fbpx
ಸಮಾಚಾರ

ಯಶ್ ಮತ್ತು ದರ್ಶನ್ ಹಾದಿಯಲ್ಲಿ ಸಾಗಿದ ಅಭಿಷೇಕ್ ಅಂಬರೀಷ್

ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ತಮ್ಮ ಅಭಿಮಾನಿಗಳಲ್ಲಿ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಅಭಿಷೇಕ್ ಬರ್ತಡೇ ಸಮೀಪಿಸುತ್ತಿದ್ದು ಮುಂದಿನ ತಿಂಗಳು ಆಕ್ಟೋಬರ್ 3ಕ್ಕೆ ಹುಟ್ಟುಹಬ್ಬ. ಈ ಹಿನ್ನಲೆಯಲ್ಲಿ ಈಗಾಗಲೆ ಅಭಿಮಾನಿಗಳು ಅಭಿಷೇಕ್ ಬರ್ತಡೆಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಬರ್ತಡೇ ವಿಚಾರವಾಗಿ ಅಭಿಷೇಕ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

 

 

” ಸುವರ್ಣ ಕರ್ನಾಟಕ ಎಲ್ಲ ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳಿಗೆ ಮತ್ತು ಸ್ವಾಭಿಮಾನಿ ಮಂಡ್ಯದ ಮಹಾಜನತೆಗೆ ನನ್ನ ಪ್ರೀತಿಯ ನಮಸ್ಕಾರ. ಇದು ನನ್ನ ಒಂದು ಸಣ್ಣ ಮನವಿ. ನನ್ನ ತಂದೆಗೆ ಎಷ್ಟು ಪ್ರೀತಿ ಕೊಟ್ಟಿದ್ದೀರೋ ನನಗೂ ಅಷ್ಟೇ ಪ್ರೀತಿ ಕೊಟ್ಟು ಇಲ್ಲಿಯವರೆಗೂ ಬೆಳೆಸುತ್ತ ಬಂದಿದ್ದೀರಿ. ಚಿಕ್ಕಂದಿನಿಂದ ಇಲ್ಲಿಯವರೆಗೆ ಪ್ರತೀ ವರ್ಷ ತಮ್ಮ ತಮ್ಮ ಊರುಗಳಿಂದ ನನ್ನ ಹುಟ್ಟುಹಬ್ಬಕ್ಕೆ ಬಂದು, ಆಶೀರ್ವಾದ ಮಾಡಿ ಹಾರೈಸಿದ್ದೀರಿ. ನಿಮ್ಮ ಈ ಪ್ರೀತಿ, ಅಭಿಮಾನಕ್ಕೆ ನಮ್ಮ ಕುಟುಂಬ ಸದಾ ಚಿರಋಣಿ. ಆದರೆ ಈ ವರ್ಷ ನನ್ನ ತಂದೆ ದಿವಂಗತರಾಗಿರುವುದರಿಂದ ನನ್ನ ಹುಟ್ಟುಹಬ್ಬವನ್ನು ಆಚರಿಸುವ ಬದಲು, ನಾವೆಲ್ಲರೂ ನಮ್ಮ ನಮ್ಮ ಊರುಗಳಲ್ಲಿ ಅಥವಾ ನಮ್ಮ ನಿವಾಸಗಳ ಹತ್ತಿರ ರೆಬೆಲ್ ಸ್ಟಾರ್ ಅಂಬರೀಶ್ ಹೆಸರಿನಲ್ಲಿ ಗಿಡ ನೆಟ್ಟು, ಅವರಿಗೆ ಗೌರವ ಸಲ್ಲಿಸೋಣ. ಇದರ ಮೂಲಕ ಅವರ ನೆನಪು ನಮ್ಮೊಂದಿಗೆ ಸದಾ ಇರಲಿ. ಇದು ತಮ್ಮಲ್ಲಿ ನನ್ನ ವಿನಂತಿ. ಇಂತಿ ನಿಮ್ಮ ಪ್ರೀತಿಯ ಅಭಿ” ಎಂದು ಅಭಿಷೇಕ್ ಅಂಬರೀಶ್ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅನೇಕ ನಟರು ಸಹ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ಈಗ ಅದೆ ಸಾಲಿಗೆ ನಟ ಅಭಿಷೇಕ್ ಅಂಬರೀಶ್ ಕೂಡ ಸೇರಿದ್ದಾರೆ. ವಿಶೇಷ ಅಂದರೆ “ನನ್ನ ಸಹೋದರರಾದ ದರ್ಶನ್ ತೂಗುದೀಪ್ ಮತ್ತು ಯಶ್, ಪ್ರಜ್ವಲ್ ದೇವರಾಜ್ ಅವರಿಂದ ಸ್ಫೂರ್ತಿಗೊಂಡು ಈ ನಿರ್ಧಾರ ತೆಗೆದುಕೊಂಡಿದ್ದೇನೆಂದು” ಅಭಿಷೇಕ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top