fbpx
ಸಮಾಚಾರ

ಸರ್ಕಾರಿ ಸಭೆಯನ್ನು ಲೈವ್ ಮಾಡಿ ಪಾರದರ್ಶಿಕತೆಗೆ ಮುನ್ನುಡಿ ಬರೆದ ಪಿಸಿ ಮೋಹನ್.

ಸರ್ಕಾರದ ಎಲ್ಲಾ ಇಲಾಖೆಗಳ ಕೆಲಸದಲ್ಲಿ ಪಾರದರ್ಶಕತೆ ಇರಬೇಕು ಆಗಲೇ ಸರ್ಕಾರದ ಕೆಲಸಗಳ ಮಾಹಿತಿ ಸಾರ್ವಜನಿಕರ ಗಮನಕ್ಕೆ ಸುಲಭವಾಗಿ ಸಿಗುತ್ತದೆ. ಹಾಗೂ ಸರ್ಕಾರದ ಕೆಲಸದ ದಕ್ಷತೆ ಕೂಡ ಹೆಚ್ಚುತ್ತದೆ. ಸಾರ್ವಜನಿಕರು ಕೂಡ ಸರ್ಕಾರದ ಕೆಲಸದಲ್ಲಿ ಪಾರದರ್ಶಕತೆ ಇರಬೇಕು ಎಂದು ಬಯಸುತ್ತಾರೆ. ಇದೀಗ ಪಾರದರ್ಶಕತೆ ದೃಷ್ಟಿಯಿಂದ ಸಂಸದ ಪಿಸಿ ಮೋಹನ್ ಹೊಸ ಹೆಜ್ಜೆ ಇಟ್ಟಿದ್ದಾರೆ.

 

ಹೌದು, ಸಂಸದ ಪಿಸಿ ಮೋಹನ್ ಅವರು ಸರ್ಕಾರದ ಸಭೆಯನ್ನು ಲೈವ್ ಮಾಡಿಸುವ ಮೂಲಕ ಪಾರದರ್ಶಿಕತೆಗೆ ಮುನ್ನುಡಿ ಬರೆದಿದ್ದಾರೆ.. ನೆನ್ನೆ ಸಂಸದ ಪಿಸಿ ಮೋಹನ್ ಮತ್ತು ಐಎಎಸ್ ಅಧಿಕಾರಿ ಮಣಿವಣ್ಣನ್ ಅವರ ನೇತೃತ್ವದಲ್ಲಿ ಕಾರ್ಮಿಕ ಇಲಾಖೆಯ ಸರ್ಕಾರೀ ಸಭೆಯೊಂದು ನಡೆಯಿತು. ಈ ಸಭೆಯನ್ನು ಟ್ವಿಟ್ಟರ್ ನಲ್ಲಿ ಲೈವ್ ಮಾಡಿದ್ದು ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ.

 

 

ಸಭೆಯಲ್ಲಿ ಚರ್ಚಿಸಲಾದ ಅನೇಕ ವಿಚಾರಗಳನ್ನು ಸಾರ್ವಜನಿಕರೂ ಕೂಡ ಅತ್ಯಂತ ಸುಲಭವಾಗಿ ನೋಡಲು ಕೈಗೊಂಡು ಈ ಕ್ರಮ ನಿಜಕ್ಕೂ ಮೆಚ್ಚುವಂತದ್ದು ಎಂದು ನೆಟ್ಟಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.. ಸದ್ಯ ಕಾರ್ಮಿಕ ಇಲಾಖೆಯಲ್ಲಿ ಪ್ರಾರಂಭವಾಗಿರುವ ಈ ಕಾರ್ಯ ಮುಂದಿನ ದಿನಗಳಲ್ಲಿ ಎಲ್ಲಾ ಇಲಾಖೆಗಳಲ್ಲಿ ಶುರುವಾದರೆ ಸ್ವಾಗತಾರ್ಹ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top