fbpx
ಸಮಾಚಾರ

“ಕರ್ನಾಟಕದ ಉದ್ಯೋಗಗಳಿಗೆ ಕನ್ನಡಿಗರೇ ಹಕ್ಕುದಾರರು” ಸಂಸದ ಜಿಸಿ ಚಂದ್ರಶೇಖರ್ ಆಗ್ರಹ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಾಗೂ ಸರ್ಕಾರಿ ಸ್ವಾಮ್ಯದ ಎಲ್ಲ ಉದ್ದಿಮೆ ಮತ್ತು ಖಾಸಗಿ ಕಾಲಗಳಲ್ಲಿಯೂ ಕನ್ನಡಿಗರಿಗೆ ಮೀಸಲಾತಿ ನೀಡಬೇಕು ಎಂಬ ಕೂಗು ಪದೇ ಪದೇ ಕೇಳಿಬರುತ್ತಿರುತ್ತದೆ. ಅಷ್ಟೇ ಅಲ್ಲದೆ ಅಂದ್ರ ಪ್ರದೇಶ, ತೆಲಂಗಾಣ, ಮಧ್ಯ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳ ಸರ್ಕಾರವು ಆಯಾ ರಾಜ್ಯದ ಖಾಸಗಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ನೀಡಲು ಮಸೂದೆ ಜಾರಿ ಮಾಡಲಾಗಿದೆ. ಆ ರಾಜ್ಯಗಳಂತೆ ನಮ್ಮ ಕರ್ನಾಟಕದಲ್ಲೂ ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಆದ್ಯತೆ ಸಿಗಬೇಕು ಎಂಬ ಕೂಗು ಮತ್ತೆ ಜೋರಾಗಿದೆ.

 

 

ಕರ್ನಾಟಕದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು” ಎಂದು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದ ಜಿಸಿ ಚಂದ್ರಶೇಖರ್ ಈಗ ಮತ್ತೊಮ್ಮೆ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಕಾರ್ಮಿಕ ಇಲಾಖೆಯ ಕರ್ನಾಟಕದಲ್ಲಿ ಉದ್ಯೋಗಳಲ್ಲಿ ಕನ್ನಡಿಗರಿಗೆ ಆದ್ಯತೆ ಎಂಬ ಕರುಡು ಮಸೂದೆಯನ್ನು ಆದಷ್ಟು ಶೀಘ್ರ ಅಂತಿಮಗೊಳಿಸಲಾಗುವುದು,ಈ ನಿಲುವು ನನಗೆ ಅತೀವ ಸಂತೋಷ ತಂದಿದೆ” ಎಂದು ಹೇಳಿದ್ದಾರೆ.

ಕಾರ್ಮಿಕ ಇಲಾಖೆಯು ಕನ್ನಡಿಗರಿಗೆ ಕರ್ನಾಟಕದ ಉದ್ಯೋಗಳಲ್ಲಿ ಆದ್ಯತೆ ನೀಡಲು ಮುಂದಾಗಿದ್ದು ಈ ಬಗ್ಗೆ ಸಂಸದರು ತಮ್ಮ ಸಲಹೆ ಸೂಚನೆಗಳನ್ನು ಪಟ್ಟಿ ಮಾಡಿಕೊಂಡು ಇಲಾಖೆಯ ಕಾರ್ಯದರ್ಶಿಗಳಿಗೆ ನೀಡಿದ್ದಾರೆ.

 

 

ಈ ಬಗ್ಗೆ ತಮ್ಮ ಟ್ವಿಟರ್ ಕಾಹ್ತೆಯಲ್ಲಿ ತಿಳಿಸಿರುವ ಚಂದ್ರಶೇಖರ್ “ಇದು ಮೀಸಲಾತಿಯಲ್ಲ ಕನ್ನಡಿಗರ ಹಕ್ಕು! ರಾಜ್ಯದ ಕಾರ್ಮಿಕ ಇಲಾಖೆಯು ಕನ್ನಡಿಗರಿಗೆ ಕರ್ನಾಟಕದ ಉದ್ಯೋಗಳಲ್ಲಿ ಆದ್ಯತೆ ನೀಡಲು ಮುಂದಾಗಿದ್ದು ಈ ಬಗ್ಗೆ ನನ್ನ ಸಲಹೆ ಸೂಚನೆಗಳನ್ನು ನಿಮ್ಮೆಲ್ಲರ ಪರ ಇಂದು ಇಲಾಖೆಯ ಮುಖ್ಯಕಾರ್ಯದರ್ಶಿಯವರಾದ ಶ್ರೀ ಮಣಿವಣ್ಣನ್ ರವರನ್ನು ಭೇಟಿ ಮಾಡಿ ನೀಡಿರುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಅಂದಹಾಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳು ಕಡ್ಡಾಯವಾಗಿ ಕನ್ನಡದಲ್ಲಿ ನಡೆಯಬೇಕು. ಸಂದರ್ಶನದಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ಕನ್ನಡದಲ್ಲಿಯೇ ಅವಕಾಶ ನೀಡಬೆಕು. ಅಲ್ಲದೇ ಕನಿಷ್ಠ 10ನೇ ತರಗತಿವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದ ಅಭ್ಯರ್ಥಿಗಳಿಗೆ ಉದ್ಯೋಗದಲ್ಲಿ ಪ್ರಾಧಾನ್ಯತೆ ನೀಡಬೇಕು ಎನ್ನುವ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಟ್ವಿಟ್ಟರ್ ಅಭಿಯಾನ ಮಾಡಲಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top