fbpx
ಸಮಾಚಾರ

ನಡುರಸ್ತೆಯಲ್ಲೇ ಲಿಪ್​ಲಾಕ್: ಸಂಯುಕ್ತಾ ಹಾಟ್ ವಿಡಿಯೋ ವೈರಲ್!

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟು ಮಾಡಿದ ಒಂದೇ ಚಿತ್ರಕ್ಕೆ ಇರೋ ಬರೋ ವಿವಾದಗಳನ್ನೆಲ್ಲಾ ಮೈಮೇಲೆ ಎಳೆದುಕೊಂಡು ಹೆಚ್ಚು ಸುದ್ದಿಯಾಗುತ್ತಿದ್ದ ನಟಿ ಸಂಯುಕ್ತ ಹೆಗ್ಡೆ ಚಿತ್ರರಂಗದಿಂದ ದೂರವೇ ಉಳಿದುಕೊಂಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ನಖರಾ ಮಾಡಿಕೊಂಡು ಹೊರ ಬಿದ್ದ ಬಳಿಕ ವಾರಕ್ಕೊಂದರಂತೆ ವಿಚಿತ್ರ ಭಂಗಿಯ ಫೋಟೋಗಳನ್ನು ತನ್ನ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಅಪ್ಲೋಡ್ ಮಾಡಿ ವಿಕೃತಾನಂದ ಪಡುತ್ತಿದ್ದ ಸಂಯುಕ್ತ ಸ್ವಲ್ಪ ದಿನಗಳ ಕಾಲ ಎಲ್ಲವನ್ನು ಮರೆತು ಸುಮ್ಮನಾಗಿಬಿಟ್ಟಿದ್ದರು ಆದ್ರೆ ಇದೀಗ ಮತ್ತೊಮ್ಮೆ ಪ್ರತ್ಯಕ್ಷವಾಗಿದ್ದಾರೆ.

 

 

ಸಂಯುಕ್ತಾ ಹೆಗ್ಡೆ ಅವರು ಲಿಪ್‍ಲಾಕ್ ಮಾಡಿದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಂಯುಕ್ತಾ ತಮಿಳಿನಲ್ಲಿ ನಟಿಸಿರುವ ‘ಪಪ್ಪಿ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಟ್ರೈಲರ್ ನಲ್ಲಿ ಸಂಯುಕ್ತಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಲಿಪ್‍ಲಾಕ್ ದೃಶ್ಯಗಳಲ್ಲಿ ಅಭಿನಯಿಸಿದ್ದು, ಜೊತೆಗೆ ಕೆಲವು ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪಪ್ಪಿ ಚಿತ್ರದಲ್ಲಿ ಸಂಯುಕ್ತಾ, ಹೀರೋ ವರುಣ್ ಜೊತೆ ಬೈಕಿನಲ್ಲಿ ಹೋಗುವಾಗ ಲಿಪ್‍ಲಾಕ್ ಮಾಡುವ ದೃಶ್ಯಗಳು ವೈರಲ್ ಆಗಿವೆ.

ಈ ‘ಪಪ್ಪಿ’ ಸಿನಿಮಾದಲ್ಲಿ ಯುವತಲೆಮಾರಿನ ಪ್ರೇಮಕಥೆಯಿದೆ. ಈ ಚಿತ್ರದಕ್ಕೆ ಮೊರಟ್ಟು ಸಿಂಗಲ್ ಎಂಬುವವರು ನಿರ್ದೇಶನ ಮಾಡಿದ್ದಾರೆ. ಈ ಕಥೆ ಒಂದು ಹುಡುಗನ ಸುತ್ತವೇ ಇರಲಿದೆ ಎಂಬುದು ಅರ್ಥವಾಗುತ್ತದೆ. ಕಾಮಿಡಿ ಆಧಾರಿತವಾಗಿರುವ ಈ ಟ್ರೇಲರ್‌ ನೋಡಲಂತೂ ಸಖತ್ ಕುತೂಹಲಕಾರಿಯಾಗಿದೆ. ಸಂಯುಕ್ತ ಮೈಚಳಿ ನಟಿಸಿರೋದಂತೂ ಪಕ್ಕಾ. ಅಷ್ಟೇ ಅಲ್ಲದೆ ಬೈಕ್‌ನಲ್ಲಿ, ಕಾರಿನಲ್ಲಿ ಚಲಿಸುವಾಗ ತುಟಿಗೆ ಮುತ್ತಿಕ್ಕುವ ದೃಶ್ಯಗಳು ಸದ್ಯ ವೈರಲ್ ಆಗಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top