fbpx
ಸಮಾಚಾರ

ಶೂಟಿಂಗ್ ಮುಗಿಸಿ ವಾಪಸ್ಸಾಗುತ್ತಿದ್ದಾಗ ಧ್ರುವ ಸರ್ಜಾ ಕಾರು ಅಪಘಾತ!

ಸ್ಯಾಂಡಲ್​ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಚಲಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ ನಡೆದಿದೆ. ನೆನ್ನೆ ಈ ಅವಘಡ ಸಂಭವಿಸಿದ್ದು, ಯಾರಿಗೂ ಪ್ರಾಣಾಪಾಯವಾಗಿಲ್ಲ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಹಾನಿ ಉಂಟಾಗಿಲ್ಲ. ಧ್ರುವ ಸರ್ಜಾ ಕಾರಿನ ಹಿಂದಿನ ಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ.

ನಂದಕಿಶೋರ್‌ ನಿರ್ದೇಶನದ ‘ಪೊಗರು’ ಚಿತ್ರದ ಶೂಟಿಂಗ್‌ ಬಳ್ಳಾರಿಯಲ್ಲಿ ನಡೆಯುತ್ತಿದೆ. ಬಳ್ಳಾರಿಯಿಂದ ಶೂಟಿಂಗ್ ಮುಗಿಸಿಕೊಂಡು ಮುಂಜಾನೆ 4ಗಂಟೆಗೆ ಬೆಂಗಳೂರಿಗೆ ವಾಪಸ್‌ ಬರುತ್ತಿದ್ದ ವೇಳೆ ಮಾರ್ಗಮಧ್ಯೆ ಲಾರಿಯೊಂದು ಕಾರಿಗೆ ಗುದ್ದಿದ ಪರಿಣಾಮ ಈ ಅಪಘಾತ ಸಂಭವಿಸಿದೆ. ಕಾರಿನ ಹಿಂಭಾಗಕ್ಕೆ ಹಾನಿಯಾಗಿದೆ. ಧ್ರುವ ಅವರೊಟ್ಟಿಗೆ ಸ್ನೇಹಿತರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

“ಬಳ್ಳಾರಿಯಲ್ಲಿ ತುಂಬ ಲಾರಿಗಳು ಓಡಾಡುತ್ತವೆ. ಟ್ರಾಫಿಕ್ ಕೂಡ ಜಾಸ್ತಿ. ಯಾರೋ ಒಬ್ಬ ಓವರ್‌ಟೇಕ್ ಮಾಡೋದಕ್ಕೆ ಹೋಗಿ ಧ್ರುವ ಅವರ ಕಾರಿನ ಇಂಜಿನ್ ಟಚ್ ಆಗಿದೆ ಅಷ್ಟೇ. ಧ್ರುವ ಸರ್ಜಾ ಅವರಿಗೆ ಏನೂ ಆಗಿಲ್ಲ, ಇದು ತುಂಬ ಚಿಕ್ಕ ಘಟನೆ” ಎಂದು ಪೊಗರು ಚಿತ್ರದ ನಿರ್ದೇಶಕ ನಂದಕಿಶೋರ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top