fbpx
ಸಮಾಚಾರ

ವಿಕ್ರಂ ಲ್ಯಾಂಡರ್ ಬಿದ್ದ ಜಾಗವನ್ನು ಕೊನೆಗೂ ಗುರುತಿಸಿದ ನಾಸಾ!

ಚಂದ್ರನ ದಕ್ಷಿಣ ಧ್ರುವದಲ್ಲಿ ಹಗುರವಾಗಿ ಇಳಿದು, ಅಧ್ಯಯನ ನಡೆಸಬೇಕಿದ್ದ ‘ಚಂದ್ರಯಾನ–2’ ಗಗನನೌಕೆಯ ‘ವಿಕ್ರಮ್ ಲ್ಯಾಂಡರ್‌’ ಸೆ.7ರಂದು ಚಂದ್ರನ ಮೇಲ್ಮೈ ಮೇಲೆ ಅಪ್ಪಳಿಸಿದ ಸ್ಥಳದ ಚಿತ್ರಗಳನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ಇಂದು ರಿಲೀಸ್ ಮಾಡಿದೆ. ವಿಕ್ರಂ ಲ್ಯಾಂಡರ್​ ಚಂದ್ರನ ಮೇಲೆ ಹಾರ್ಡ್​​ ಲ್ಯಾಂಡಿಂಗ್​​ ಮಾಡಿದ್ದು ಚಂದ್ರಯಾನ-2 ವಿಫಲವಾಗಲು ಕಾರಣ ಎಂದು ಹೇಳಿದೆ.

 

 

ಆರ್ಬಿಟರ್ (ಎಲ್​ಆರ್​ಓಸಿ)​ ಕ್ಯಾಮೆರಾ ಸೆರೆಹಿಡಿದ ಚಂದ್ರನ ಮೇಲ್ಮೈನ ಅತ್ಯುತ್ತಮ ದೃಶ್ಯಗಳನ್ನು ನಾಸಾ ಇಂದು ಬಿಡುಗಡೆ ಮಾಡಿದೆ. ಕೊನೆಯ ಗಳಿಗೆಯಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಂ ಲ್ಯಾಂಡರ್​ ಸಾಫ್ಟ್​ ಲ್ಯಾಂಡಿಂಗ್​ ಆಗಲಿಲ್ಲ. ಹೀಗಾಗಿ ಇಸ್ರೋದ ಚಂದ್ರಯಾನ-2 ಯೋಜನೆ ವಿಫಲವಾಗಿದೆ ಎಂದು ನಾಸಾ ತಿಳಿಸಿದೆ. ವಿಕ್ರಂ ಹಾರ್ಡ್​ ಲ್ಯಾಂಡಿಂಗ್ ಆಗಿರುವ ದೃಶ್ಯಗಳು ಇವಾಗಿವೆ.  ನಾಸಾ ಸೆರೆಹಿಡಿದಿರುವ ಚಿತ್ರದಲ್ಲಿರುವ ಈ ಸ್ಥಳವು ಚಂದ್ರನ ದಕ್ಷಿಣ ಧ್ರುವದಿಂದ ಸುಮಾರು 600 ಕಿ.ಮೀ ದೂರದಲ್ಲಿದೆ.

ಅಂದಹಾಗೆ ವಿಕ್ರಮ್ ಲ್ಯಾಂಡರ್ ಕೊನೆಯ ಹಂತದವರೆಗೂ ಸರಿಯಾಗಿಯೇ ಹೋಗುತ್ತಿತ್ತು. ಇನ್ನೇನು ಚಂದ್ರನ ಮೇಲ್ಮೈ ತಲುಪಬೇಕು ಎನ್ನುವಷ್ಟರಲ್ಲಿ 2.1 ಕಿಲೋ ಮೀಟರ್ ದೂರವಿರುವಾಗ ಸಂಪರ್ಕ ಕಳೆದುಕೊಂಡಿತು. ಲ್ಯಾಂಡರ್ ಜೊತೆ ಸಂಪರ್ಕ ಕಲ್ಪಿಸಲು ಮೊನ್ನೆ 21ರವರಗೆ ಅವಕಾಶವಿತ್ತು. ನಂತರ ಇಲ್ಲಿ ಕತ್ತಲು ಆವರಿಸುತ್ತದೆ. ಪ್ರಗ್ಯಾರ್ ರೋವರ್ ಮೂಲಕ ಕಳುಹಿಸಿಕೊಟ್ಟಿದ್ದ ವಿಕ್ರಮ್ ಲ್ಯಾಂಡರ್ ನ ಜೀವಿತಾವಧಿ 14 ದಿನಗಳಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top