fbpx
ಸಮಾಚಾರ

ಹಣಕಾಸಿನ ನೆರವಿನ ಜತೆಗೆ ತಲೆಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ ಮಹಿಳಾ ಪೊಲೀಸ್

ಕ್ಯಾನ್ಸರ್‌ ರೋಗಿಗಳಿಗೆ ಹಣಕಾಸಿನ ನೆರವಿನ ಜತೆಗೆ ಕೂದಲನ್ನು ದಾನ ಮಾಡುವ ಮೂಲಕ ಕೇರಳದ ಮಹಿಳಾ ಪೊಲೀಸ್‌ ಅಧಿಕಾರಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ. 44 ವರ್ಷದ ಪೊಲೀಸ್ ಅಧಿಕಾರಿ ಅಪರ್ಣಾ ಲವಕುಮಾರ್ ಅವರು ತಮ್ಮ ಉದ್ದನೆಯ ಕೂದಲನ್ನು ದಾನ ಮಾಡಿದ್ದು, ತ್ರಿಶೂರ್ ಜಿಲ್ಲೆಯ ಇರಿಂಜಲಕುಡ ಪೊಲೀಸ್ ಠಾಣೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ.

ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಅವರು ತಮ್ಮ ಉದ್ದನೆಯ ಕೂದಲಿಗೆ ಹೆಚ್ಚು ಖ್ಯಾತರಾಗಿದ್ದರು. ಆದರೆ ದಿಢೀರ್ ಎಂದು ಅವರು ಕೂದಲು ಕತ್ತರಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಈ ಬಗ್ಗೆ ಮಾತನಾಡಿರುವ ಅವರು “ನನಗೆ ಸೌಂದರ್ಯ ಮುಖ್ಯವಲ್ಲ. ಈ ಹಿಂದೆ ಕ್ಯಾನ್ಸರ್ ರೋಗಿಗಳಿಗೆ ಅರ್ಧ ಕೂದಲನ್ನು ದಾನ ಮಾಡಿದ್ದೆ. ಆದರೆ ಈ ಬಾರಿ ಪೂರ್ತಿ ಕೂದಲನ್ನು ದಾನ ಮಾಡಿದ್ದೇನೆ” ಎಂದರು.

‘ಬಡ ಕುಟುಂಬಕ್ಕೆ ಸೇರಿದ ಹಲವು ಕ್ಯಾನ್ಸರ್‌ ಪೀಡಿತ ಮಕ್ಕಳು ದುಬಾರಿ ವಿಗ್‌ಗಳನ್ನು ಖರೀದಿಸುವುದು ಅಸಾಧ್ಯವಾಗಿತ್ತು ಎನ್ನುವುದು ಮೂರು ವರ್ಷಗಳ ಹಿಂದೆ ನನ್ನ ಗಮನಕ್ಕೆ ಬಂತು. ಅಂದೇ ಕೂದಲನ್ನು ದಾನ ಮಾಡಲು ನಿರ್ಧರಿಸಿದೆ’ ಎಂದು ಅಪರ್ಣ ಹೇಳುತ್ತಾರೆ.

“ಪೊಲೀಸ್‌ ಅಧಿಕಾರಿಯಾಗಿರುವುದ ರಿಂದ ಸಹಜವಾಗಿಯೇ ಕರ್ತವ್ಯದಲ್ಲಿದ್ದಾಗ ಪೊಲೀಸ್‌ ಟೋಪಿ ಧರಿಸಿರುತ್ತೇನೆ. ತಲೆಯನ್ನು ಸಂಪೂರ್ಣ ಬೋಳಿಸಿಕೊಳ್ಳಲು ಹಿರಿಯ ಅಧಿಕಾರಿ ಗಳು ಅನುಮತಿ ನೀಡಿದ್ದಾರೆ. ಇನ್ನೊಬ್ಬರಿಗೆ ನೆರವು ನೀಡುವವರಿಗೆ ದೇವರ ಆಶೀರ್ವಾದ ಇರುತ್ತದೆ’ ಎಂದು ಎಲಿದ್ದಾರೆ.

ಕೇವಲ ಕೂದಲಷ್ಟೇ ಅಲ್ಲದೇ 2008 ರಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರೋಗಿಯೊಬ್ಬರು ಆಸ್ಪತ್ರೆಯ ಬಿಲ್ ನೀಡಲು ವಿಫಲವಾದ ಸಂದರ್ಭದಲ್ಲಿ ಅಪರ್ಣಾ ಅವರು ತಮ್ಮ ಕೈಲಿದ್ದ ಬಂಗಾರದ ಬಳೆಯನ್ನು ನೀಡಿ ಆರ್ಥಿಕ ಸಹಾಯವನ್ನು ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top