fbpx
ಸಮಾಚಾರ

ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ‘ಗಾಂಧಿ ಸೋಲಾರ್ ಪಾರ್ಕ್’ ಉದ್ಘಾಟಿಸಿದ ಪ್ರಧಾನಿ ಮೋದಿ

ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ 50 ಕಿಲೋ ವ್ಯಾಟ್ ತೂಕದ ಗಾಂಧಿ ಸೋಲಾರ್ ಪಾರ್ಕ್ ನ್ನು ಪ್ರಧಾನಿ ನರೇಂದ್ರ ಮೋದಿ ಭಾರತೀಯ ಕಾಲಮಾನದ ಪ್ರಕಾರ ನಿನ್ನೆ ಮಂಗಳವಾರ ಉದ್ಘಾಟಿಸಿದರು. ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ 50 ಕಿಲೋ ವ್ಯಾಟ್ ತೂಕದ ಗಾಂಧಿ ಸೋಲಾರ್ ಪಾರ್ಕ್ ನ್ನು ಪ್ರಧಾನಿ ನರೇಂದ್ರ ಮೋದಿ ಭಾರತೀಯ ಕಾಲಮಾನದ ಪ್ರಕಾರ ನಿನ್ನೆ ಮಂಗಳವಾರ ಉದ್ಘಾಟಿಸಿದರು.

 

 

ಗಾಂಧೀಜಿಯವರ 150ನೇ ಜಯಂತಿ ಅಂಗವಾಗಿ ಗಾಂಧಿ ಸೋಲಾರ್ ಪಾರ್ಕ್ ಉದ್ಘಾಟಿಸಲಾಗಿದ್ದು, ಗಾಂಧೀಜಿಯವರ ಆಲೋಚನೆಗಳು ಮತ್ತು ಮೌಲ್ಯಗಳ ಪ್ರತಿಬಿಂಬವಾಗಿ ಈ ಪಾರ್ಕ್ ಕೆಲಸ ಮಾಡಲಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ರಾಷ್ಟ್ರಪತಿ ಮಹಾತ್ಮಾ ಗಾಂಧಿ ಅವರ 150ನೇ ಜನ್ಮದಿನಾಚರಣೆ ನಿಮಿತ್ತ ಅವರಿಗೆ ಗೌರವ ಸಲ್ಲಿಸಲು ಸಂಪೂರ್ಣ ಜಗತ್ತು ಒಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಂದು ಪ್ರಧಾನಿ ಮೋದಿಯವರು ಓಲ್ಡ್ ವೆಸ್ಟ್ ಬುರಿಯಲ್ಲಿರುವ ನ್ಯೂಯಾರ್ಕ್ ಕ್ಯಾಂಪಸ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಗಾಂಧಿ ಶಾಂತಿ ಉದ್ಯಾನವನವನ್ನು ಉದ್ಘಾಟಿಸಲಿದ್ದಾರೆ. ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಅಂಗವಾಗಿ 150 ಗಿಡಗಳನ್ನು ಇಲ್ಲಿ ನೆಡಲಾಗಿದೆ.

ಇದಕ್ಕೂ ಮುನ್ನ ಮೋದಿಯವರು ಬೇರೆ ದೇಶಗಳ ನಾಯಕರು ಮತ್ತು ವಿಶ್ವಸಂಸ್ಥೆ ಘಟಕಗಳ ಪ್ರತಿನಿಧಿಗಳ ಜೊತೆ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಮಾತುಕತೆ ನಡೆಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top