fbpx
ಸಮಾಚಾರ

ಖಾತೆಯಲ್ಲಿ ಎಷ್ಟೇ ಹಣವಿದ್ದರೂ 1000ಕ್ಕಿಂತ ಅಧಿಕ ಹಣ ಡ್ರಾ ಮಾಡುವಂತಿಲ್ಲ: RBI ಆದೇಶ

RBIನ ನೂತನ ಆದೇಶದ ಪ್ರಕಾರ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಎಷ್ಟೇ ಹಣವಿದ್ದರೂ ಇನ್ಮುಂದೆ ಕೇವಲ ಒಂದು ಸಾವಿರ ರೂ ಮಾತ್ರ ಅವರು ಡ್ರಾ ಮಾಡಬೇಕು ಎಂದು ಆರ್ ​ಬಿ ಐ ತನ್ನ ಅಧೀನ ಬ್ಯಾಂಕ್​ಗಳಿಗೆ ಸೂಚನೆ ನೀಡಿದೆ. ಇದರಂತೆ ಖಾತೆದಾರರು 1000ಕ್ಕಿಂತ ಅಧಿಕವಾಗಿ ತನ್ನ ಉಳಿತಾಯ, ಪ್ರಸ್ತುತ ಹಾಗೂ ಇತರೆ ಖಾತೆಗಳಿಂದಲೂ ಹಣವನ್ನು ಡ್ರಾ ಮಾಡುವಂತಿಲ್ಲ.

ಈ ಸೂಚನೆ ಸದ್ಯ ಮುಂಬೈನ ಪಂಜಾಬ್​ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್​ಗಳಿಗೆ ಮಾತ್ರ ನಿಗದಿಯಾಗಿದ್ದು, ಇತರೆ ಬ್ಯಾಂಕ್​ ಖಾತೆದಾರರು ನಿಟ್ಟುಸಿರು ಬಿಡುವಂತೆ ಆಗಿದೆ. ನಗರ ಸಹಕಾರಿ ಬ್ಯಾಂಕ್​ಗಳಿಗೆ ಆರು ತಿಂಗಳ ಕಾಲ ಈ ನಿರ್ದೇಶನ ನೀಡುವ ಮೂಲಕ ಗ್ರಾಹಕರಿಗೆ ಶಾಕ್​ ನೀಡಿದೆ. ಆರ್​ಬಿಐನ ಈ ನಿರ್ದೇಶಕನಕ್ಕೆ ಕಾರಣ ಬ್ಯಾಂಕ್​ನ ಶಾಖೆಗಳಲ್ಲಿ ಆದ ಅವ್ಯವಸ್ಥೆ.

ಪಂಜಾಬ್ ಹಾಗೂ ಮಹಾರಾಷ್ಟ್ರ ಸಹಕಾರ ಬ್ಯಾಂಕ್‌ (PMC)ಗೆ ಭಾರತೀಯ ರಿಸರ್ವ್ ಬ್ಯಾಂಕ್ ವಿಧಿಸಿರುವ ಈ ನಿರ್ಬಂಧದ ಪರಿಣಾಮ, ವಾಣಿಜ್ಯ ನಗರಿ ಮುಂಬೈನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತು. ಈ ನಿಯಮ ಕೇವಲ PMC ಬ್ಯಾಂಕ್‌ಗೆ ಮಾತ್ರ ಅನ್ವಯ ಎಂದು ಆರ್‌ಬಿಐ ಸ್ಪಷ್ಟನೆ ಕೊಟ್ಟಿದೆ. PMC ಬ್ಯಾಂಕ್‌ನಲ್ಲಿ ಉಳಿತಾಯ, ಕರೆಂಟ್ ಖಾತೆ ಹಾಗೂ ಯಾವುದೇ ರೀತಿಯ ಹೂಡಿಕೆ ಖಾತೆಗೂ ಈ ನಿಯಮ ಅನ್ವಯ ಆಗಿದೆ.

ನಿರ್ಬಂಧ ಹಿಂತೆಗೆದ RBI
ಪಿಎಂಸಿ ಖಾತೆದಾರರಿಗೆ 1000 ರುಪಾಯಿ ಮಾತ್ರ ವಿತ್ ಡ್ರಾ ಮಾಡಲು ಆರ್‌ಬಿಐ ನಿರ್ಬಂಧ ಹೇರಿತ್ತು. ಇದರಿಂದ ಗ್ರಾಹಕರಿಗೆ ತೊಂದರೆಯಾಗಿತ್ತು. ಇದನ್ನು ಮನಗಂಡ ಆರ್‌ಬಿಐ ಇದೀಗ ವಿತ್ ಡ್ರಾ ನಿರ್ಬಂಧವನ್ನು ವಾಪಸ್ ಪಡೆದು 10,000 ಡ್ರಾ ಮಾಡಲು ಅವಕಾಶ ನೀಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top