವುದು ಯುವತಿಯ ಆರೋಪವಾಗಿದೆ.

ಆಕೆ ತನ್ನ ಹೇಳಿಕೆಯನ್ನು ಅಪರಾಧ ದಂಡ ಸಂಹಿತೆ ಸೆಕ್ಷನ್ 164ರಡಿ ದಾಖಲಿಸಿದ್ದು, ಪೊಲೀಸರು ತಕ್ಷಣವೇ ಸ್ವಾಮಿ ಅವರನ್ನು ಬಂಧಿಸಬೇಕಿದೆ. ಪೊಲೀಸರು ಚಿನ್ಮಯಾನಂದ ವಿರುದ್ದ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಪೊಲೀಸರ ಕಾರ್ಯನಿರ್ಹಹಣೆಯ ಮೇಲೆಯೇ ಸಂಶಯ ಬರುತ್ತಿದೆ ಎಂದು ಸಂತ್ರಸ್ಥೆಯ ಕುಟುಂಬ ಸದಸ್ಯರು ದೂರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top