fbpx
ಸಮಾಚಾರ

ಕೂಲಿ ಕಾರ್ಮಿಕ ಕಷ್ಟಕ್ಕೆ ಸ್ಪಂದಿಸಿದ ಐಎಎಸ್ ಅಧಿಕಾರಿ ಕ್ಯಾಪ್ಟನ್ ಮಣಿವಣ್ಣನ್!

ಪ್ರಸ್ತುತ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಐಎಎಸ್ ಅಧಿಕಾರಿ ಮಣಿವಣ್ಣನ್ ಅವರು ಕೂಲಿ ಕಾರ್ಮಿಕ ಕಷ್ಟಕ್ಕೆ ಸ್ಪಂದಿಸಿದ್ದು ಕಾರ್ಮಿಕರ ಮನಗೆದ್ದಿದ್ದಾರೆ.

ಇತ್ತೀಚಿಗೆ ಕಾರ್ಮಿಕ ಇಲಾಖೆಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿಯವರು ಮಂಡಳಿಯಲ್ಲಿ ಹೊಸ ನಿಯಮಗಳನ್ನು ಅಳವಡಿಸಲು ಮುಂದಾಗಿದ್ದರು.. ಆದರೆ ಅವರ ಕೆಲವು ಹೊಸ ನಿಯಮಗಳು ಕೂಲಿ ಕಾರ್ಮಿಕರಿಗೆ ಮಾರಕಾವಾಗಿದ್ದವು. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ಹೊಸದಾಗಿ ನೋಂದಣಿ ಮಾಡಿಕೊಳ್ಳಬೇಕಾಗದ ಹೊಸ ಕೂಲಿ ಕಾರ್ಮಿಕರು ಕಡ್ಡಾಯವಾಗಿ ಮೊಬೈಲ್ ‘ಒಟಿಪಿ’ ನೀಡಬೇಕು ಎಂಬ ನಿಯಮವನ್ನು ಅಳವಡಿಸಲು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ಮುಂದಾಗಿದ್ದರು.

ಆದರೆ ಸಾಮಾನ್ಯವಾಗಿ ಬಹುತೇಕ ದಿನಗೂಲಿ ಕಾರ್ಮಿಕರು ಮೊಬೈಲ್ ಫೋನ್ ಗಳನ್ನು ಬಳಸದ ಕಾರಣ ಈ ನಿಯಮ ಕಾರ್ಮಿಕರಿಗೆ ಮಾರಕವಾಗಿತ್ತು. ನೋಂದಣಿ ಮಾಡಿಕೊಳ್ಳಲು ಮೊಬೈಲ್ ನೀಡಲು ಎಲ್ಲಾ ಕಾರ್ಮಿಕರಿಗೂ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಕಾರ್ಮಿಕರ ಒಕ್ಕೂಟವು ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದವು.. “ಕೂಲಿ ಕಾರ್ಮಿಕರ ಬಳಿ ಫೋನ್ ಇರುವುದಿಲ್ಲ, ಈ ಹೊಸ ನಿಯಮ ಅನುಸರಿಸಲು ಸಾಧ್ಯವಿಲ್ಲ ಎಂದು” ಕಾರ್ಮಿಕರ ಒಕ್ಕೂಟವು ಇಲಾಖೆಯ ಕಾರ್ಯದರ್ಶಿ ಮಣಿವಣ್ಣನ್ ಅವರಿಗೆ ದೂರು ನೀಡಿತ್ತು.

ಕಾರ್ಮಿಕರ ಒಕ್ಕೂಟದ ದೂರನ್ನು ಪರೀಶೀಲಿಸಿದ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಮಣಿವಣ್ಣನ್ ಅವರು ಕೂಲಿ ಕಾರ್ಮಿಕರ ಪರವಾಗಿ ನಿರ್ಧಾರ ತೆಗೆದುಕೊಂಡರು. ಕೂಲಿ ಕಾರ್ಮಿಕರು ನೋಂದಣಿ ಮಾಡಿಕೊಳ್ಳಲು ಮೊಬೈಲ್ ಒಟಿಪಿಯ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಕೂಲಿ ಕಾರ್ಮಿಕ ಕಷ್ಟಕ್ಕೆ ಬಹುಬೇಗ ಸ್ಪಂದಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top