fbpx
ಭವಿಷ್ಯ

ಸೆಪ್ಟೆಂಬರ್ 28: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ.

ಸ್ಥಳ- ಬೆಂಗಳೂರು.
ಶನಿವಾರ, ಸೆಪ್ಟೆಂಬರ್ 28 2019
ಸೂರ್ಯೋದಯ : 6:08 am
ಸೂರ್ಯಾಸ್ತ: 6:11 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ಭಾದ್ರಪದ
ಪಕ್ಷ :ಕೃಷ್ಣಪಕ್ಷ
ತಿಥಿ :ಅಮಾವಾಸ್ಯೆ 23:56
ನಕ್ಷತ್ರ:UttaraPhalguni 22:03
ಯೋಗ : ಶುಕ್ಲ 20:24
ಕರಣ: ಚತುಷ್ಪಾದ 13:51 ನಾಗ 23:56

ಅಭಿಜಿತ್ ಮುಹುರ್ತ: 11:46 am – 12:34 pm
ಅಮೃತಕಾಲ : 3:45 pm – 5:09 pm

ರಾಹುಕಾಲ-9:11 am – 10:40 am
ಯಮಗಂಡ ಕಾಲ- 1:39 pm – 3:09 pm
ಗುಳಿಕ ಕಾಲ- 6:12 am – 7:41 am

 

 

 

ಮಾನಸಿಕ ದೃಢತೆಯನ್ನು ಸಂಪಾದಿಸಿಕೊಳ್ಳಿ. ನಿಮ್ಮ ಎಲ್ಲಾ ಕಾರ್ಯಗಳು ಭಗವಂತನ ಅನುಗ್ರಹದಿಂದ ಸುಲಲಿತವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಮನೆ ಮಂದಿಯ ಪ್ರೀತಿ ಸೌಹಾರ್ದತೆಗಳು ನಿಮ್ಮನ್ನು ಬೆರಗುಗೊಳಿಸುತ್ತವೆ.

 

ಕೆಲವು ವಿಚಾರಗಳ ಬಗ್ಗೆ ನೀವು ಅತೀ ಹೆಚ್ಚು ಭಾವುಕರಾಗುವಿರಿ. ಆದರೆ ತೀರ ಭಾವುಕತೆಯಿಂದ ವ್ಯವಹರಿಸುವಾಗ ವೈಫಲ್ಯ ಸಂಭವಿಸುವ ಸಾಧ್ಯತೆ ಇದೆ. ಕೆಲವು ವಿಚಾರಗಳಲ್ಲಿ ದೃಢ ನಿರ್ಧಾರ ತಳೆಯುವುದು ಹಿಂದೆಂದಿಗಿಂತಲೂ ಹೆಚ್ಚು ಅವಶ್ಯಕವಾಗಿದೆ.

 

ತಪ್ಪು ಮಾಹಿತಿ ನೀಡುವವರ ಬಗ್ಗೆ ಎಚ್ಚರವಿರಲಿ. ನಿಮ್ಮ ಗುರಿಯು ಬಾಣದಂತೆ ನೇರವಾಗಿರಲಿ. ಬಾಣವು ನಿರ್ದಿಷ್ಟ ಗುರಿಯನ್ನು ತಲುಪಬೇಕೆಂದರೆ ಬಾಣದ ಹಿಂದಿರುವ ಹುರಿಯನ್ನು ಸ್ವಲ್ಪ ಹಿಂದಕ್ಕೆ ತರಲೇಬೇಕಾಗುವುದು. ಹಾಗಾಗಿ ಇಂದಿನ ಸೋಲು ನಾಳಿನ ಗೆಲುವಿಗೆ ದಾರಿ ಆಗುವುದು.

 

ಎಲ್ಲಾ ಸಂಪತ್ತು ಇದ್ದರೂ ಆರೋಗ್ಯ ಸಂಪತ್ತು ಇಲ್ಲದಿದ್ದರೆ ಯಾವುದನ್ನು ಮನಃಪೂರ್ವಕವಾಗಿ ಅನುಭವಿಸಲು ಆಗುವುದಿಲ್ಲ. ಹಾಗಾಗಿ ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ. ಕುಲದೇವರನ್ನು ಪ್ರಾರ್ಥಿಸಿ.

 

 

ಎಲ್ಲರ ಅಭಿಪ್ರಾಯಗಳನ್ನು ಕಿವಿಗೊಟ್ಟು ಆಲಿಸಿ. ಆದರೆ ಅದನ್ನು ಕಾರ್ಯರೂಪಕ್ಕೆ ತರುವಾಗ ಚಿಂತಿಸಿ. ತೀರ್ಮಾನವು ನಿಮ್ಮ ಇಷ್ಟದಂತೆ ಇರಲಿ. ಇದರಿಂದ ನಿಮ್ಮ ಸಾಮಾಜಿಕ ಸ್ಥಾನಮಾನ ಹೆಚ್ಚಾಗುವುದು.

 

 

ನೇರವಾಗಿ ಹೋಗುತ್ತಿರುವ ಮಾರ್ಗದಲ್ಲಿ ತುಸು ತೊಂದರೆಯು ಎದುರಾಗುವ ಸಾಧ್ಯತೆ ಇರುತ್ತದೆ. ಮನೋಜಯಕ್ಕೆ ಕಾರಣರಾದ ಮಾರುತಿಯನ್ನು ಅನನ್ಯ ಶ್ರದ್ಧಾ ಭಕ್ತಿಯಿಂದ ನೆನೆಯಿರಿ. ನಿಮ್ಮ ಕಾರ್ಯ ಸುಗಮವಾಗುವುದು.

 

 

ನಿಮ್ಮ ಆತ್ಮೀಯ ಗೆಳೆಯರೇ ನಿಮ್ಮಿಂದ ದೂರವಾಗಿ ಅವರ ನಿಜವಾದ ಬಣ್ಣ ಬಯಲಾಗುವುದು. ಸಕಾಲದಲ್ಲಿ ಸಹಾಯ ಮಾಡದೇ ಅವರು ನಿಮ್ಮನ್ನು ಸತಾಯಿಸುವರು. ಕುಲದೇವರನ್ನು ಭಜನೆ ಮಾಡಿ.

 

 

ಎದುರಾಳಿಯ ಬಲಾಬಲ ತಿಳಿದು ಹೋರಾಡಿದಲ್ಲಿ ನೀವು ಯಶಸ್ಸನ್ನು ಹೊಂದುವಿರಿ. ಈ ಬಗ್ಗೆ ಸ್ವಲ್ಪ ಉದಾಸೀನ ತೋರಿದರೂ ಸಹ ಶತ್ರುವಿನ ಪ್ರಾಬಲ್ಯ ಜಾಸ್ತಿ ಆಗುವುದು. ಕೌಟುಂಬಿಕ ಜೀವನದಲ್ಲಿನ ಸಮಸ್ಯೆ ನಿವಾರಣೆಗಾಗಿ ಈಶ್ವರ ದೇವರ ಧ್ಯಾನ ಮಾಡಿ.

 

ಸುಸ್ತು, ನಿರ್ಜಲೀಕರಣದಿಂದ ಆಯಾಸವಾಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಉದಾಸೀನ ಮಾಡದೆ ವೈದ್ಯರನ್ನು ಭೇಟಿ ಮಾಡಿ. ಈ ಹಿಂದೆ ನಿಮ್ಮಿಂದ ಸಾಲ ಪಡೆದ ಸ್ನೇಹಿತರು ಸಾಲ ಮರುಪಾವತಿ ಮಾಡುವ ಸಾಧ್ಯತೆ ಇರುತ್ತದೆ.

 

 

ಮ್ಮದೇ ಆದ ವಿಶಿಷ್ಟ ಪ್ರತಿಭೆಯಿಂದ ಎಲ್ಲರ ಮನ ಗೆಲ್ಲುವಿರಿ. ಇದೇ ತೆರನಾದ ನಿಮ್ಮ ಆತ್ಮವಿಶ್ವಾಸವು ನಿಮಗೆ ಹೆಚ್ಚಿನ ಧನಲಾಭವನ್ನು ತಂದುಕೊಡುವುದು. ಸಾಮಾಜಿಕವಾಗಿ ನೀವು ಗೌರವಿಸಲ್ಪಡುವಿರಿ.

 

ಅನ್ಯ ಮನಸ್ಥಿತಿಯಿಂದ ಹೊರಬನ್ನಿ. ದುಡಿಮೆ ಮಾಡಲು ಹಲವು ದಾರಿಗಳಿವೆ. ನಿಮ್ಮ ಮನಸ್ಸಿನ ಒಳವಿಚಾರವನ್ನು ಆಪ್ತ ಗೆಳೆಯನ ಮುಂದೆ ಹೇಳಿಕೊಳ್ಳಿ. ಆತನು ನಿಮಗೆ ಸಾಂತ್ವನ ನೀಡುವುದರ ಜತೆಯಲ್ಲಿ ನಿಮ್ಮ ಬಾಳು ಬೆಳಗುವಂತಹ ಸೂಚನೆ ನೀಡುವನು.

 

ಅನೇಕ ರೀತಿಯ ಅಧಿಕಾರ ಹಾಗೂ ವರ್ಚಸ್ಸು ಪಡೆಯಲು ಹೆಚ್ಚಿನ ಅವಕಾಶಗಳು ನಿಮಗೆ ದೊರೆಯಲಿದೆ. ಹಳೆಯ ಗೆಳೆಯರು ನಿಮ್ಮನ್ನು ಭೇಟಿ ಮಾಡುವರು. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top