fbpx
ಸಮಾಚಾರ

‘ಸೂಪರ್’ ಬೆಡಗಿಗೆ ಕಂಕಣ ಭಾಗ್ಯ? ಬಹುಕಾಲದ ಗೆಳೆಯನೊಂದಿಗೆ ನಯನತಾರ ಮದುವೆ!

ಚಿತ್ರರಂಗದ ಬಹುತೇಕ ನಟಿಯರು ಚಿತ್ರಕ್ಕಿಂತಲೂ ಅಫೇರುಗಳ ಮೂಲಕ ಸದ್ದು ಮಾಡೋದೇ ಹೆಚ್ಚು. ಸದ್ಯ ದಕ್ಷಿಣ ಭಾರತದ ಬಹುಬೇಡಿಕೆಯಲ್ಲಿರೋ ನಟಿ ನಯನತಾರಾಳನ್ನು ಆ ಪಟ್ಟಿಯಿಂದ ಹೊರಗಿಡಲು ಹೇಗೆ ಸಾಧ್ಯ? ಸಿನಿಮಾ ಮಂದಿಯ ಮದುವೆ, ಅಫೇರು ವಿಚಾರಗಳಲ್ಲಿ ಪದೇ ಪದೇ ಅಂತೆಕಂತೆ ನ್ಯೂಸುಗಳು ಸಾಮಾಜಿಕ ಜಾಲತಾಣಗಳಲ್ಲಿ ಗಾಸಿಪ್ ಪ್ರಿಯ ಬಾಯಿಯ ತುದಿಯಿಂದ ಹರಡುತ್ತಿರುತ್ತಲೇ ಇರುತ್ತದೆ. ಇಂಥ ಗಾಸಿಪ್ ಪ್ರಿಯರಿಗೆ ಇದೀಗ ಮೃಷ್ಟಾನ್ನವೂ ಭೋಜನವಾಗಿ ಪರಿಮಣಿಸಿರುವವರು ಸೌತ್ ಸ್ಟಾರ್ ಹೀರೋಯಿನ್ ನಯನತಾರ.

ಈ ಹಿಂದೆ ನಟ ಪ್ರಭುದೇವ ಅವರೊಂದಿಗೆ ಬ್ರೇಕಪ್ ಮಾಡಿಕೊಂಡು ಸುದ್ದಿಯಾಗಿದ್ದ ನಯನತಾರ ಇದೀಗ ಬೇರೆಯೊಬ್ಬರ ಜೊತೆಗೇ ಡೇಟಿಂಗ್ ನಡೆಸುತ್ತಿದ್ದಾರಂತೆ. ಆತನೊಂದಿಗೆ ಮದುವೆಯಾಗೋದಾಗಿಯೂ ಸುದ್ದಿ ಹರಿಯ ಬಿಟ್ಟಿದ್ದಾಳೆ. ಅಂದಹಾಗೆ ನಾಯತರಾಳನ್ನು ಮದುವೆಯಾಗೋ ನಿರ್ಧಾರ ಮಾಡಿರುವಾತ ನಿರ್ದೇಶಕ ವಿಘ್ನೇಶ್ ಶಿವನ್. ಹಾಗಂತ ಎಲ್ಲಾ ಕಡೆ ರೂಮರ್ ಹರಿದಾಡುತ್ತಿದೆ.

 

 

ಈ ಜೋಡಿಗಳು ಎಲ್ಲೆಂದರಲ್ಲಿ ಕ್ಯಾಮೆರಾ ಕಣ್ಣಿಗೆ ಸಿಗುವ ಮೂಲಕ ತಮ್ಮ ಪ್ರೀತಿ ವಿಷಯವನ್ನು ಬಹಿರಂಗ ಪಡಿಸಿದ್ದರು. ಇಬ್ಬರ ಕುಟುಂಬ ಕೂಡ ಇವರ ಪ್ರೀತಿಗೆ ಹಸಿರು ನಿಶಾನೆ ತೋರಿದೆ. ಸದ್ಯ ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಯನತಾರ ಡಿಸೆಂಬರ್​ ವೇಳೆಗೆ ಎಲ್ಲವನ್ನು ಮುಗಿಸಿ ಹಸೆಮಣೆ ಏರಲಿದ್ದಾರೆ ಎಂದು ಕಾಲಿವುಡ್​ ಮೂಲಗಳು ತಿಳಿಸಿವೆ. ಡೆಸ್ಟಿನೇಷನ್​ ವೆಡ್ಡಿಂಗ್​ ಪ್ಲಾನ್​ ನಡೆಸಿದ್ದು, ಈ ಗುಟ್ಟನ್ನು ಇಬ್ಬರು ಬಿಟ್ಟುಕೊಟ್ಟಿಲ್ಲ.

2015ರಲ್ಲಿ ‘ನಾನುಂ ರೌಡಿಧಾನ್’ ಚಿತ್ರದ ಸೆಟ್‌ನಲ್ಲಿ ಇಬ್ಬರಿಗೆ ಪರಿಚಯ ಬೆಳೆದ ಬಳಿಕ ಅದು ಪ್ರೀತಿಗೆ ತಿರುಗಿತ್ತು. ತಮಿಳಿನ ಪೋಡಾ ಪೋಡಿ ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡ ವಿಘ್ನೇಶ್ ಅವರನ್ನು ನಯನತಾರ ತಮ್ಮ ಕ್ಲೋಸ್ ಫ್ರೆಂಡ್ ಹಾಗೂ ಸಹ ನಟ ಧನುಷ್ ಮೂಲಕ ಭೇಟಿ ಮಾಡಿದ್ದರು. ವಿಘ್ನೇಶ್ ಮತ್ತು ನಯನಾ ತಾರ ತುಂಬಾ ಕ್ಲೋಸ್ ಆಗಿದ್ದಲ್ಲದೆ, ಸೆಟ್‌ನಲ್ಲಿ ಹೆಚ್ಚಿನ ಸಮಯವನ್ನು ವ್ಯಯಿಸುತ್ತಿದ್ದರು. ವಿಘ್ನೇಶ್ ಜತೆಗಿನ ರಿಲೇಷನ್‌ಶಿಪ್‌ನಿಂದಾಗಿ ನಾನುಮ್ ರೌಡಿಧಾನ್ ಚಿತ್ರದ ಶೂಟಿಂಗ್ ವಿಳಂಬವಾಗುತ್ತಿದೆ ಎಂಬ ಆರೋಪ ಸಹ ಕೇಳಿಬಂದಿತ್ತು. ವಿಘ್ನೇಶ್, ನಯನತಾರಾಗಿಂತ ಒಂದು ವರ್ಷ ಚಿಕ್ಕವರು ಎನ್ನಲಾಗಿದೆ.

ಅಂದಹಾಗೆ ನಯನತಾರ ಅವರು ರಿಯಲ್ ಸ್ಟಾರ್ ಉಪೇಂದ್ರ ಅವರು ನಟಿ ನಿರ್ದೇಶಿಸಿದ್ದ ಸೂಪರ್ ಚಿತ್ರದಲ್ಲಿ ನಟಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top