fbpx
ಸಮಾಚಾರ

ನಟ ದ್ರುವ ಸರ್ಜಾ ಮದುವೆಗೆ ದಿನಾಂಕ ಫಿಕ್ಸ್! ‘ಪೊಗರು’ ಹುಡುಗನ ಕಲ್ಯಾಣಕ್ಕೆ ಭರ್ಜರಿ ತಯಾರಿ.

ಸ್ಯಾಂಡಲ್​ವುಡ್​ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತನ್ನ ಬಹುಕಾಲದ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ತಮ್ಮ ಬಹುಕಾಲದ ಗೆಳತಿ ಪ್ರೇರಣಾ ಶಂಕರ್ ಜೊತೆ ಮದುವೆಯಾಗಲು ಸಿದ್ಧರಾಗಿದ್ದು, ಇದೀಗ ಎರಡು ಕುಟುಂಬದವರು ಸೇರಿ ಮದುವೆ ದಿನಾಂಕ ಫಿಕ್ಸ್ ಮಾಡಿದ್ದಾರೆ. ನವೆಂಬರ್ 23 ಮತ್ತು 24ರಂದು ವಿವಾಹವಾಗುತ್ತಿದ್ದು, ದಿನಾಂಕವನ್ನು ಗುರುಹಿರಿಯರು ನಿಶ್ಚಹಿಸಿದ್ದಾರೆ.

ಕಳೆದ ವರ್ಷ ತಮ್ಮ ಬಹುದಿನಗಳ ಬಾಲ್ಯದ ಗೆಳತಿ ಪ್ರೇರಣಾ ಅವರ ಫೋಟೋವನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ರು ಧ್ರುವ ಸರ್ಜಾ. ನಂತರ ಈ ಜೋಡಿಯ ನಿಶ್ಚಿತಾರ್ಥ ಡಿಸೆಂಬರ್ 9ರಂದು ಅದ್ಧೂರಿಯಾಗಿ ನಡೆದಿತ್ತು.

ಮೂಲಗಳ ಪ್ರಕಾರ ಧ್ರುವ ಸರ್ಜಾ ಅವರ ವಿವಾಹವು ಮೈಸೂರು ಅಥವಾ ಬೆಂಗಳೂರಿನಲ್ಲಿ ನಡೆಯಲಿದೆ ಎನ್ನಲಾಗಿದೆ. ಬಾಲ್ಯದ ಸ್ನೇಹಿತರ ವಿವಾಹವನ್ನು ವಿಭಿನ್ನವಾಗಿ ನೆರವೇರಿಸಲು ಸರ್ಜಾ ಕುಟುಂಬ ಹಲವು ರೀತಿಯಲ್ಲಿ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಅದರಲ್ಲೂ ಧ್ರುವ – ಪ್ರೇರಣಾ ಅವರನ್ನು ಹಸುಗಳ ಮಧ್ಯೆ ಕೂರಿಸಿ ಗಟ್ಟಿಮೇಳಕ್ಕೆ ಬಿಗ್ ಪ್ಲ್ಯಾನ್​ ನಡೆಯುತ್ತಿದೆ ಎಂಬ ಸುದ್ದಿ ಕೂಡ ಕೇಳಿ ಬಂದಿದೆ.

ಯಾರಿದು ಪ್ರೇರಣಾ ಶಂಕರ್?
ಪ್ರೇರಣಾ ಶಂಕರ್ ಅವ್ರು ದೃವಾ ಸರ್ಜಾ ಮನೆಯಿರುವ ಏರಿಯಾದಲ್ಲೇ ವಾಸಿಸುತ್ತಿದ್ದು ದೃವಾಗೆ ಬಾಲ್ಯದ ಗೆಳತಿಯಾಗಿದ್ದಾರೆ. ದ್ರುವ ಸರ್ಜಾರ ಆಪ್ತರಲ್ಲಿ ಗುರುತಿಸಿಕೊಂಡಿರುವ ಪ್ರೇರಣಾ ಸರ್ಜಾ ಕುಟುಂಬದಲ್ಲೂ ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ.. ಅಲ್ಲದೆ ಇಬ್ಬರ ಕುಟುಂಬಗಳ ಸ್ನೇಹವೂ ತುಂಬಾ ಚೆನ್ನಾಗಿಯೇ ಇದೆ. ಮೊದಲು ಸ್ನೇಹಿತರಾಗಿ ಗುರುತಿಸಿಕೊಂಡಿದ್ದ ದ್ರುವ ಮತ್ತು ಪ್ರೇರಣಾ ನಂತರ ಪ್ರೇಮದ ಬಲೆಯಲ್ಲಿ ಬಿದ್ದಿದ್ದರು.. ಬಹುವರ್ಷಗಳಿಂದ ತಮ್ಮ ಪ್ರೀತಿಯನ್ನು ಕಾಪಿಟ್ಟುಕೊಂಡು ಬಂದಿರುವ ಈ ಜೋಡಿ ಪರಸ್ಪರ ಎರಡೂ ಕುಟುಂಬಗಳ ಸಮ್ಮಿತಿಯೊಂದಿಗೆ ಮದುವೆ ಮಾಡಿಕೊಳ್ಳುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top