fbpx
ಸಮಾಚಾರ

ಮಾತೃಭಾಷೆಯಲ್ಲಿ ಶಾಲಾ ಕಲಿಕೆಯ ಮಹತ್ವಗಳು.

ಮೊದಲಬಾರಿ ಮುದ್ದಾಗಿ ತೊದಲುವ ಶಬ್ದದಿಂದ ಮಗುವಿನ ತಾಯ್ನುಡಿಯ ಪ್ರಯತ್ನ ಹಾಗು ಪ್ರಯೊಗ ಪ್ರಾರಂಭವಾಗುತ್ತದೆ. ಅಂಬೆಗಾಲಿಡುತ್ತ, ಸೊಟ್ಟ ಹೆಜ್ಜೆ ಇಡುತ್ತ, ಮೊದಲನೇ ನಡುಗೆಯಲ್ಲಿ, ಮೊದಲ ಓಟ ಬೆಳೆಸುತ್ತ, ಅಮ್ಮನ ಕೈಯಲ್ಲಿ ಉಣಿಸಿಗೊಳ್ಳುತ್ತ, ಅಪ್ಪನ ಜೊತೆ ಆಡುತ್ತ, ಅಜ್ಜನ ಜೊತೆ ಕದ್ದು ಚಾಕಲೇಟ್ ತಿನ್ನುತ್ತ, ಅಜ್ಜಿಯ ಜೊತೆ ಹತ್ತಿ ಒಸೆಯತ್ತ ಕಲಿಯುವ ಪ್ರತಿ ಶಬ್ದ, ಪ್ರತಿ ಮಾತು, ಪ್ರತಿ ಹಾಡು, ಪ್ರತಿ ವಿಷಯ ಮಗುವಿನ ಬೆಳವಣಿಗೆ ಜೊತೆ ತನ್ನ ಭಾಷೆಯೂ ಅವನಲ್ಲಿ ಅವಿಭಕ್ತÀ ಭಾಗವಾಗಿ ಬೆಳೆಯುತ್ತ ಸಾಗುತ್ತದೆ. ಮಾತ್ರುಭಾಷೆ ಎನ್ನುವದು ನಮ್ಮ ಹ್ರದಯ ಬಡಿದತದ ಜೊತೆ, ಉಸಿರಾಟದ ಜೊತೆ ನಮ್ಮ ಜೊತೆ ಬೆಳೆದು ಬಂದಿರುತ್ತದೆ. ದೊಡ್ಡವರು ಹೇಳುವ ಪ್ರಕಾರ “ಭಾಷೆಯಲ್ಲಿ ಹೇಳಿದರೆ ಮಾತು ತಿಳಿಯುತ್ತದೆ ಆದರೆ ಮಾತ್ರಭಾಷೆಯಲ್ಲಿ ಹೇಳಿದರೆÀ ಮಾತು ಹ್ರದಯ ಮುಟ್ಟುತ್ತದೆ” ಎನ್ನುವಷ್ಟು ಆಳವಾದ ಸಂಬಂಧ ಮಾತ್ರುಭಾಷೆಯದು ಹಾಗು ನಮ್ಮದು.

ನಮ್ಮ ದೇಶದಲ್ಲಿ ಇರುವ ೧೩೦ ಕೋಟಿ ಜನಸಂಖ್ಯೆಯಲ್ಲಿ ಹೆಚ್ಚುಕಡಿಮೆ ಅಂದುಕೊಂಡರೂ ೧೭೯ ಬೇರೆ ಬೇರೆ ಭಾಷೆಗಳು ಚಾಲನೆಯಲ್ಲಿವೆ, ಆ ಸುಮಾರು ೧೭೯ ಭಾಷೆಗಳಲ್ಲಿ ಮಾತನಾಡುವ ಶೈಲಿಯಲ್ಲಿ ವ್ಯತ್ಯಾಸ ಹಿಡಿದರೆ ೫೦೦ಕ್ಕು ಹೆಚ್ಚು ಚಾಲಿತ ಭಾಷೆಗಳಿವೆ ಅನ್ನಬಹುದು. ಅಧಿಕ್ರತವಾಗಿ ೨೨ ಭಾಷೆಗಳು ನಾಮಿತ ವಾಗಿವೆ. ಎಲ್ಲ ಭಾಷೆಗಳಿಗೆ ತಮ್ಮದೆಆದ ಚರಿತ್ರೆ ಹಾಗು ಸಮ್ರುದ್ದವಾದ ಇತಿಹಾಸ ಇದೆ. ಎಲ್ಲ ಭಾಷೆಯಲ್ಲಿಯೂ ತಮ್ಮದೆಯಾದ ಸಾಹಿತ್ಯ ಶೈಲಿ, ಸಾಹಿತ್ಯ ವಿಶೇಷಣಗಳು ಹಾಗು ತಮ್ಮದೇಯಾದ ಹೊತ್ತಿಕೆಗಳು ಇವೆ. ಭಾರತದೇಶದಲ್ಲಿರುವಷ್ಟು ವೈವಿಧ್ಯತೆ ಹಾಗು ವಿವಿಧತೆ ಬೇರಾವ ದೇಶದಲ್ಲು ಸಿಗಲಿಕ್ಕಿಲ್ಲಾ. ನಮ್ಮ ಶ್ರಿಮಂತ ಇತಿಹಾಸದ ಪ್ರಭಾವದಿಂದ ನಮ್ಮ ಈ ವಿಷೇಶತೆಗಳು ಇನ್ನು ನಮ್ಮ ಕಣ್ಣಿಗೆ ಕಾಣುವಹಾಗೆ ಉಳಿದುಕೊಂಡಿವೆ.

ಭಾಷೆ ಎಂದರೆ ಆಯಾ ಪ್ರಾಂತ್ಯದ ಅಥವಾ ಪಂಗಡದವರಿಗೆ ಮಾತುಕತೆಗೆ ಬೇಕಾದ ಒಂದು ಅಸ್ತçವಾಗಿತ್ತು ಅಷ್ಟೆ. ಸಂಸ್ಕçತ ತುಂಬಾ ಹಳೆಯ ಭಾಷೆಯಾಗಿ ತುಂಬಾ ದಿನದಿಂದ ಚಾಲನೆಯಲ್ಲಿದ್ದರೂ ಅದರ ಬಳಕೆ ಮಾತ್ರ ಕೆಲಜನರಿಗೆ ಸೀಮಿತವಿದ್ದಹಾಗಿತ್ತು. ಸಂಸ್ಕçತ ಭಾಷೆ ಪಂಡಿತರಿಗೆ, ಶಾಸ್ತçಜ್ಞರಿಗೆ ಹಾಗು ಅರ್ಚಕರಿ ಮಾತ್ರ ಸೀಮಿತ ಅನ್ನುವ ಹಾಗೆ ಶಾಸ್ತç ಹಾಗು ವೈದಕಿ ಉಪಯೊಗಕ್ಕೆ ಮಾತ್ರ ಬಳಿಸಿಕೊಂಡಿರುವ ಕಾರಣದಿಂದ ಭಾಷೆ ಅಷ್ಟೊಂದು ಪ್ರಚಲಿತವಾಗಿರಲಿಲ್ಲ.

ಆಡಿಕೆಯಲ್ಲಿರುವ ಭಾಷೆಗಳು ತಮ್ಮದೆಯಾದ ಸ್ಥಾನ ಬೆಳೆಸಿಕೊಂಡು, ವ್ಯಾಕರಣ ಸ್ರುಷ್ಟಿಯಾಗಿ, ಭಾಷಾ ಶಿಸ್ತು ಬೆಳೆದು ಸಾಹಿತ್ಯ ಸಮ್ರುದ್ಧಿಯನ್ನು ಬೆಳೆಸಿಕೊಂಡು ಹೆಸರುಗಳನ್ನು ಘಳಿಸಿಕೊಂಡವು. ಸಾಮಾನ್ಯವಾಗಿ ನೋಡಿದರೆ ದ್ರಾವಿಡಿಯನ ಭಾಷೆಗಳು ಚಾಲನೆಯಲ್ಲಿದ್ದು ಹೆಚ್ಚು ಹೆಚ್ಚಾಗಿ ೨ ಸಾವಿರ ವರುಷಕ್ಕಿಂತಲು ಮೇಲಿರಬಹುದು. ನಮ್ಮ ಅಜ್ಜ ಅಜ್ಜಿಯರ ಅಜ್ಜ ಅಜ್ಜಿಯಂದಿರು ಮಾತನಾಡಿ ಬೆಳೆಸಿ, ಅವರು ತಮ್ಮ ತಮ್ಮ ಕುಡಿಗಳಿಗೆ ಕಲಿಸಿ, ಕಡಿಮೆ ಎಂದರು ನೂರು ತಲೆಮಾರು ಮಾತನಾಡುತ್ತ ಬಂದಂಥ ಬಾಷೆ ನಮ್ಮ ಮಾತ್ರುಭಾಷೆ. ಅಷ್ಟು ತಲೆಮಾರಿನಿಂದ ಬಂದ ಆ ಸಂಸ್ಕುçತಿ, ಆ ತಿಳುವಳಿಕೆ, ಆ ಭಾಷಾಭಿಮಾನ ನಮಗೆ ತಿಳಿಯದೇ, ತಿಳುವಳಿಕೆ ಇಲ್ಲದೆ ನಮ್ಮ ನರ ನಾಡಿಯಲ್ಲಿ ಉಸಿರಾಟದಲ್ಲಿ ಕೂಡಿಕೊಂಡಿರುತ್ತದೆ. ಇದೆಲ್ಲಾ ಆದನಂತರ ಸುಮಾರು ೫ ನೂರು ವರ್ಷಗಳ ಹಿಂದೆ ಹಿಂದಿ ಭಾಷೆಯ ಉದಯವಾಯಿತು. ಹಿಂದಿ ಭಾಷೆ ಹುಟ್ಟಿದ್ದೆ ಪರ್ಸಿಯನ್ ಹಾಗು ಸಂಸ್ಕçತ ಭಾಷೆ ಎರಡು ಕೂಡಿ. ಇನ್ನು ಆಂಗ್ಲಭಾಷೆ ನಮಗೆ ಪರಿಚಯವಾಗಿದ್ದೆ ಬ್ರಿಟಿಷರು ನಮ್ಮ ನೆಲದಲ್ಲಿ ಸ್ಥಾನ ಬೆಳೆಸಿಕೊಂಡÀಮೇಲೆ.

೯೦ರ ದಶಕದಲ್ಲಿ ಶಾಲಾಕಲಿಕೆಯಲ್ಲಿ ಒಂದು ಧೊಡ್ಡ ಹೊಸ ಅಲೆಯೇ ಬಂದಂಗಾಗಿತ್ತು. ಆಗತಾನೆ ಖಾಸಗಿ ಶಾಲೆಗಳು ಪ್ರಾರಂಭವಾಗುತ್ತಿದ್ದವು. ಅವರ ವ್ಯಾವಹಾರ ಬೆಳೆಯಲೆಂದು ಆಂಗ್ಲಭಾಷೆಯಲ್ಲಿ ಕಲಿಯದೆ ಇದ್ದರೆ ಯಾವ ಉಪಯೋಗವಿಲ್ಲ ಅನ್ನುವ ಭಾವನೆಯನ್ನು ಹುಟ್ಟಿಸಲು ಪ್ರಾರಂಭ ಮಾಡಿದವು. ಪಾಲಕರೂ ಖಾಸಗಿ ಶಾಲೆಯ ಯೊಚನೆಗೆ ಮೊರೆಹೊಗಿ ಎಲ್ಲರೂ ತಮ್ಮ ಮಕ್ಕಳು ಇಂಗ್ಲಿಷ ಮಾಧ್ಯಮದಲ್ಲಿಯೇ ಕಲೆಯಲಿ, ಕಾನವೆಂಟ ಶಾಲೆಗೆ ಹೋಗಲಿ ಎನ್ನುವ ಆಸೆಗೆ ಒಳಬಿದ್ದರು. ಶಾಲೆಯ ಫೀಸ್ ಹೆಚ್ಚಾದರೂ ಪರವಾಗಿಲ್ಲಾ, ಅವರ ಪದ್ದತಿಗಳು ಕಷ್ಟ! ಅದೂ ಪರವಾಗಿಲ್ಲಾ, ಕರ್ಚು ಹೆಚ್ಚು! ಅದೂ ಪರವಾಗಿಲ್ಲಾ. ಸಾಲ ಮಾಡಿಯಾದರೂ, ಜನರ ಮುಂದೆ ಕೈ ಚಾಚಿಯಾದರೂ ಮಕ್ಕಳಿಗೆ ಕಾನ್ವೆಂಟ ಸ್ಕೂಲಿಗೆ ಕಳಿಸಬೇಕು ಅನ್ನುವ ಹಟಕ್ಕೆ ಬಿದ್ದರು. ಸಾಲ ಸೂಲ ಮಾಡಿಯಾದರೂ, ಹಳೆಯ ಶಾಲೆಗಳು ಒಳ್ಳೆಯವು ಅನ್ನುವ ಹಿರಿಯರ ವಿರುಧ್ಧ ಮಾಡಿಯಾದರೂ ಕಾನ್ವೆಂಟ ಶಾಲೆಗೆ ಕಳೆಸುವ ಪ್ರತಿಥಿ ಪ್ರಾರಂಭವಾಯಿತು. ಇಲ್ಲಿಂದ ನಮ್ಮ ಮಾತ್ರುಭಾಷೆಯ ನಿಜವಾದ ಕೊಲೆ ಪ್ರಾರಂಭವಾಯಿತು ಅನ್ನಬಹುದು. ಶಾಲೆಗೆ ಹೋಗುವ ಮಕ್ಕಳಿಗೆ ಏನು ಕಲೆಸುತ್ತಾರೆ ಅನ್ನುವದಕ್ಕಿಂತಾ ಅವರು ಧರಿಸುವ ಬಟ್ಟೆ, ಶೂ ಗಳು, ಟೈ ಗಳ ಪದ್ದತಿ ಹಾಗು ಶಿಸ್ತಿನ ಕಟ್ಟುಪಾಡುಗಳೇ ಹೆಚ್ಚಾಗಿದ್ದವು. ಎಲ್ಲವೂ ಶಾಲೆಯ ಪದ್ದತಿಯ ಪ್ರಕಾರವಿರಬೇಕು. ಮಕ್ಕಳು ಶಾಲೆಯಲ್ಲಿ ಮಾತ್ರುಭಾಷೆ ಮಾತನಾಡಬಾರದು, ಇಂಗ್ಲಿಷನಲ್ಲಿಯೇ ಮಾತನಾಡಬೇಕು. ಇಂಗ್ಲಿಷ ಬಿಟ್ಟು ಬೇರೆ ಮಾತನಾಡಿದರೆ ಅದಕ್ಕೆ ದಂಡಬೇರೆ. ಹೆಣ್ಣುಮಕ್ಕಳು ಕುಂಕುಮ ಇಡಬಾರದು, ಬಳೆ ತೊಡಬಾರದು, ಗೆಜ್ಜೆ ಹಾಕಬಾರದು. ಎಲ್ಲವೂ ನಮ್ಮ ಸಂಪ್ರದಾಯದ ವಿರುಧ್ಧ ಹೊರಟಿದ್ದರೂ ತಂದೆ ತಾಯಂದಿರಿಗೆ ಮಾತ್ರ ಮಕ್ಕಳು ಮಾತನಾಡುವ ಟುಸ್ ಪುಸ್ ಇಂಗ್ಲಿÃಷ ಪದಗಳ ಅಮಲಿನಲ್ಲಿ ತಮ್ಮ ಸಂಸ್ಕçತಿ ಸಾಯುತ್ತಿದೆ ಎನ್ನುವ ಯೊಚನೆಯೇ ಸತ್ತುಹೊಗಿತ್ತು. ಈಗ ಈಗಿನ ಮಕ್ಕಳಿಗೆ ತಮ್ಮ ಸ್ವಂತ ಭಾಷೆಯ ಎಷ್ಟೊ ಸರಳ ಶಬ್ದಗಳೂ ಗೊತ್ತಿಲ್ಲದ ಪರಿಸ್ಥಿತಿ ಬಂದಿದೆ. ಮಕ್ಕಳಿಗೆ ಹೇಳಿ ಕೊಡಬೇಕಾದಂತ ಈಗಿನ ಅಪ್ಪ ಅಮ್ಮಂದಿರ ಪರಿಸ್ಥಿತಿ ಎನೂ ಹೊರತಿಲ್ಲಾ ಈ ವಿಷÀಯದಲ್ಲಿ. ಸ್ವಂತ ತಾಯಿಯನ್ನು ಬಿಟ್ಟು ಪಕ್ಕದ ಮನೆಯವರ ತಾಯಿಯನ್ನು ನಮ್ಮ ತಾಯಿಎಂದು ಎಲ್ಲರೂ ಪೊಶಿಸುತ್ತಿರುವ ನಮ್ಮಂಥ ಮಕ್ಕಳನ್ನು ಹಡೆದ ನಮ್ಮ ಅವ್ವನಿಗೆ ಆಗಬೇಕಾಗಿದ್ದೆ ಈ ಪರಿಸ್ತಿತಿ.

ಮಾತ್ರುಭಾಷೆಯ ಮಹತ್ವ ಮರೆತದ್ದರ ಪರಿಣಾಮಗಳು ಏನು ಎನ್ನುವ ಕಲ್ಪನೆಯೇ ಇರಲಿಲ್ಲಾ. ಮಕ್ಕಳಿಗೆ ನಮ್ಮ ನಮ್ಮ ಭಾಷೆ ಕಲಿಸದ ನಮಗೆ ನಮ್ಮ ಭಾಷೆಯೂ ನಮ್ಮ ಜೊತೆಗೆ ಒಂದು ದಿನ ನಶಿಸಿ ಹೊಗಬಹುದು ಎನ್ನುವ ಯೊಚನೆಯೇ ಬರಲಿಲ್ಲಾ. ಮನೆಯಲ್ಲಿ ನಮ್ಮ ಭಾಷೆಯನ್ನು ಮಾತನಾಡಲು ಹೇಸುವ ನಾವು ಬಾಡಿಗೆಯಲ್ಲಿ ಕಲಿತಿರುವ ಭಾಷೆಯನ್ನು ಅಪ್ಪಿಕೊಂಡ ನಮ್ಮಂಥವರಿಗೆ ಸ್ವಂತ ಭಾಷೆಯ ಅವನತಿ ಕಂಡಿರಲೇಇಲ್ಲಾ. ಆಂಗ್ಲ ಬಾಷೆಯನ್ನು ಅತಿರೇಕವಾಗಿ ಒಪ್ಪಿಕೊಂಡ ನಮಗೆ ಯಾರೇ ಮಾತನಾಡಿಸಿದರೂ ಇಂಗ್ಲಿಷನಲ್ಲಿಯೇ ಉತ್ತರಕೊಡುವ ತೆವಲು ಮತ್ತು ಸೊಕ್ಕು ಬಂದಿದೆ. ಮಕ್ಕಳು ಕೂಡ ಅದನ್ನೆ ಮಾಡುವಹಾಗೆ ಪ್ರೆರೇಪಿಸುತ್ತಿದ್ದೆವೆ. ಈಗಿನ ಮನೆಗಳಲ್ಲಿ ಮಕ್ಕಳು ನೀರು ಕುಡಿಯದೇ ವಾರ‍್ನೆÃ ಕುಡಿಯುತ್ತಿದ್ದಾರೆ. ಸೇಬು ಹಣ್ಣು ಅನ್ನುವದು ಹಣ್ಣಿನ ಹೆಸರು ಎನ್ನುವದು ಮಕ್ಕಳ ತಿಳುವಳಿಕೆಯಲ್ಲಿ ಇಲ್ಲವೇ ಇಲ್ಲಾ. ಗಜ್ಜರಿ ಎನ್ನುವದು ನಾವು ಉಪಯೊಗಿಸುವ ತರಕಾರಿಯ ಹೆಸರು ಎಂದರೆ ಅದು ಹೇಗಿರುತ್ತದೆ ಅನ್ನುವ ಯುವಜನತೆಯನ್ನು ನಮ್ಮ ಮಣ್ಣಲ್ಲಿ ದಿನವೂ ನೋಡುವ ಪರಿಸ್ತಿತಿ ನಮ್ಮದು. ಬನಾನಾ ಅನ್ನುವ ಮಕ್ಕಳಿಗೆ ಬಾಳೆಹಣ್ಣು ನಮ್ಮ ಬಾಷೆಯಲ್ಲಿಯ ಹೆಸರು ಎನ್ನುವುದರ ಪರಿಕಲ್ಪನೆಯೂ ಇಲ್ಲಾ. ಹಾಗೆ ಹೇಳುತ್ತ ಹೊರಟರೆ ನಾವು ದಿನಾಲೂ ಉಪಯೋಗಿಸುವ ಮಾತುಕಥೆಗಳಲ್ಲಿ ನಮ್ಮ ಭಾಷೆಯ ಶಬ್ದಗಳಿಗಿಂತ ಬಾಡಿಗೆ ಭಾಷೆಯ ಶಬ್ದಗಳೇ ಹೆಚ್ಚಿಗೆ ಎನ್ನಬಹುದು. ಇದೆಲ್ಲದರ ಕಾರಣವೇನು ಅಂತ ಕುಳಿತು ಯೊಚಿಸಿದರೆ ಬರುವ ಕಾರಣಗಳ ಪಟ್ಟಿಗಳಲ್ಲಿ ಒಂದು ಅಥವಾ ಎರಡು ಕಾರಣಗಳು ಮಾತ್ರ, ಅದೂ ನಮ್ಮ ನಿಯಂತ್ರಣದಲ್ಲಿ ಇದ್ದಂಥ ವಿಷಯಗಳ ಬಗ್ಗೆ ನಮ್ಮ ಅಲಕ್ಷತನದಿಂದ ಆದ ತಪ್ಪುಗಳಿಂದ ಮಾತ್ರ ಅನ್ನಬಹುದು.

ಮಾತ್ರುಭಾಷೆಯಲ್ಲಿ ಕಲಿಯುವುದರಿಂದ ಎಷ್ಟು ಲಾಭಗಳು ಎಂದು ಸರಳವಾಗಿ ನಮ್ಮ ದಿನಚರಿಯ ಪ್ರಕಾರ ನೋಡಿದರೂ ತಿಳಿಯಬಹುದು. ಂ ಜಿoಡಿ ಚಿಠಿಠಿಟe ಅನ್ನದೇ “ಅ!! ಅಡಿಕೆ” ಎಂದು ಕಲಿಸಿದರೆ ಮಕ್ಕಳಿಗೆ ಅಜ್ಜ ಅಜ್ಜಿ ಊಟ ಆದಮೇಲೆ ತಿನ್ನುವ ಅಡಿಕೆ! ಎನ್ನುವದು ಹೇಳದೇನೇ ಪರಿಕಲ್ಪನೆಯಲ್ಲಿ ಚಿತ್ರಣಗೊಂಡ, ಅಡಿಕೆ ಅನ್ನುವ ಶಬ್ದವನ್ನು ಜೀವನ ರ‍್ಯಂತ ಮರೆಯಲು ಸಾಧ್ಯವಿಲ್ಲಾ ಎನ್ನುವಷ್ಟು ಸರಳವಾಗಿ ಕಲೆತುಬಿಡುತ್ತಾರೆ. ಊಟ ಎಂದರೆ ಎಲ್ಲರೂ ಕುಳಿತು ಹರಟೆ ಹೊಡೆಯುತ್ತ ಸಂಬ್ರಮಿಸಿ ಊಟಮಾಡುವದು ಎನ್ನುವ ಮಗುವಿಗೆ ಟuಟಿಛಿh, ಜiಟಿಟಿeಡಿ ಎನ್ನುವ ದ್ವಿಮನಸ್ಸಿನ ಪರಿಸ್ತಿತಿ ಬೇಕಾಗೇ ಇಲ್ಲಾ. ಸೇಬು ಎನ್ನುವ ಆ ಶಬ್ದದಲ್ಲಿಯೇ ಒಂದು ಗೊಲಾಕಾರ ಅನ್ನುವಹಾಗೆ ಉದ್ಗಾರವಿದೆ, ಆ ಶಬ್ದ ಕೇಳಿದ ಮಗು ಆ ಆಕಾರ ಕಂಡರೆ ಸೇಬು ಎಂದು ತನಗೆ ತಿಳಿಯದೇ ಉಚ್ಚಾರಿಸುವಷ್ಟು ಸರಳ ಆ ಮಗುವಿಗೆ ತನ್ನ ಭಾಷೆಯಲ್ಲಿ ಕಲಿಯುವುದು. ಅಜ್ಜ ಅಜ್ಜಿಯಂದಿರ ಜೋತೆ ಹೆಚ್ಚು ಸಮಯ ಕಳೆಯುವ ಈಗಿನ ಮಕ್ಕಳಿಗೆ ಅಜ್ಜ ಅಜ್ಜಿ ಮಾತನಾಡುವ ಸರಳ ಭಷೆಯಲ್ಲಿ ಶಾಲೆ ಕಲೆತರೆ ಶಾಲೆಯಲ್ಲಿ ಹೇಳುವ ಆ ಶಬ್ದಗಳು ಮನೆಯಲ್ಲಿ ಮಾತನಾಡುವ ಶಬ್ದಗಳು ಒಂದೇ ಆದರೆ ಆ ಮಗುವಿನ ಜೀವನ ಎಷ್ಟು ಸರಳ ವಾಗಬಹುದು ಎನ್ನುವದು ಯಾರೂ ಹೇಳಬೇಕಾದ ವಿಷಯವಲ್ಲ. ಮಾತ್ರುಭಾಷೆಯಲ್ಲಿ ಸಿಗುವ ಆ ಸ್ವಂತತೆ ಆ ಸ್ವಾಭಿಮಾನ ಹಾಗು ಆ ಶ್ರಧ್ಧೆ ಬೇರೆ ಭಾಷೆಯನ್ನು ಸ್ವಂತಿಸಿಕೊಂಡಾಗ ಸಿಗಲು ಸಾಧ್ಯಾವೇ ಇಲ್ಲಾ. ಕಲಿಕೆಯಲ್ಲಿ ಸರಳತೆ ಹಾಗು ಆಸಕ್ತಿ ಕಂಡರೆ ಶಾಲೆಯಲ್ಲಿಯ ಹಾಜರಿ ಹಾಗು ತಲ್ಲಿÃನತೆ ಹೇಳದೇನೆ ಹೆಚ್ಚಾಗಿ ಮಕ್ಕಳ ವಿದ್ಯಾಭ್ಯಾಸದ ಮಟ್ಟವೇ ಆಕಾಶಕ್ಕೆರುತ್ತದೆ. ತಮ್ಮ ಸ್ವಂತ ಭಷೆಯಲ್ಲಿ ಕಲಿತ ಮಗುವಿನ ಆತ್ಮವಿಶ್ವಾಸ ಬೆರೆ ಭಾಷೆಯಲ್ಲಿ ಕಲಿತ ಮಗಿವಿಗಿಂತ ಹೆಚ್ಚಾಗಿ ಇರತ್ತದೆ ಎನ್ನುವದು ಎಷ್ಟೊÃ ರಿಸರ್ಚಗಳಲ್ಲಿ ಕೂಡ ತಿಳಿದುಬಂದಿದೆ. ನಮ್ಮ ಅಕ್ಕ ಪಕ್ಕದ ಬಹು ದೇಶಗಳಲ್ಲಿ ಇಲ್ಲಿಯವರೆಗೂ ತಮ್ಮ ತಮ್ಮದೇಯಾದ ಮಾತ್ರುಭಾಷೆಯಲ್ಲಿ ಪಾಠದ ರೂಢಿ ಇದೆ. ಮಾತ್ರುಭಾಷೆಯಲ್ಲಿ ಕಲೆತಿರುವ ಚೈನಾ, ಜಪಾನ, ಜೆರ್ಮನಿ, ರಶಿಯಾ ದೇಶಗಳಲ್ಲಿಯ ಮಕ್ಕಳ ಕಲಿಕೆಯ ಪದ್ದತಿ ಮಕ್ಕಳಿಗೆ ನೋಯಿಸುವ ಬದಲು ಮಕ್ಕಳು ಆಟವಾಡುತ್ತ ಪಾಠವನ್ನು ಕಲೆಯುವ ಸೌಕರ್ಯವನ್ನು ತಂದುಕೊಟ್ಟಿದೆ. ಇದೆಲ್ಲಾ ಸಾಧ್ಯವಗಿದ್ದು ಅಲ್ಲಿ ಮಾತ್ರುಭಾಷೆಯಲ್ಲಿಯೇ ಶಾಲಾ ವ್ಯವಸ್ತೆ ಇದ್ದಿದ್ದರಿಂದ. ಎಷ್ಟೊ ದೇಶಗಳು ತಮ್ಮ ಭಾಷೆಯನ್ನು ಅಪ್ಪಿಕೊಂಡು ಉದ್ದಾರವಾಗಲು ಸಾಧ್ಯವಾದಾಗ ನಮಗೆ ಏಕೆ ಈ ಬಾಡಿಗೆ ಭಾಷೆಯ ಸೋಗೋ ತಿಳಿಯದ ವಿಷಯವಾಗಿದೆ.

ನಮ್ಮ ಭಾಷೆಯಲ್ಲಿ ಇದ್ದ ಸಾಹಿತ್ಯ ಶ್ರಿÃಮಂತಿಕೆ, ಪ್ರಶಸ್ತಿಗಳ ಸುರಿಮಳೆ, ವಿದ್ವಾಂಸರ ಮಾತುಗಳು ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿದ್ದ ಹೊಸ ಹೊಸ ಸಂಶೊದನೆಗಳು ಎಲ್ಲವೂ ನಶಿಸಿ ಹೊಗುತ್ತಿವೆ. ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಅನ್ನುವ ಹಾಗೆ ಇಂದಿನ ಕನ್ನಡ ವಿದ್ಯಾರ್ಥಿಗಳು ಮುಂದಿನ ವಿದ್ವಾಂಸರು ಅಥವಾ ಸಂಶೋಧಕರು ಅಥವಾ ಸಾಹಿತಿಗಳು ಆಗಬಹುದು ಎನ್ನುವ ಆಸೆ ಇರುತ್ತದೆ. ನಾವು ನಮ್ಮ ಮಕ್ಕಳಿಗೆ ನಮ್ಮ ಭಾಷೆಯನ್ನು ಕಲಿಸದೆ ಬೇರೆ ಭಾಷೆಯಲ್ಲಿ ಪರಿಣಿತಿ ಕೊಡಿಸಿದರೆ ನಮ್ಮ ಭಾಷೆಯ ಸಾಹಿತಿಗಳು ಹುಟ್ಟುವ ಮೊದಲೇ ಸತ್ತುಹೋದಂತಾಗುತ್ತದೆ. ಮೊದಲೇ ಮೊಬೈಲಿನ ಹೊಸ ಹುರುಪಿನ ಹೊಸ ಚಟದ ಹಿಂದೆ ಪುಸ್ತಕ ಓದುವ ಜನರೇ ಕಡಿಮೆ, ಅದರಲ್ಲಿ ಕೈಯಲ್ಲಿ ಇಂಗ್ಲಿಷ ನಾವೆಲ್ ಗಳನ್ನು ಹಿಡಿದುಕೊಂಡು ಒಡಾಡುವ ಕೆಲ ಯುವಜನರು. ಹೀಗೇ ಮುಂದೊರೆದರೆ ಮುಂದೊಂದು ದಿನ ನಮ್ಮ ಭಾಷೆಯ ಪುಸ್ತಕಗಳು ಬರೀ ರದ್ದಿ ಅಂಗಡಿ ಅಥವಾ ಸಂಗ್ರಹಾಲಯಗಳಲ್ಲಿ ನೋಡುವ ಪರಿಸ್ತಿತಿ ಬಂದರು ಬರಬಹುದು. ಇವತ್ತಿನ ತಿಳಿದಿರುವ ಪರಿಸ್ತಿತಿ ಪ್ರಕಾರ ಬರೀ ಕನ್ನಡದಲ್ಲಿ ಪುಸ್ತಕ ಪ್ರಕಾಶನ ಮಾಡುತ್ತಿರುವ ಪ್ರಕಾಶಕರು ಕನ್ನಡ ಪುಸ್ತಕಗಳನ್ನು ಮಾರಲು ಆಗದೆ ಪ್ರಕಾಶನ ಮಾಡುವದನ್ನೆ ನಿಲ್ಲಿಸಿರುವ ಉದಾಹರಣೆಗಳು ಇವೆ. ನಮ್ಮ ಭಾಷೆಯಲ್ಲಿ ಓದುವ ಹವ್ಯಾಸ ಉಳಿಸಿಕೊಂಡರೆ ನಾವು ಕಲೆತ ಭಾಷೆಯಲ್ಲಿ ಓದುವ ಆ ಸುಖ ಹಾಗು ಆ ಖುಷಿಯನ್ನು ಮುಂದಿನ ಪೀಳಿಗೆಗಳಿಗೆ ಅನುಭವಿಸುವ ಪುಣ್ಯ ಸಿಗಬಹುದು.

ಕನ್ನಡಂ ಗೆಲ್ಗೆ, ಕನ್ನಡಂ ಬಾಳ್ಗೆ..
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಬೌಮ.
ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ..
ಇವೆಲ್ಲಾ ಮೇಲಿನ ಸಾಲುಗಳು ನಿಜವಾಗಿ ಉಳಿಯಲಿ, ಉಳಿಸಲು ಜೀವನ ಪೂರ್ತಿ ಕನ್ನಡ ಕಲಿಯೋಣ, ಕಲಿಸೋಣ, ಕನ್ನಡ ಮಾತಾಡೋಣ.
ವಿಕಾಸ ಕುಲ್ಕರ್ಣಿ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top