fbpx
ಸಮಾಚಾರ

“ಏಯ್‌ ಸಿದ್ದರಾಮಯ್ಯ ನೀವ್ಯಾವ ಸೀಮೆ ನಾಯಕ ಹೋಗೋಲೊ” ಸಿದ್ದು ವಿರುದ್ಧ ಏಕವಚನದಲ್ಲಿ ಮುನಿಯಪ್ಪ ವಾಗ್ದಾಳಿ

ರಾಜ್ಯ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ. ನಾಯಕರ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪ ಈಗ ಬಹಿರಂಗವಾಗಿದೆ. ಉಪಚುನಾವಣೆ ಸಿದ್ಧತೆ ಬಗ್ಗೆ ಇಂದು ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡ ಪ್ರಕರಣ ನಡೆಯಿತು.

ಕಾಂಗ್ರೆಸ್ ಸಭೆ ಆರಂಭವಾಗುತ್ತಿದ್ದಂತೆ ಸಿದ್ದರಾಮಯ್ಯ ವಿರುದ್ಧ ಏಕ ವಚನದಲ್ಲೇ ದಾಳಿ ನಡೆಸಿದ ಮುನಿಯಪ್ಪ, “ಚುನಾವಣೆಯಲ್ಲಿ ರಮೇಶ್ ನನ್ನ ವಿರುದ್ಧ ಕೆಲಸ ಮಾಡಿ ಸೋಲಿಸಿದ್ದ. ಬಿಜೆಪಿಯವರ ಬಳಿ ದುಡ್ಡು ತಗೊಂಡು ನನ್ನ ವಿರುದ್ಧ ಕೆಲಸ ಮಾಡಿದ್ದಾನೆ. ಇದು ಪಕ್ಷದ್ರೋಹಿ ಕೆಲಸವಲ್ಲವೇ? ಆದರೆ, ಅವನ ವಿರುದ್ಧ ಕಠಿಣ ಕ್ರಮ ಜರುಗಿಸದ ನೀವು ಯಾವಾಗಲೂ ಅವನನ್ನು ಜೊತೆಯಲ್ಲೇ ಹಾಕ್ಕೊಂಡು ಸುತ್ತಾಡ್ತೀರ. ಎಲ್ಲಾ ಸಭೆಯಲ್ಲಿ ಅವನನ್ನು ನಿಮ್ಮ ಪಕ್ಕದಲ್ಲೇ ಕೂರಿಸಿಕೊಳ್ತಾ ಇದೀರಾ. ಮೊದಲ ಪಕ್ಷ ವಿರೋಧಿ ಕೆಲಸ ಮಾಡಿದ ಅವನು ವಿರುದ್ಧ ಸೂಕ್ತ ಕ್ರಮ ಜರುಗಿಸಿ ಎಂದು ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.

ಸಿದ್ದರಾಮಯ್ಯ ಎದುರು ಅವಾಜ್ ಹಾಕಿರುವ ಮುನಿಯಪ್ಪ ಅವರು, “ಕಳ್ಳರನ್ನ ಪಕ್ಕದಲ್ಲಿ ಕೂರಿಸಿಕೊಳ್ಳುವ ನೀನ್ಯಾವ ಯಾವ ಸೀಮೆ ನಾಯಕ” ಎಂದಿದ್ದಾರೆ. ಇದಕ್ಕೆ ಗರಂ ಆದ ಸಿದ್ದರಾಮಯ್ಯ ಅವರು,”ಮುನಿಯಪ್ಪ ನೀನು ಸರಿಯಾಗಿ ಮಾತನಾಡು, ಗೆಲ್ಲಲು ಆಗದಿದ್ದರು ಮಾತನಾಡುತ್ತೀಯಾ” ಎಂದಿದ್ದು, ಇದಕ್ಕೆ ಮತ್ತಷ್ಟು ಕೋಪಗೊಂಡ ಮಾಜಿ ಸಂಸದರು, “ಸಾಕು ಕೂತ್ಕೋಳೋ, ನೀನ್ ಯಾವನೋ ಹೇಳೋಕೆ. ಎಲ್ಲಿಂದಲೋ ಬಂದು ನನ್ ಎದುರೇ ಮಾತಾಡ್ತಿಯಾ. ನನ್ನನ್ನು ಸೋಲಿಸಿದ್ದು ನೀನೇ, ಕಳ್ಳಾಟ ಆಡುತ್ತೀಯಾ” ಎಂದು ಏಕವಚನದಲ್ಲೇ ಕಿತ್ತಾಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top