fbpx
ಸಮಾಚಾರ

“ಅಯೋಗ್ಯ ಚೇಲಾ, ಬಕೆಟ್ ನ..ಮಗ” ಗುಂಡೂರಾವ್ ವಿರುದ್ಧ ಏಕವಚನದಲ್ಲೇ ಸೋಮಶೇಖರ್ ಕಿಡಿ!

ಕಾಂಗ್ರೆಸ್ ಪಕ್ಷದ ಒಂದು ಗುಂಪಿನ ಮೇಲೆ ಎಸ್.ಟಿ. ಸೋಮಶೇಖರ್ ವಾಗ್ದಾಳಿ ಮುಂದುವರಿದಿದೆ. ಸಿದ್ದರಾಮಯ್ಯ ಆಪ್ತರನ್ನು ಗುರಿಯಾಗಿಸಿ ಯಶವಂತಪುರ ಕ್ಷೇತ್ರದ ಅನರ್ಹ ಶಾಸಕ ಸೋಮಶೇಖರ್ ಟೀಕೆ ಮಾಡಿದ್ದಾರೆ. ಅವನೊಬ್ಬ ಅಯೋಗ್ಯ, ಸಿದ್ದರಾಮಯ್ಯನ ಚೇಲಾ’ ಎಂದು ಏಕವಚನದಲ್ಲಿಯೇ ಸಂಭೋದಿಸಿರುವ ಎಸ್‌.ಟಿ.ಸೋಮಶೇಖರ್ ‘ಅವನಿಗೆ ಏನು ಯೋಗ್ಯತೆ ಇದೆ’ ಎಂದು ಪ್ರಶ್ನೆ ಮಾಡಿದ್ದಾರೆ.

ಅನರ್ಹ ಶಾಸಕರು ದ್ರೋಹ ಎಸಗಿದ್ದಾರೆ ಎಂದು ದಿನೇಶ್ ಗುಂಡೂರಾವ್ ಮಾಡಿದ್ದ ಟೀಕೆಗೆ ಎಸ್.ಟಿ. ಸೋಮಶೇಖರ್ ಬಹಳ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ದಿನೇಶ್ ಗುಂಡೂರಾವ್ ಅವರನ್ನು ಅಯೋಗ್ಯ ನನ್ ಮಗ, ಬಕೆಟ್ ನನ್ ಮಗ ಎಂದೆಲ್ಲಾ ಸೋಮಶೇಖರ್ ನಿಂದಿಸಿದ್ದಾರೆ. ದಿನೇಶ್ ಗುಂಡೂರಾವ್ ಸಿದ್ದರಾಮಯ್ಯ ಚೇಲಾ, ಬಕೆಟ್. ಅವನು ನಮ್ಮ ಬಗ್ಗೆ ಏನ್ ಮಾತಾಡೋದು? ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ರಿಜ್ವಾನ್ ಅರ್ಷಾದ್‍ದು. ಇದು ಸಿದ್ದರಾಮಯ್ಯನ ಕಾಂಗ್ರೆಸ್ಸಾ? ಓರಿಜನಲ್ ಕಾಂಗ್ರೆಸ್ಸಾ ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದರು.

“ಪದೇ ಪದೇ ಅನರ್ಹರ ಬಗ್ಗೆ ಮಾತನಾಡುವುದು ಬೇಡ. ನಿನಗೇ ಪುರುಸೊತ್ತಿಲ್ಲ. ಮಾಡಲು ಬೇಕಾದಷ್ಟು ಕೆಲಸಗಳಿವೆ. ಅದನ್ನು ಬಿಟ್ಟು ನಮ್ಮ ಬಗ್ಗೆ ಮಾತನಾಡುತ್ತಾನೆ. ಇವನು ಕೆಪಿಸಿಸಿ ಅಧ್ಯಕ್ಷನಾ ಅಥವಾ ಸಿದ್ದರಾಮಯ್ಯನ ಚೇಲನಾ?” ಎಂದು ಕಟುವಾಗಿ ಟೀಕಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top