fbpx
ಸಮಾಚಾರ

ಗೀತಾ ಚಿತ್ರ ವಿಮರ್ಶೆ: ಕನ್ನಡ ಕಟ್ಟಾಳುವಿನ ಕೆಚ್ಚೆದೆಯ ಹೋರಾಟ ಹಾಗೂ ನಿಷ್ಕಲ್ಮಶ ಪ್ರೇಮ.

ಕನ್ನಡ ಭಾಷೆ ವಿಚಾರವಾಗಿ ಕರ್ನಾಟಕದಲ್ಲಿ ಅನೇಕ ಹೋರಾಟಗಳು ನಡೆದಿವ. ಅವುಗಳಲ್ಲಿ ಪ್ರಮುಖವಾದ ಒಂದು ಹೋರಾಟ ಗೋಕಾಕ್‌ ಚಳುವಳಿ. ಅದನ್ನು ಹಿನ್ನೆಲೆಯಾಗಿಟ್ಟುಕೊಂಡು ಅದಕ್ಕೆ ಒಂದು ಸುಂದರ ಪ್ರೇಮ ಕಥೆಯನ್ನು ಗೀತಾ ಚಿತ್ರದಲ್ಲಿ ಅತ್ಯುತ್ತಮವಾಗಿ ಹೇಳಿದ್ದಾರೆ ನಿರ್ದೇಶಕ ವಿಜಯ್‌ ನಾಗೇಂದ್ರ.

ಕನ್ನಡತನ ಹಾಗೂ ಪ್ರೀತಿಯ ಜೀವಂತಿಕೆಯನ್ನು ಒಟ್ಟಿಗೆ ಕಟ್ಟಿಕೊಡುವ ಸಿನಿಮಾ ‘ಗೀತಾ’. ಮಾತೃಭಾಷೆಯ ಉಳಿವು ಹಾಗೂ ಪ್ರೀತಿಯ ಸೌಂದರ್ಯ ಎರಡನ್ನೂ ಒಂದೇ ನಾಣ್ಯದ ಎರಡು ಮುಖಗಳಂತೆ ಚಿತ್ರಿಸಿದ್ದಾರೆ ನಿರ್ದೇಶಕ ವಿಜಯ್‌ ನಾಗೇಂದ್ರ. ಕನ್ನಡ ಭಾಷೆಯ ವಾಸ್ತವ ಸ್ಥಿತಿಗತಿಯನ್ನು ಪ್ರತಿಬಿಂಬಿಸುತ್ತಲೇ ಕಮರ್ಷಿಯಲ್‌ ಸೂತ್ರಗಳಿಗೆ ಬದ್ಧವಾಗಿ ಚಿತ್ರಕಥೆ ಹೆಣೆದಿದ್ದಾರೆ.

1981ರ ಸಮಯದಲ್ಲಿ ಕರ್ನಾಟಕದಲ್ಲಿ ಭಾಷೆಗೆ ಸಂಬಂಧಿಸಿದಂತೆ ಗೋಕಾಕ್ ಚಳುವಳಿ ಎಂಬ ಕ್ರಾಂತಿ ನಡೆಯುತ್ತೆ. ಈ ಹೋರಾಟದಲ್ಲಿ ಕನ್ನಡ ಭಾಷೆಗಾಗಿ ಹೋರಾಡುವ ಸ್ವಾಭಿಮಾನಿ ಕನ್ನಡಿಗನ ಪಾತ್ರದಲ್ಲಿ ಗಣೇಶ್ ನಟಿಸಿದ್ದಾರೆ. ಒಂದು ಕಡೆ ಶಂಕರ್ ಪಾತ್ರದಲ್ಲಿ ಗಣೇಶ್ ಸ್ವಾಭಿಮಾನಿ ಕನ್ನಡಿಗನಾಗಿ ಅಬ್ಬರಿಸಿದರೆ, ಮತ್ತೊಂದು ಕಡೆ ಆಕಾಶ್ ಪಾತ್ರದಲ್ಲಿ ನ್ಯಾಚುರಲ್ ಅಭಿನಯ ನೀಡಿದ್ದಾರೆ. ಗಣೇಶ್ ಅವರು ಎರಡು ಶೇಡ್ ಗಳಲ್ಲಿಯೂ ಅತ್ಯತ್ತಮವಾಗಿ ನಟಿಸಿದ್ದಾರೆ.

ಗೋಕಾಕ್ ಚಳುವಳಿಯನ್ನು ಮರು ರೂಪಿಸಿದ ರೀತಿಯೇ ನೋಡುವ ಪ್ರೇಕ್ಷಕರನ್ನು ಥ್ರಿಲ್ ಆಗಿಸುವಂತಿದೆ. ಕಥೆ ಬೇರೆ ಬೇರೆ ಆಯಾಮಗಳಳತ್ತ ಸಾಗಿದರೂ ಯಾವುದೂ ಕೃತಕ ಅನ್ನಿಸದಂತೆ, ಬೇರೆ ಬೇರೆಯೆಂಬ ಭಾವ ಮೂಡಿಸದಂತೆ ಕೂಡಿಸುವಲ್ಲಿಯೂ ಕೂಡಾ ನಿರ್ದೇಶಕ ಗೆದ್ದಿದ್ದಾರೆ. ನಾಯಕ ಗಣೇಶ್ ಅವರಿಗೆ ಮೂವರು ನಾಯಕಿಯರು ಮತ್ತು ಇತರೇ ಪಾತ್ರವರ್ಗವೂ ಸಾಥ್ ಕೊಟ್ಟಿದ್ದಾರೆ. ಹಿನ್ನೆಲೆ ಸಂಗೀತ, ಛಾಯಾಗ್ರಹಣ ಮತ್ತು ಹಾಡುಗಳೆಲ್ಲವೂ ಒಂದಕ್ಕೊಂದು ಪೂರಕವಾಗಿವೆ.

ಒಟ್ಟಿನಲ್ಲಿ ಒಂದು ಸುಂದರ ಪ್ರೇಮ ಕಥೆ ನಡುವೆಯೇ ಕನ್ನಡಿಗರ ಸ್ವಾಭಿಮಾನದ ಹೋರಾಟವನ್ನು ಬಹಳ ಅಚ್ಚುಕ್ಕಟ್ಟಾಗಿ ಕಟ್ಟಿರುವ ಗೀತಾ ಸಿನಿಮಾವನ್ನು ಕುಟುಂಬ ಸಮೇತರಾಗಿ ನೋಡಬಹುದು.. ನೋಡಿ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಗೋಕಾಕ್ ಚಳುವಳಿ ಎಂಬ ಬಗ್ಗೆ ಸ್ವಲ್ಪವಾದರೂ ಅನುಭವಿಸಬಹುದು.

ಕಳೆದ 35 ವರ್ಷಗಳಲ್ಲಿ, 1982ರಲ್ಲಿ ಕರ್ನಾಟಕದಲ್ಲಿ ನಡೆದ ಅತಿದೊಡ್ಡ ಕನ್ನಡ ಭಾಷಾ ಸಂಬಂಧಿತ ‘ಗೋಕಾಕ್ ಚಳುವಳಿಯ ಬಗ್ಗೆ ಯಾರೊಬ್ಬರೂ ಒಂದು ಪರಿಪೂರ್ಣ ಸಿನಿಮಾ ಮಾಡಲಿಲ್ಲವೇ ಎಂಬುದನ್ನು ತಿಳಿದರೆ ಆಶ್ಚರ್ಯ ಮತ್ತು ಬೇಸರವಾಗುತ್ತೆ. ಗೋಕಾಕ್ ಚಳುವಳಿಯ ಬಗ್ಗೆ ಕೆಲವು ಕಿರುಚಿತ್ರಗಳಿವೆ, ಆದರೆ ಪೂರ್ಣಪ್ರಮಾಣದ ಸಿನಿಮಾ ಯಾವುದು ಇರಲಿಲ್ಲ. ಈಗ ಗೀತಾ ಸಿನಿಮಾದಲ್ಲಿ ಪೂರ್ಣ ಪ್ರಮಾಣದಲ್ಲಿ ಇಲ್ಲದಿದ್ದರೂ ಚಳುವಳಿಯ ಕಿರು ಸ್ಥಿತಿಗತಿಯನ್ನು ಅದ್ಭುತವಾಗಿ ಬಿಂಬಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top