fbpx
ಸಮಾಚಾರ

15 ವರ್ಷ ಕರ್ನಾಟಕದಲ್ಲಿ ನೆಲೆಸಿದರೆ ‘ಕನ್ನಡಿಗ’ – ಸದ್ಯದಲ್ಲೇ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ?

ಜನಸಂಖ್ಯೆ ನಿಯಂತ್ರಣ, ಶಿಕ್ಷಣ, ಉದ್ಯೋಗ ಸೃಷ್ಟಿಹಾಗೂ ಆರ್ಥಿಕತೆಯಲ್ಲಿ ಇಡೀ ದೇಶಕ್ಕೆ ಕರ್ನಾಟಕ ಮಾದರಿ ಸ್ಥಾನದಲ್ಲಿದೆ. ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ದೇಶದ ಪ್ರಥಮ ಮೂರು ರಾಜ್ಯಗಳ ಪೈಕಿ ಕರ್ನಾಟಕವೂ ಒಂದು. ಆದರೆ, ರಾಜ್ಯದ ಎಲ್ಲಾ ಕ್ಷೇತ್ರದ ಉದ್ಯೋಗಗಳಲ್ಲೂ ಪರಭಾಷಿಕರ ಹಾವಳಿಯಿಂದ ಕನ್ನಡಿಗರು ನಲುಗುವಂತಾಗಿದೆ. ಹಾಗಾಗಿ ಕರ್ನಾಟಕದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎನ್ನುವ ಮಾತುಗಳು ಕೇಳಿ ಬರುತ್ತಲೇ ಇವೆ.

ಈ ಮದ್ಯೆ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಸಂಬಂಧ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ರೂಪಿಸಲಾಗಿರುವ “ಹತ್ತು ವರ್ಷ ರಾಜ್ಯದಲ್ಲಿ ನೆಲೆಸಿರಬೇಕೆಂಬ’ ನಿಯಮವನ್ನು 15 ವರ್ಷಕ್ಕೆ ಏರಿಕೆ ಮಾಡುವಂತೆ ಸರಕಾರಕ್ಕೆ ಶಿಫಾರಸು ಮಾಡಲು ಕಾರ್ಮಿಕ ಇಲಾಖೆ ಮುಂದಾಗಿದೆ.

ಆಂಧ್ರ ಪ್ರದೇಶ ಮಾದರಿಯಂತೆ ನೂತನ ಕಾಯ್ದೆಯ ಕರಡನ್ನು ಕಾನೂನು ಇಲಾಖೆಯ ಸಹಯೋಗದೊಂದಿಗೆ ತಯಾರಿಸಿ ಕರಡು ಮಸೂದೆಯನ್ನು ಮುಂದಿನ ಸಭೆಯಲ್ಲಿ ಅಂತಿಮಗೊಳಿಸುವುದಾಗಿ, ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್‌ ಮಣಿವಣ್ಣನ್‌ ಪಿ. ಅವರು ತಿಳಿಸಿದ್ದಾರೆ.

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಸಂಬಂಧ ಸರಕಾರದ ಅಧಿಸೂಚನೆ ಅಂತಿಮಗೊಳಿಸಲು ಕಳೆದ ತಿಂಗಳು ಆ.27ರಂದು ಕಾರ್ಮಿಕ ಇಲಾಖೆ ಮಹತ್ವದ ಸಭೆ ನಡೆಸಿತ್ತು. ಕಾರ್ಮಿಕ ಇಲಾಖೆಯ ಸೆಕ್ರೆಟರಿ ಐಎಎಸ್ ಅಧಿಕಾರಿ ಮಣಿವಣ್ಣನ್ ಅವರ ನೇತೃತ್ವದಲ್ಲಿ ಸಭೆ ನಡೆದಿತ್ತು. . ಸಭೆಯಲ್ಲಿ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲು ತೀರ್ಮಾನಿಸಲಾಗಿದೆ. ಹಾಗೆಯೇ ಇದೆ ವಿಚಾರವಾಗಿ ಸಲಹೆ ಮತ್ತು ಸೂಚನೆ ಪಡೆಯಲು ಕೂಡ ತೀರ್ಮಾನ ಮಾಡಲಾಗಿತ್ತು.

ಕನ್ನಡಿಗರು ಅಂದ್ರೆ ಯಾರು?
ಕನ್ನಡಿಗ ಎಂದರೆ ಕರ್ನಾಟಕದಲ್ಲಿ ಕನಿಷ್ಠ 15 ವರ್ಷ ವಾಸವಾಗಿರಬೇಕು. ಮತದಾನದ ಗುರುತಿನ ಚೀಟಿ ಪಡೆದಿರಬೇಕು. ಕನ್ನಡ ಓದಲು, ಬರೆಯಲು ಹಾಗೂ ಮಾತನಾಡಲು ಕಡ್ಡಾಯವಾಗಿ ಬರಬೇಕು ಎಂಬುವುದನ್ನು ಪರಿಗಣಿಸಲು ಸಭೆಯಲ್ಲಿ ಅನುಮೋದನೆ ದೊರೆದಿತ್ತು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top