fbpx
ಸಮಾಚಾರ

‘ನಾನ್ ಸೈಡ್ ಬಿಡಲ್ಲ’ ರಸ್ತೆ ಮಧ್ಯೆ ಸ್ಕೂಟಿ ನಿಲ್ಲಿಸಿ ಬಸ್ ಡ್ರೈವರ್‌ಗೆ ಬುದ್ದಿ ಕಲಿಸಿದ ಮಹಿಳೆ

ಬಸ್ಸಿಗೆ ದಾರಿ ಬಿಡದೆ ಮಹಿಳೆಯೊಬ್ಬರು ರಸ್ತೆ ಮಧ್ಯದಲ್ಲಿ ತನ್ನ ಸ್ಕೂಟಿಯನ್ನು ನಿಲ್ಲಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸರಿಯಾದ ಮಾರ್ಗದಲ್ಲಿ ಬಾರದ ಬಸ್ ಚಾಲಕನಿಗೆ ಈ ಮಹಿಳೆ ರಸ್ತೆ ಬಿಡದೆ ಪಾಠ ಕಲಿಸಿದ್ದು, ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ವೈರಲ್ ಆದ ವಿಡಿಯೋದಲ್ಲಿ ಬಸ್ ಚಾಲಕ ಬಲ ಭಾಗದಲ್ಲಿ ಸಂಚರಿಸಿದ್ದು, ಇದನ್ನು ಕಂಡ ಮಹಿಳೆ ಕೆಂಡಾಮಂಡಲವಾಗಿ ತಾನೂ ಸಹ ತನ್ನ ಸ್ಕೂಟಿಯನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿಕೊಂಡು ನಿಂತಿದ್ದಾರೆ. ಬಸ್ ಸಣ್ಣ ಜಾಗದಲ್ಲೇ ನುಗ್ಗಲು ಯತ್ನಿಸಿದ್ದು, ಆಗ ಮಹಿಳಾ ರೈಡರ್ ತನ್ನ ಸ್ಕೂಟಿಯನ್ನು ರಸ್ತೆಯ ಬಲಭಾಗದಲ್ಲಿ ನಿಲ್ಲಿಸುತ್ತಾರೆ.

ಎದುರುಗಡೆಯಿಂದ ಅಡ್ಡಾದಿಡ್ಡಿಯಾಗಿ ಬರುತ್ತಿದ್ದ ಬಸ್ಸಿಗೆ ದಾರಿ ಬಿಡದೆ ನಡು ರಸ್ತೆಯಲ್ಲೇ ಸ್ಕೂಟಿಯಲ್ಲಿ ಮಹಿಳೆ ಕುಳಿತಿದ್ದಾರೆ. ಕೊನೆಗೆ ವಿಧಿಯಿಲ್ಲದೆ ಬಸ್ ಚಾಲಕ ಸರಿಯಾದ ಪಥಕ್ಕೆ ಬಸ್ ನ್ನು ತಿರುವಿಸಿಕೊಂಡು ಹೋಗುವ ದೃಶ್ಯ ವಿಡಿಯೋದಲ್ಲಿದೆ. ಚಾಲಕನೇ ಬಸ್ಸನ್ನು ಮಹಿಳೆಯ ಬಲಕ್ಕೆ ಅಂದರೆ, ರಸ್ತೆಯ ಎಡಕ್ಕೆ ಸಂಚಾರಿ ನಿಯಮದಂತೆ ಚಲಿಸುತ್ತಾನೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ಮಹಿಳೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೆಚ್ಚು ಜನ ಶೇರ್ ಮಾಡಿ ಮಹಿಳೆಯ ಧೈರ್ಯವನ್ನು ಮೆಚ್ಚಿದ್ದಾರೆ. ಕಮೆಂಟ್ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top