fbpx
ಸಮಾಚಾರ

ಕೋಟ್ಯಧಿಪತಿಯಲ್ಲಿ ಬಿಗ್ ಟ್ವಿಸ್ಟ್: ಪುನೀತ್ ಜಾಗಕ್ಕೆ ಹೊಸ ನಿರೂಪಕಿ ಎಂಟ್ರಿ.

ಕನ್ನಡ ಕಿರುತೆರೆಯ ಖ್ಯಾತ ಷೋ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಬಿಗ್ ಟ್ವಿಸ್ಟ್ ದೊರೆತಿದೆ. ಮೊದಲ ಎರಡು ಸೀಸನ್ ಪವರ್ ಸ್ಟಾರ್ ನಡೆಸಿಕೊಟ್ಟರೆ, ಮೂರನೆ ಸೀಸನ್ ಅನ್ನು ನಟ ರಮೇಶ್ ಅರವಿಂದ್ ನಡೆಸಿಕೊಟ್ಟಿದ್ದರು. ಆದ್ರೆ ನಾಲ್ಕನೆ ಸೀಸನ್ ಅನ್ನು ಮತ್ತೆ ಪವರ್ ಸ್ಟಾರ್ ನಡೆಸಿಕೊಡುತ್ತಿದ್ದಾರೆ.ಈ ನಡುವೆ ಪುನೀತ್ ಜಾಗದಲ್ಲಿ ಮೊತ್ತೋರ್ವ ನಿರೂಪಕಿ ಎಂಟ್ರಿ ಕೊಟ್ಟಿದ್ದಾರೆ.

 

 

ಕೋಟ್ಯಧಿಪತಿ ಕಾರ್ಯಕ್ರಮ ಈಗ ಕೊನೆಯ ಹಂತ ತಲುಪಿದ್ದು ಗ್ರಾಂಡ್ ಫಿನಾಲೆ ಸಂಚಿಕೆಗೆ ಪುನೀತ್ ಜಾಗದಲ್ಲಿ ನಟಿ ರಚಿತಾ ರಾಮ್ ಅವರು ಕೂರಲಿದ್ದಾರೆ. ಇನ್ನು ಇಷ್ಟು ದಿನ ಸ್ಪರ್ದಿಗಳಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದ ಅಪ್ಪು ಗ್ರಾಂಡ್ ಫಿನಾಲೆಯಲ್ಲಿ ತಾವೇ ಹಾಟ್ ಸೀಟ್ ನಲ್ಲಿ ಕೂತು ರಚಿತಾ ರಾಮ್ ಕೇಳುವ ಪ್ರಶ್ನೆಗೆ ಗಳಿಗೆ ಉತ್ತರ ನೀಡಲಿದ್ದಾರೆ.

ಮೊದಲ ಬಾರಿಗೆ ಹಾಟ್ ಸೀಟ್ ನಲ್ಲಿ ಕೂರಲಿರುವ ಅಪ್ಪು ಗೆ ರಚಿತಾ ರಾಮ್ ಏನೆಲ್ಲ ಪ್ರಶ್ನೆಗಳನ್ನು ಕೇಳುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. ಕೋಟ್ಯಧಿಪತಿ ಸೀಸನ್ ನಾಲ್ಕರ ಕೊನೆಯ ಎಪಿಸೋಡ್ ಈ ವಾರ ಅಥವಾ ಮುಂದಿನ ವಾರ ಪ್ರಸಾರವಾಗುವ ಸಾಧ್ಯತೆ ಇದೆ. ಅಲ್ಲಿಗೆ ಕನ್ನಡದ ಕೋಟ್ಯಧಿಪತಿ ಸೀಸನ್ 4ಕ್ಕೆ ತೆರೆ ಬೀಳುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top