fbpx
ಸಮಾಚಾರ

ಕೊನೆಗೂ ಇಳಿಕೆಯಾಯ್ತು ಟ್ರಾಫಿಕ್ ದಂಡ: ಯಾವುದಕ್ಕೆ ಎಷ್ಟು? ಇಲ್ಲಿದೆ ಫುಲ್ ಡಿಟೇಲ್ಸ್

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಯ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಇದೀಗ ಸರ್ಕಾರ ದುಬಾರಿ ದಂಡಕ್ಕೆ ಬ್ರೇಕ್ ಹಾಕಿದೆ. ಇದೇ ತಿಂಗಳ 3 ರಿಂದ ಅಂದರೆ ಕಳೆದ 15 ದಿನಗಳಿಂದ ಮೋಟಾರ್ ವಾಹನ ಕಾಯ್ದೆ ತಿದ್ದುಪಡಿಯಾಗಿ, ದೇಶಾದ್ಯಂತ ದುಬಾರಿ ದಂಡ ಹೇರಲಾಗಿತ್ತು. ಈ ದಂಡಕ್ಕೆ ಸವಾರರು ಬೇಸತ್ತು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ದುಬಾರಿ ಟ್ರಾಫಿಕ್ ದಂಡಕ್ಕೆ ಸರ್ಕಾರ ಬ್ರೇಕ್ ಹಾಕಿದೆ.

 

 

ಸಂಚಾರ ಉಲ್ಲಂಘನೆಗೆ ವಿಧಿಸುತ್ತಿರುವ ದುಬಾರಿ ದಂಡ ಇಳಿಕೆ ಮಾಡಿ ಇಂದು [ಶನಿವಾರ] ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಸಂಚಾರ ನಿಯಮ ಉಲ್ಲಂಘನೆ ಪರಿಷ್ಕೃತ ದಂಡವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದ್ದು, ನೂತನದ ದಂಡದ ವಿವರಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ದುಬಾರಿ ದಂಡ ತೆತ್ತು ಸುಸ್ತಾಗಿದ್ದ ವಾಹನ ಸವಾರರಿಗೆ ಕೊಂಚ ರಿಲೀಫ್​ ಸಿಕ್ಕಂತಾಗಿದೆ.

ಹಳೆ ದಂಡ ಮತ್ತು ಹೊಸ ದಂಡದ ವಿವರ ಈ ರೀತಿ ಇದೆ.
ಹೆಲ್ಮೆಟ್ ಹಾಕದಿದ್ದರೆ: 1000ದಿಂದ 500 ರೂ.ಗೆ ಇಳಿಕೆ.
ಸೀಟ್ ಬೆಲ್ಟ್: 1000ದಿಂದ 500ರೂ.ಗೆ ಇಳಿಕೆ.
ಲೈಸೆನ್ಸ್ ಇಲ್ಲದಿದ್ದರೆ: 5000ದಿಂದ 1000ರೂ.ಗೆ ಇಳಿಕೆ
ಮೊಬೈಲ್ ಬಳಕೆ: 10000ದಿಂದ 500ರೂ.ಗೆ ಇಳಿಕೆ
ಡ್ರೀಂಕ್ & ಡ್ರೈವ್: 10000 ಇದನ್ನು ಇಳಿಕೆ ಮಾಡಿಲ್ಲ.
ಅಂಬ್ಯುಲೆನ್ಸ್ ದಾರಿ ಬಿಡದಿದ್ದರೆ: 10000ದಿಂದ 1000ರೂ.ಗೆ ಇಳಿಕೆ
ಅತಿವೇಗ 5000 ರೂ. ದಂಡ ಇಳಿಕೆ ಇಲ್ಲ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top