fbpx
ಸಮಾಚಾರ

‘ಭಾರತದ ಆರ್ಥಿಕತೆ ದುರ್ಬಲಗೊಳ್ಳಲು ಮೊಘಲರು, ಬ್ರಿಟಿಷರೇ ಕಾರಣ’ ಯೋಗಿ ಆದಿತ್ಯನಾಥ್

ಭಾರತದ ಆರ್ಥಿಕತೆ ದಿನೇ ದಿನೇ ಕುಸಿಯುತ್ತಿದ್ದು, ಅನೇಕ ಮಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಹೀಗಿರುವಾಗ ಭಾರತದ ಆರ್ಥಕತೆ ಕುಸಿಯಲು ಮೊಘಲರು ಹಾಗೂ ಬ್ರಿಟಿಷರೇ ಕಾರಣ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ದೂರಿದ್ದಾರೆ.

ಮುಂಬಯಿಯಲ್ಲಿ ವಿಶ್ವ ಹಿಂದೂ ಆರ್ಥಿಕ ವೇದಿಕೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಮೊಘಲರ ಆಗಮನಕ್ಕು ಮುನ್ನ ಭಾರತವು ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿಯಾಗಿತ್ತು. ಮೊಘಲರು ಭಾರತಕ್ಕೆ ಬರುವ ಹೊತ್ತಿಗೆ ವಿಶ್ವದ ಆರ್ಥಿಕತೆಯ ಮೂರನೇ ಒಂದು ಭಾಗದಷ್ಟು ಪಾಲನ್ನು ಅಂದರೆ 36% ಸಂಪತ್ತನ್ನು ಹೊಂದಿತ್ತು. ಆದರೆ ಬ್ರಿಟಿಷರು ಬರುವ ಹೊತ್ತಿಗೆ ಇದು 20%ಕ್ಕೆ ಇಳಿಯಿತು, ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಹೇಳಿದ್ದಾರೆ.

ಅಲ್ಲದೇ ‘ಭಾರತದಲ್ಲಿ 200 ವರ್ಷ ಆಳ್ವಿಕೆ ನಡೆಸಿದ ಬ್ರಿಟಿಷರು ಭಾರತರ ಆರ್ಥಿಕತೆಯನ್ನು ಬಹಳಷ್ಟು ದುರ್ಬಲಗೊಳಿಸಿದರು. ಅವರು ದೇಶ ಬಿಟ್ಟು ತೆರಳುವಷ್ಟರಲ್ಲಿ ಇದನ್ನು ಕೇವಲ ಶೇ. 4% ಕ್ಕೆ ಇಳಿಸಿದರು’ ಎಂದೂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

ಮುಂದಿನ ವರ್ಷಗಳಲ್ಲಿ ಉತ್ತರ ಪ್ರದೇಶ ರಾಜ್ಯವೊಂದನ್ನೇ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿಸುವುದಾಗಿ ಇತ್ತೀಚೆಗೆ ಆದಿತ್ಯನಾಥ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top