fbpx
ಸಮಾಚಾರ

ಮದುವೆಗೂ ಮುನ್ನವೇ ಚೊಚ್ಚಲ ಮಗುವಿಗೆ ಜನ್ಮ ನೀಡಿ ಹೆಸರನ್ನೂ ಇಟ್ಟ ‘ಆಮಿ ಜಾಕ್ಸನ್’

ಬಹುಭಾಷಾ ನಟಿ ಆ್ಯಮಿ ಜಾಕ್ಸನ್ ತಮ್ಮ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದು ಗಂಡು ಮಗುವಿನ ತಾಯಿಯಾಗಿದ್ದಾರೆ. ಸೋಮವಾರ, ಅವರು ತಮ್ಮ ನವಜಾತ ಪುತ್ರ ಮತ್ತು ತಮ್ಮ ಭಾವೀ ಪತಿ ಜಾರ್ಜ್ ಪನಯೌಟು ಅವರೊಂದಿಗೆ ಆಸ್ಪತ್ರೆಯಲ್ಲಿರುವ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

 

 

View this post on Instagram

 

Our Angel, welcome to the world Andreas 💙

A post shared by Amy Jackson (@iamamyjackson) on

 

ಚಿತ್ರದಲ್ಲಿ, ಆಮಿ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವುದನ್ನು ಕಾಣಬಹುದು, ಮಗುವನ್ನು ತನ್ನ ತೋಳುಗಳಲ್ಲಿಅಪ್ಪಿಕೊಂಡಿದ್ದರೆ ಜಾರ್ಜ್, ಅವಳ ಹಣೆಯ ಮೇಲೆ ಕಿಸ್ ಮಾಡುತ್ತಿದ್ದಾರೆ. ತಮ್ಮ ವಿಶೇಷ ಕ್ಷಣಗಳಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿರುವ ಆ್ಯಮಿ “Our Angel, welcome to the world Andreas.” ಎಂದು ಬರೆದುಕೊಂಡಿದ್ದಾರೆ.

ಆ್ಯಮಿ ಜಾಕ್ಸನ್‌ ತಮ್ಮ ಮಗುವಿಗೆ ಆಂಡ್ರೀಸ್‌ ಎಂದು ಹೆಸರಿಟ್ಟಿದ್ದಾರೆ. ಆ್ಯಮಿ ಹಾಗೂ ಜಾರ್ಜ್‌ ಪನಾಯಿಟೊ ಜನವರಿ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮುಂದಿನ ವರ್ಷ ಗ್ರೀಸ್‌ನಲ್ಲಿ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ.

ಮಗು ಹಾಗೂ ತಾಯಿ ಇಬ್ಬರೂ ಕ್ಷೇಮವಾಗಿದ್ದಾರೆ. ಗಂಡು ಮಗುವಾಗಿರುವುದು ಖುಷಿ ತಂದಿದೆ ಎಂದು ಆ್ಯಮಿ ಇನ್‍ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಗರ್ಭಿಣಿಯಾಗಲಿದ್ದಾಲೇ ತಮಗೆ ಗಂಡು ಮಗು ಎಂದರೆ ತುಂಬಾ ಇಷ್ಟ ಎಂದು ಆ್ಯಮಿ ಹೇಳಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top