fbpx
ಸಮಾಚಾರ

ಇನ್ಮುಂದೆ ಎಲ್ಲಾ ಸರ್ಕಾರೀ ಸಭೆಗಳು ಲೈವ್ ಆಗಲಿವೆ.

ಮುಂದಿನ ದಿನಗಳಲ್ಲಿ ಸರ್ಕಾರದ ಎಲ್ಲಾ ಸಭೆಗಳು ಮತ್ತು ಕ್ಯಾಬಿನೆಟ್ ಸಭೆಗಳು ಸಾಮಾಜಿಕ ಜಾಲತಾಣಗಳ ಮೂಲಕ ಲೈವ್ ಆಗಲಿವೆಯಂತೆ. ಸರ್ಕಾರದ ಎಲ್ಲಾ ಇಲಾಖೆಗಳ ಕೆಲಸದಲ್ಲಿ ಪಾರದರ್ಶಕತೆ ಇರಬೇಕು ಆಗಲೇ ಸರ್ಕಾರದ ಕೆಲಸಗಳ ಮಾಹಿತಿ ಸಾರ್ವಜನಿಕರ ಗಮನಕ್ಕೆ ಸುಲಭವಾಗಿ ಸಿಗುತ್ತದೆ. ಹಾಗೂ ಇದರಿಂದ ಸರ್ಕಾರದ ಕೆಲಸದ ದಕ್ಷತೆ ಕೂಡ ಹೆಚ್ಚುತ್ತದೆ. ಸಾರ್ವಜನಿಕರು ಕೂಡ ಸರ್ಕಾರದ ಕೆಲಸದಲ್ಲಿ ಪಾರದರ್ಶಕತೆ ಇರಬೇಕು ಎಂದು ಬಯಸುತ್ತಾರೆ.

 

 

ಇದೀಗ ಇಂಥಾ ಹೆಜ್ಜೆಯೊಂದು ಇಡಲು ಕಾರ್ಮಿಕ ಇಲಾಖೆ ಶುರು ಮಾಡಿದೆ. ನೆನ್ನೆ ಕಾರ್ಮಿಕ ಇಲಾಖೆಯ ಸರ್ಕಾರೀ ಸಭೆಯೊಂದು ನಡೆಯಿತು. ಈ ಸಭೆಯನ್ನು ಟ್ವಿಟ್ಟರ್ ನಲ್ಲಿ ಲೈವ್ ಮಾಡಿದ್ದು ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಮುಂದೆ ನಡೆಯುವ ಸಭೆಗಳನ್ನು ಕೂಡ ಲೈವ್ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

 

 

ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಐಎಎಸ್ ಅಧಿಕಾರಿ ಮಣಿವಣ್ಣನ್ ಅವರು ಕೆಲವೊಂದು ಭದ್ರತಾ ವಿಚಾರಗಳನ್ನು ಹೊರತುಪಡಿಸಿ ಎಲ್ಲಾ ಸರ್ಕಾರೀ ಸಭೆಗಳು ಸಾಮಾಜಿಕ ಜಾಲತಾಣದಲ್ಲಿ ಲೈವ್ ಆಗಬೇಕು ಎಂದಿದ್ದಾರೆ.

ಸದ್ಯ ಕಾರ್ಮಿಕ ಇಲಾಖೆಯಲ್ಲಿ ಪ್ರಾರಂಭವಾಗಿರುವ ಈ ಕ್ರಮ ಮುಂದಿನ ದಿನಗಳಲ್ಲಿ ಎಲ್ಲಾ ಇಲಾಖೆಗಳಲ್ಲಿ ಶುರುವಾಗಬೇಕು ಎಂಬುದು ಸಾರ್ವಜನಿಕ ಅಭಿಪ್ರಾಯವಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top